ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಚೆನ್ನೈ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ರಾಯಲ್ ಎನ್‌ಫೀಲ್ಡ್ ತನ್ನ ಸರಣಿಯಲ್ಲಿರು ಜನಪ್ರಿಯ ಕ್ಲಾಸಿಕ್ 350 ಬೈಕನ್ನು ನವೀಕರಿಸಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ನವೀಕರಣಗಳೊಂದಿಗೆ ಈ 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶಿಯ ಮಾರುಕಟ್ಟೆಗೆ ಶೀಘ್ರದಲ್ಲೇ ಲಗ್ಗೆಯಿಡಲಿದೆ.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತದಲ್ಲಿ ಹಲವು ಬಾರಿ ಸ್ಫಾಟ್ ಟೆಸ್ಟ್ ಅನ್ನು ನಡೆಸಿದೆ. 2021ರ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬೈಕ್ ಗಳಲಲ್ಲಿ ಇದು ಕೂಡ ಒಂದಾಗಿದೆ. ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕಿಗೆ ದೊಡ್ಡ ಅಭಿಮಾನಿ ವರ್ಗವಿದೆ. ಈ ನ್ಯೂ ಜನರೇಷನ್ ಬೈಕ್ ಸಾಕಷ್ಟು ಬದಲಾವಣೆಗಳೊಂದಿಗೆ ಬಿಡುಗಡೆಯಾಗಲಿದೆ.ಈ ಬಹುನಿರೀಕ್ಷಿತ ಕ್ಲಾಸಿಕ್ 350 ಬೈಕಿನ ವಿಶೇಷತೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಹೊಸ ಫೀಚರ್ಸ್

ಈ ನ್ಯೂ ಜನರೇಷನ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಇನ್ಸ್ ಟ್ರೂಮೆಟ್ ಕ್ಲಸ್ಟರ್ ಬಹಿರಂಗಪಡಿಸಿದ ವಿಡಿಯೋ ಇತ್ತೀಚೆಗೆ ಬಹಿರಂಗವಾಗಿತ್ತು. ಇದರಲ್ಲಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಈಗ ಅನಲಾಗ್ ಸ್ಪೀಡೋಮೀಟರ್ ಕೆಳಗೆ ಸಣ್ಣ ಡಿಜಿಟಲ್ ಡಿಸ್ ಪ್ಲೇಯನ್ನು ಹೊಂದಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಈ ಡಿಸ್ ಪ್ಲೇಯಲ್ಲಿ ಟ್ರಿಪ್ ಮೀಟರ್, ಫ್ಯೂಯಲ್ ಗೇಜ್, ಓಡೋಮೀಟರ್, ಓಡೋಮೀಟರ್ ಮತ್ತು ಇತರ ವಿವರಗಳನ್ನು ಪ್ರದರ್ಶಿಸುತ್ತದೆ. ಬದಿಯಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಇರುವಿಕೆಯು ಅತ್ಯಂತ ಮುಖ್ಯವಾದ ಸೇರ್ಪಡೆಯಾಗಿದೆ. ಟ್ರಿಪ್ಪರ್ ನ್ಯಾವಿಗೇಷನ್ ಫೀಚರ್ ಅನ್ನು ಕೂಡ ಒಳಗೊಂಡಿರುತ್ತದೆ.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಬ್ಲೂಟೂತ್ ಮತ್ತು ಮೀಸಲಾದ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೌಲ್ಯಭ್ಯವನ್ನು ಒದಗಿಸುತ್ತದೆ. ಇನ್ನು ಹೊಸ ಕ್ಲಾಸಿಕ್ 350 ಮಾದರಿಯು ಈಗ ವೃತ್ತಾಕಾರದ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿದೆ. ಇನ್ನು ಇದರಲ್ಲಿ ಸ್ಪ್ಲಿಟ್ ಸೀಟ್ ಮತ್ತು ಹಿಂಭಾಗದಲ್ಲಿ ಸ್ವಲ್ಪ ದೊಡ್ಡದಾದ ಗ್ರ್ಯಾಬ್ ಹ್ಯಾಂಡಲ್ ಅನ್ನು ಹೊಂದಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಫೀಚರ್ಸ್‌ಗಳು

2021ರ ಕ್ಲಾಸಿಕ್ 350 ಹ್ಯಾಲೊಜೆನ್ ಯುನಿಟ್ ಸುತ್ತ ವೃತ್ತಾಕಾರದ ಎಲ್ಇಡಿ ಡಿಆರ್ಎಲ್ ಗಳೊಂದಿಗೆ ನವೀಕರಿಸಿದ ಹೆಡ್ ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿರಲಿದೆ. ಈ ಹೊಸ ಹ್ಯಾಂಡಲ್‌ಬಾರ್ ಗ್ರಿಪ್ಸ್ ಮತ್ತು ಸ್ವಿಚ್‌ಗಿಯರ್‌ಗಳನ್ನು ಸಹ ಹೊಂದಿರುತ್ತದೆ. 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಪ್ರಸ್ತುತ ಮಾದರಿಯಂತೆಯೇ ವಿನ್ಯಾಸ ಮತ್ತು ಸಿಲೂಯೆಟ್ ಅನ್ನು ಮುಂದಕ್ಕೆ ಸಾಗಿಸಬಹುದು.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಅದರೆ ಮಿಟಿಯೊರ್ 350 ಬೈಕಿನಿಂದ ಕೆಲವು ಅಂಶಗಳನ್ನು ಎರವಲು ಪಡೆಯಬಹುದು. ಇದು ಡಬಲ್-ಕ್ರ್ಯಾಡಲ್ ಫ್ರೇಮ್ ನತ್ತು ಸಿಂಗಲ್ ಡೌನ್‌ಟ್ಯೂಬ್ ಫ್ರೇಮ್ ಅನ್ನು ಕೂಡ ಬದಲಾಯಿಲಾಗುತ್ತದೆ. ಈ ಹೊಸ ಕ್ಲಾಸಿಕ್ 350 ಬೈಕ್ ಅಲಾಯ್ ವ್ಹೀಲ್ ಗಳು ಮತ್ತು ವಿಂಡ್ ಡಿಫ್ಲೆಕ್ಟರ್ ಅನ್ನು ಪಡೆದುಕೊಂಡಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್, ಹೊಸ ಗ್ರ್ಯಾಪ್ ರೈಲ್ ಮತ್ತು ಹಿಂಭಾಗದ ಲೋ ಫೆಂಡರ್ ಹೊಂದಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಬಣ್ಣಗಳು

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ, ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕ್ಲಾಸಿಕ್ ಬೈಕ್ ಬ್ಲ್ಯಾಕ್, ಪ್ಯೂರ್ ಬ್ಲ್ಯಾಕ್, ಮರ್ಕ್ಯುರಿ ಸಿಲ್ವರ್, ಗನ್‌ಮೆಟಲ್ ಗ್ರೇ, ಸ್ಟ್ರೋಮೈಡರ್ ಸ್ಯಾಂಡ್, ಏರ್ ಬೋನ್ ಬ್ಲೂ, ಕ್ರೋಮ್, ಸ್ಟೆಲ್ತ್ ಬ್ಲ್ಯಾಕ್ ಆರೆಂಜ್ ಎಂಬರ್ ಮತ್ತು ಮೆಟಲ್ಲೊ ಸಿಲ್ವರ್ ಸೇರಿದಂತೆ 12 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಪ್ಲಾಟ್‌ಫಾರ್ಮ್‌

2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಸೆಟಪ್‌ನಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲಾಗುತ್ತದೆ. 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಅನ್ನು ಹೊಸ ಮಾಡ್ಯುಲರ್ ಜೆ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಿಸಲಾಗುತ್ತದೆ.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಮಾಡ್ಯುಲರ್ ಜೆ ಪ್ಲಾಟ್‌ಫಾರ್ಮ್‌ ಅಸ್ತಿತ್ವದಲ್ಲಿರುವ ಪ್ಲಾಟ್‌ಫಾರ್ಮ್‌ಗಿಂತ ಹಗುರವಾಗಿರುತ್ತದೆ, ಇನ್ನು 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನಲ್ಲಿ ಹೊಸ 350ಸಿಸಿ, ಸುಧಾರಿತ ಎಸ್‌ಒಹೆಚ್‌ಸಿ ಕಾನ್ಫಿಗರೇಶನ್‌ನೊಂದಿಗೆ ಸಿಂಗಲ್ ಸಿಲಿಂಡರ್ ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.

ಬಿಡುಗಡೆಯಾಗಲಿರುವ ಹೊಸ ರಾಯಲ್ ಎನ್‍ಫೀಲ್ಡ್ ಕ್ಲಾಸಿಕ್ 350 ಬೈಕ್ ವಿಶೇಷತೆಗಳು

ಎಂಜಿನ್

ಈ ಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕಿನ 350ಸಿಸಿ ಎಂಜಿನ್ 20.2 ಬಿಹೆಚ್‌ಪಿ ಮತ್ತು 27 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗುತ್ತದೆ. ಈ 2021ರ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Most Read Articles

Kannada
English summary
Next-Gen Royal Enfield Classic 350 Top Thing. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X