ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಭಾರತೀಯ ಮಾರುಕಟ್ಟೆಯಲ್ಲಿ ಪರ್ಫಾಮೆನ್ಸ್ ಬೈಕ್‌ಗಳು ಇತ್ತೀಚೆಗೆ ಹೆಚ್ಚು ಜನಪ್ರಿಯತೆಗಳಿಸುತ್ತಿದೆ. ಇದರೊಂದಿಗೆ ಹಲವರು ಹೈ ಪರ್ಫಾಮೆನ್ಸ್ ಸ್ಕೂಟರ್‌ಗನ್ನು ಇಷ್ಟಪಡುತ್ತಾರೆ. ಹೈ ಪರ್ಫಾಮೆನ್ಸ್ ಸ್ಕೂಟರ್ ಪ್ರಿಯರಿಗಾಗಿ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಟಿವಿಎಸ್ ಎನ್‌ಟಾರ್ಕ್ 125

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಉತ್ತಮ ಪರ್ಫಾಮೆನ್ಸ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಈ ಸ್ಕೂಟರ್ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬೆಲೆಯು ರೂ.99,471 ಆಗಿದೆ. ಟಿವಿಎಸ್ ಮೋಟಾರ್ ಕಂಪನಿಯ ಜನಪ್ರಿಯ ಎನ್‌ಟಾರ್ಕ್ 125 ಸ್ಕೂಟರ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿ ಇತ್ತೀಚೆಗೆ ಹೊಸ ಮೈಲಿಗಲ್ಲು ದಾಖಲಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಮಾರಾಟದಲ್ಲಿ 1 ಲಕ್ಷ ಯುನಿಟ್ ಗಡಿ ದಾಟಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ನಲ್ಲಿ 124 ಸಿಸಿ ಫ್ಯೂಯಲ್-ಇಂಜೆಕ್ಟ್ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 9.1 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನ 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಈ ಎನ್‌ಟಾರ್ಕ್ 125 ಸ್ಕೂಟರ್ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ, ಇದು ಕಂಪನಿಯ ಸ್ಮಾರ್ಟ್ ಎಕ್ಸ್ ಕನೆಕ್ಟ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಫೀಚರ್ ಮೂಲಕ ಸ್ಮಾರ್ಟ್ ಫೋನ್ ಅನ್ನು ಬ್ಲೂಟೂತ್ ಮೂಲಕ ಸ್ಕೂಟರ್'ಗೆ ಕನೆಕ್ಟ್ ಮಾಡಿ ಹಲವಾರು ಫೀಚರ್ಸ್ ಗಳನ್ನು ಬಳಸಬಹುದು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಎಪ್ರಿಲಿಯಾ ಎಸ್ಆರ್ 160

ಇದು ಭಾರತದ ಮೊದಲ ಪರ್ಫಾರ್ಮೆನ್ಸ್ ಸ್ಕೂಟರ್. ಇದನ್ನು ಮೊದಲು 150 ಸಿಸಿ ಎಂಜಿನ್‌ನೊಂದಿಗೆ ಪರಿಚಯಿಸಲಾಯಿತು. ಈಗ ಇದು ಬಿಎಸ್-6 ಅಪ್‌ಡೇಟ್‌ನ ನಂತರ 160 ಸಿಸಿ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದೆ. ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ ಬೆಲೆಯು ರೂ,1,36,441 ಗಳಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಈ ಸ್ಕೂಟರ್ 90 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಆದರೆ ಸ್ಕೂಟರ್ ಕ್ವೀಕ್ ಅಕ್ಸಿಲೇರಷನ್ ಅನ್ನು ಹೊಂದಿದೆ. ಇನ್ನು ಇದರಲ್ಲಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಇಂಧನ-ಇಂಜೆಕ್ಟ್ 160 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7600 ಆರ್‌ಪಿಎಂನಲ್ಲಿ 10.8 ಬಿಹೆಚ್‍ಪಿ ಪವರ್ ಮತ್ತು 6000 ಆರ್‌ಪಿಎಂನಲ್ಲಿ 11.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಇನ್ನು ಈ ಸ್ಕೂಟರ್ ಕಾಂಬೈಡ್ ಬ್ರೇಕಿಂಗ್ ಸಿಸ್ಟಂ(ಸಿಬಿಎಸ್) ಅನ್ನು ಸಹ ಹೊಂದಿದೆ. ಹೊಸ ಎಪ್ರಿಲಿಯಾ ಎಸ್ಆರ್ 160 ಸ್ಕೂಟರ್ 12-ಇಂಚಿನ ಅಲಾಯ್ ವ್ಹೀಲ್‌ಗಳ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಇದು ಸ್ಕೂಟರ್‌ಗೆ ಉತ್ತಮ ನಿರ್ವಹಣಾ ಸಾಮರ್ಥ್ಯವನ್ನು ನೀಡುತ್ತದೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಎಸ್‌ಆರ್‌ನಂತೆಯೇ ಅದೇ ಎಂಜಿನ ಅನ್ನು ಹೊಂದಿದೆ. ಆದರೆ ವಿಭಿನ್ನ ಸ್ಟೈಲಿಂಗ್ ಹೊಂದಿದೆ. ಈ ಸ್ಕೂಟರ್ ಪರ್ಫಾಮೆನ್ಸ್ ಜೊತೆಗೆ ಆರಾಮದಾಯಕ ರೈಡಿಂಗ್ ಅನುಭವವನ್ನು ನೀಡುತ್ತದೆ. ಈ ಸ್ಕೂಟರ್ ಬೆಲೆಯು ರೂ.1,52,081 ಗಳಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ನಲ್ಲಿ ಡ್ಯುಯಲ್ ಎಲ್‌ಇಡಿ ಹೆಡ್‌ಲೈಟ್, ಡ್ಯುಯಲ್ ಎಲ್‌ಇಡಿ ಟೇಲ್ ಲೈಟ್ ಕ್ಲಸ್ಟರ್‌ಗಳಿವೆ. ಇನ್ನು ಇದರಲ್ಲಿ ದೊಡ್ಡ ಗಾತ್ರದ ವಿಂಡ್‌ಸ್ಕ್ರೀನ್ ಸಿಸ್ಟಂ, ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಸೀಟಿನ ಕೆಳಗಿರಿಸಲಾಗಿದೆ.

ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಎಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಸ್ಕೂಟರ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ತಂತ್ರಜ್ಙಾನವನ್ನು ಒಳಗೊಂಡಿದೆ. ಈ ಸ್ಕೂಟರಿನ ಸೈಡ್ ಹಾಗೂ ಹಿಂಭಾಗದಲ್ಲಿರುವ ಸ್ಟೈಲಿಶ್ ಲುಕ್‍‍ನ ಬಾಡಿ ಗ್ರಾಫಿಕ್ಸ್ ಹಾಗೂ ಡಿಸೈನ್‍‍ಗಳು ಸಹ ಈ ಮ್ಯಾಕ್ಸಿ ಸ್ಕೂಟರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.

Most Read Articles

Kannada
English summary
3 high Performance Scooters In India Details. Read In Kannada.
Story first published: Wednesday, May 26, 2021, 17:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X