ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಬಜಾಜ್ ಆಟೋ ಇತ್ತೀಚೆಗೆ ನವೀಕರಿಸಿದ ಡೋಮಿನಾರ್ 400 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ ಅನ್ನು ಹಿಂದಿನ ಮಾದರಿಗೆ ಹೋಲಿಸಿದರೆ ಹಲವು ನವೀಕರಣಗಳನ್ನು ಪಡೆದುಕೊಂಡಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಬಜಾಜ್ ಡೋಮಿನಾರ್ 400 ಬೈಕ್ ಯಾವಾಗಲೂ ಅದ್ಭುತವಾದ ಟೂರಿಂಗ್ ಬೈಕ್ ಆಗಿದೆ, ಹೊಸ ಬದಲಾವಣೆಗಳೊಂದಿಗೆ ಇದು ಇನ್ನಷ್ಟು ಉತ್ತಮವಾಗಿದೆ. ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ ಟೂರಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಫ್ಯಾಕ್ಟರಿ-ಫಿಟೆಡ್ ಟೂರಿಂಗ್ ಅಕ್ಸೆಸರೀಸ್‍ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹಿಂದಿನ ಮಾದರಿಯಲ್ಲಿನ ಬದಲಾವಣೆಗಳು ಮತ್ತು ಹೋಲಿಕೆಗಳನ್ನು ಒಳಗೊಂಡಂತೆ ನವೀಕರಿಸಿದ ಬಜಾಜ್ ಡೋಮಿನಾರ್ 400 ಕುರಿತು ನೀವು ತಿಳಿದುಕೊಳ್ಳಬೇಕಾದ ಪ್ರಮುಖ ವಿಶೇಷತೆಗಳ ಮಾಹಿತಿ ಇಲ್ಲಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಟೂರಿಂಗ್ ಕಿಟ್

ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ CFD ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸಲಾದ ಎತ್ತರದ ವಿಂಡ್‌ಶೀಲ್ಡ್‌ನೊಂದಿಗೆ ಬರುತ್ತದೆ. ಇದು ಗಾಳಿಯಿಂದ ರಕ್ಷಣೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ ಮತ್ತು ಹೀಗಾಗಿ ರೈಡರ್ ಸೌಕರ್ಯವನ್ನು ಸುಧಾರಿಸುತ್ತದೆ. 2022ರ ಬಜಾಜ್ ಡೋಮಿನಾರ್ 400 ಬೈಕ್ ಫ್ಲೆಕ್ಸಿ-ವಿಂಗ್‌ಲೆಟ್‌ಗಳೊಂದಿಗೆ ಜೆಟ್-ಫೈಟರ್ ಪ್ರೇರಿತ ಹ್ಯಾಂಡ್‌ಗಾರ್ಡ್ ಅನ್ನು ಹೊಂದಿದೆ, ಇದು ಗರಿಷ್ಠ ಗಾಳಿಯಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಈ ಬೈಕ್ ಫ್ಯಾಕ್ಟರಿ-ಫಿಟೆಡ್ ಟೂರಿಂಗ್ ಕಿಟ್‌ನೊಂದಿಗೆ ಬರುತ್ತದೆ, ಇದರಲ್ಲಿ ಎತ್ತರದ ವಿಂಡ್‌ಸ್ಕ್ರೀನ್, ಹ್ಯಾಂಡ್‌ಗಾರ್ಡ್‌ಗಳು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ನ್ಯಾವಿಗೇಷನ್ ಸಾಧನಗಳಿಗೆ ಸಂಯೋಜಿತ ಮೌಂಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿದೆ. ಹಿಂಭಾಗದ ತುದಿಯಲ್ಲಿ ಲಗೇಜ್ ಕ್ಯಾರಿಯರ್ ಅನ್ನು ಸೇರಿಸಲಾಗಿದೆ, ಜೊತೆಗೆ ಪಿಲಿಯನ್‌ಗೆ ಸಣ್ಣ ಬ್ಯಾಕ್ ರೆಸ್ಟ್ ಅನ್ನು ಸಹ ಸೇರಿಸಲಾಗಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಆಯ್ಕೆಯ ಆಕ್ಸೆಸರೀಸ್ ಸ್ಯಾಡಲ್‌ಬ್ಯಾಗ್‌ಗಳಿಗೆ ಸ್ಯಾಡಲ್ ಸ್ಟೆ ಅನ್ನು ಒಳಗೊಂಡಿರುತ್ತವೆ, ಇವುಗಳು ಒಂದು ಇಂಜಿಗ್ರೇಟೆಡ್ ಮೆಟಲ್ ಸ್ಕಿಡ್ ಪ್ಲೇಟ್ನೊಂದಿಗೆ ಹೊಸ ಎಂಜಿನ್ ಬ್ಯಾಷ್ ಪ್ಲೇಟ್ ಅನ್ನು ಒಳಗೊಂಡಿವೆ. ಈ ಹೊಸ ಬೈಕಿನಲ್ಲಿ ಉತ್ತಮ ಕ್ರ್ಯಾಶ್ ರಕ್ಷಣೆಗಾಗಿ ಹೊಸ ಲೆಗ್ ಗಾರ್ಡ್ ಅನ್ನು ಹೊಂದಿದೆ. ಇದು ಅಚ್ಚುಕಟ್ಟಾಗಿ ಸಂಯೋಜಿತ ಅಲ್ಯೂಮಿನಿಯಂ ಬಿಲ್ಡ್ ನ್ಯಾವಿಗೇಷನ್ ಸ್ಟೇ ಅನ್ನು ಪಡೆಯುತ್ತದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಫೀಚರ್ಸ್

ಹೊಸ ಬಜಾಜ್ ಡೋಮಿನಾರ್ 400 ಬೈಕಿನ ಇತರ ಪ್ರಮುಖ ಲಕ್ಷಣಗಳೆಂದರೆ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ ಆನ್, ಪೊಸಿಷನ್ ಲ್ಯಾಂಪ್, ಲೋ ಬೀಮ್ ಮತ್ತು ಹೈ ಬೀಮ್ ಅನ್ನು ಒಳಗೊಂಡಿದೆ. ಅಂತರ್ನಿರ್ಮಿತ ಸ್ಟೇರ್ಪ್ಸ್ ಸಹ ಒದಗಿಸಲಾಗಿದೆ, ಇದು ಬೈಕಿನ ಟೂರಿಂಗ್ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಈ ಬೈಕ್ ವಿಶಾಲವಾದ ಹ್ಯಾಂಡಲ್‌ಬಾರ್‌ಗಳೊಂದಿಗೆ ಆರಾಮದಾಯಕ, ನೇರವಾದ ಸವಾರಿ ನಿಲುವನ್ನು ಹೊಂದಿದೆ, ಇದು ದೂರ ಪ್ರವಾಸದ ಉದ್ದೇಶಗಳಿಗೆ ಸೂಕ್ತವಾಗಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಬಣ್ಣಗಳು

ಹೊಸ ಡೋಮಿನಾರ್ 400 ಬೈಕ್ ಅರೋರಾ ಗ್ರೀನ್ ಮತ್ತು ಚಾರ್ಕೋಲ್ ಬ್ಲಾಕ್ ಎಂಬ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇನ್ನು ಈ ಹೊಸ ಡೋಮಿನಾರ್ 400 ಬೈಕ್ ಎರಡೂ ಬಣ್ಣದ ಆಯ್ಕೆಗಳು ಬೈಕಿನ ಶಕ್ತಿಯುತ ಸಿಲೂಯೆಟ್‌ಗೆ ಸೂಕ್ತವಾಗಿವೆ. ಚಾರ್ಕೋಲ್ ಬ್ಲಾಕ್ ರೂಪಾಂತರವು ಆಕರ್ಷಕವಾದ ಹೊಂದಿದ್ದರೆ, ಅರೋರಾ ಗ್ರೀನ್ ರೂಪಾಂತರವು ಹೆಚ್ಚು ಉತ್ಸಾಹಭರಿತ ಮತ್ತು ರೋಮಾಂಚನಕಾರಿಯಾಗಿ ಕಾಣುತ್ತದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಎಂಜಿನ್

2022ರ ಡೋಮಿನಾರ್ 400 ಬೈಕಿನ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳೊಂದಿಗೆ ಹೊಂದಿಲ್ಲ.ಇದರಲ್ಲಿ ಅದೇ 373.3cc ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ DOHC ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 40 ಬಿಹೆಚ್‍ಪಿ ಪವರ್ ಮತ್ತು 35 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಸಸ್ಪೆಂಕ್ಷನ್

ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಯುಸಎಸ್ಡಿ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ, ಹಿಂದಿನ ಮಾದರಿಗೆ ಹೋಲಿಸಿದರೆ ಸಸ್ಪೆಂಕ್ಷನ್ ಸೆಟಪ್ ಯಾವುದೇ ಬದಲಾವಣಗೆಳನ್ನು ಕಂಡಿದೆ,

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಬ್ರೇಕಿಂಗ್ ಸಿಸ್ಟಂ

ಇನ್ನು ಪ್ರಮುಖವಾಗಿ ನವೀಕರಿಸಿದ ಡೋಮಿನಾರ್ 400 ಟೂರಿಂಗ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಡಿಸ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ. ಇನ್ನು ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನ್ ಒಳಗೊಂಡಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ಇನ್ನು ಬಜಾಜ್ ಆಟೋ ಕಂಪನಿಯು ಡೋಮಿನಾರ್ 250 ಬೈಕ್ ಅನ್ನು ಇತ್ತೀಚೆಗೆ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಳಿಸಿತ್ತು, ಡೋಮಿನಾರ್ 400 ಮಾದರಿಯನ್ನು ಆಧರಿಸಿರುವ ಡೋಮಿನಾರ್ 250 ಮಾದರಿಯು ಕ್ಯಾನಿಯಾನ್ ರೆಡ್ ಮತ್ತು ಚಾರ್ಕೊಲ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿತ್ತು. ಇತ್ತೀಚೀಗೆ ಹೊಸದಾಗಿ ಡ್ಯುಯಲ್ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಡ್ಯುಯಲ್ ಟೋನ್ ಮಾದರಿ ಆಕರ್ಷಕ ಲುಕ್ ಅನ್ನು ಹೊಂದಿದೆ. ಮ್ಯಾಟ್ ಸಿಲ್ವರ್, ಸಿಟ್ರಸ್ ರಷ್ ಜೊತೆ ಮ್ಯಾಟ್ ಸಿಲ್ವರ್ ಮತ್ತು ಸ್ಪಾರ್ಕಿಂಗ್ ಬ್ಲ್ಯಾಕ್ ಜೊತೆ ಮ್ಯಾಟೆ ಸಿಲ್ವರ್ ಬಣ್ಣಗಳ ಆಯ್ಕೆ ನೀಡಲಾಗಿದೆ.

ಹೊಸ ಅಪ್‌ಡೇಟ್ ಪಡೆದುಕೊಂಡ Bajaj Dominar 400 ಟೂರಿಂಗ್ ಬೈಕ್ ವಿಶೇಷತೆಗಳು

ನವೀಕರಿಸಿದ ಬಜಾಜ್ ಡೋಮಿನಾರ್ 400 ಬೈಕ್ ಫ್ಯಾಕ್ಟರಿ-ಫಿಟೆಡ್ ಟೂರಿಂಗ್ ಅಕ್ಸೆಸರೀಸ್‍ಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಇನ್ನು ಬಜಾಜ್ ಆಟೊ ಕಂಪನಿಯು ಭಾರತದಲ್ಲಿ ಪಲ್ಸರ್ ಸರಣಿಯನ್ನು ವಿಸ್ತರಿಸಲು ಸಜ್ಜಾಗಿದೆ. ಇದರ ಭಾಗವಾಗಿ ನ್ಯೂ ಜನರೇಷನ್ ಬಜಾಜ್ ಪಲ್ಸರ್ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಟೀಸರ್ ಪ್ರಕಾರ ನಾಳೆ ನ್ಯೂ ಜನರೇಷನ್ ಬಜಾಜ್ ಪಲ್ಸರ್ ಬೈಕ್ ಬಿಡುಗಡೆಯಾಗಲಿದೆ.

Most Read Articles

Kannada
English summary
Top highlights of updated bajaj dominar 400 details
Story first published: Wednesday, October 27, 2021, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X