ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಟ್ರಯಂಫ್ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ಟ್ರೈಡೆಂಟ್ 660 ಬೈಕ್ ಮಾದರಿಯನ್ನು ಕಳೆದ ಹಿಂದಷ್ಟೇ ದೇಶಿಯ ಮಾರುಕಟ್ಟೆಗೆ ಪರಿಚಯಿಸಿದ್ದು, ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 6.95 ಲಕ್ಷ ಬೆಲೆ ಹೊಂದಿರುವ ಹೊಸ ಬೈಕ್ ವಿತರಣೆಗೆ ಈಗಾಗಲೇ ಅಧಿಕೃತವಾಗಿ ಚಾಲನೆ ನೀಡಿದೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಟ್ರೈಡೆಂಟ್ 660 ಬೈಕ್ ಮಾದರಿಯು ಸ್ಟ್ರೀಟ್ ನೆಕೆಡ್ ಆವೃತ್ತಿಯಾಗಿದ್ದು, ಹೊಸ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್‌ಗಳನ್ನು ಹೊಂದಿದೆ. ಹೊಸ ಬೈಕಿನಲ್ಲಿ ನವೀಕೃತ ವಿನ್ಯಾಸ ಮತ್ತು ಸುಧಾರಿತ ಎಂಜಿನ್ ಅನ್ನು ಜೋಡಿಸಲಾಗಿದ್ದು, ಆಸಕ್ತ ಗ್ರಾಹಕರಿಗಾಗಿ ಟ್ರಯಂಫ್ ಕಂಪನಿಯು ಹೆಚ್ಚುವರಿ ಫೀಚರ್ಸ್ ಹೊಂದಿರುವ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ್ದು, ಹೆಚ್ಚುವರಿ ಮೊತ್ತದೊಂದಿಗೆ ಆಕ್ಸೆಸರಿಸ್ ಪ್ಯಾಕೇಜ್ ಅಳವಡಿಸಿಕೊಳ್ಳಬಹುದಾಗಿದೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಆಕ್ಸೆಸರಿಸ್ ಪ್ಯಾಕೇಜ್‌ನಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್ ಹೊರತುಪಡಿಸಿ ಟಿಂಟೆಡ್ ಫ್ಲೈ ಸ್ಕೀನ್, ರೆಟ್ರೋ ವಿನ್ಯಾಸದ ಬಾರ್ ಎಂಡ್ ಮಿರರ್ಸ್, ಫ್ರೆಮ್ ಪ್ರೊಟೆಕ್ಷನ್, ಫ್ರಂಟ್ ಆಕ್ಸೆಲ್ ಪ್ರೊಟೆಕ್ಷನ್, ಎಂಜಿನ್ ಕವರ್ ಕಿಟ್, ಟ್ಯಾಂಕ್ ಪ್ಯಾಡ್, ಗೊ ಪ್ರೊ ಕಂಟ್ರೋಲ್ ಮತ್ತು ಯುಎಸ್‌ಬಿ ಚಾರ್ಜರ್ ಸೌಲಭ್ಯಗಳಿವೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಇನ್ನು ಹೊಸ ಟ್ರೈಡೆಂಟ್ 660 ಬೈಕ್ ಖರೀದಿಸುವ ಗ್ರಾಹಕರಿಗೆ ಕಂಪನಿಯು ಅತ್ಯುತ್ತಮ ಸಾಲ-ಸೌಲಭ್ಯಗಳನ್ನು ಘೋಷಣೆ ಮಾಡಲಾಗಿದ್ದು, ಪ್ರತಿ ತಿಂಗಳು ಕನಿಷ್ಠ ಮಟ್ಟದ ರೂ. 9999 ಇಎಂಐ ಆಯ್ಕೆ ಸಹ ನೀಡುತ್ತಿದೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

70ರ ದಶಕದಲ್ಲಿದ್ದ ಟ್ರಯಂಫ್ ಟ್ರೈಡೆಂಟ್ ಸರಣಿಯ ಪ್ರಮುಖ ಐಕಾನಿಕ್ ಬೈಕ್ ಮಾದರಿಗಳ ಪ್ರೇರಣೆ ಹೊಂದಿರುವ ಹೊಸ ಬೈಕ್‌ನಲ್ಲಿ ಸ್ಕಪಲ್ಟಡ್ ಫ್ಯೂಯಲ್ ಟ್ಯಾಂಕ್, ಎಲ್ಇಡಿ ಹೆಡ್‌ಲ್ಯಾಂಪ್, ಅಂಡರ್ ಬೆಲ್ಲಿ ಎಕ್ಸಾಸ್ಟ್‌ನೊಂದಿಗೆ ಮಸ್ಕಲ್ಯೂರ್ ಲುಕ್ ನೀಡಲಾಗಿದ್ದು, ಸಿಂಗಲ್-ಪೀಸ್ ಸೀಟ್, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಎಕ್ಸ್‌ಪೋಸ್ಡ್ ಫ್ರೇಮ್ ಮತ್ತು ಎಂಜಿನ್ ಮತ್ತು ವೃತ್ತಾಕಾರದ ಅಂಶಗಳೊಂದಿಗೆ ಸಣ್ಣದಾಗಿ ರೆಟ್ರೋ ಶೈಲಿಯಯಲ್ಲಿ ಕಾಣುತ್ತದೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಟ್ರೈಡೆಂಟ್ 660 ಬೈಕ್ ಮಾದರಿಯಲ್ಲಿ ಕಂಪನಿಯು ರೋಡ್ ಮತ್ತು ರೈನ್ ಎನ್ನುವ ಎರಡು ರೈಡಿಂಗ್ ಮೋಡ್ ನೀಡಿದ್ದು, ರೈಡ್ ಬೈ ವೈರ್ ಥ್ರೋಟಲ್, ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ ಮತ್ತು ಟ್ರಯಂಫ್ ಶಿಫ್ಟ್ ಅಸಿಸ್ಟ್ ಸೌಲಭ್ಯಗಳಿವೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಹಾಗೆಯೇ ಹೊಸ ಬೈಕ್ ರೈಡ್‌ಗೆ ಪೂರಕವಾಗಿ ಮೈ ಟ್ರಯಂಫ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ನೀಡಲಾಗಿದ್ದು, ಸ್ವಿಚ್ ಗೇರ್ ಮತ್ತು ಟಿಎಫ್‌ಟಿ ಮೂಲಕ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಎಂಜಿನ್ ಮತ್ತು ಪರ್ಫಾಮೆನ್ಸ್

ಟ್ರಯಂಫ್ ಕಂಪನಿಯು ಟ್ರೈಡೆಂಟ್ 660 ಬೈಕ್ ಮಾದರಿಯಲ್ಲಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ತ್ರಿ ಸಿಲಿಂಡರ್ ಪ್ರೇರಿತ 660ಸಿಸಿ ಎಂಜಿನ್ ಆಯ್ಕೆ ನೀಡಿದ್ದು, ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್ ಅಸಿಸ್ಟ್ ಕ್ಲಚ್ ಸೌಲಭ್ಯದೊಂದಿಗೆ 80-ಬಿಎಚ್‌ಪಿ ಮತ್ತು 64-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಸುರಕ್ಷತೆಗಾಗಿ ಹೊಸ ಬೈಕಿನಲ್ಲಿ ಎರಡು ಬದಿ ಸ್ವಿಂಗ್‌ಗ್ರಾಮ್, ಮುಂಭಾಗದಲ್ಲಿ 41 ಎಂಎಂ ಅಪ್‌ಸೈಡ್ ಡೌನ್ ಫೋಕ್ಸ್ ಸಸ್ಪೆಂಷನ್, ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಷೆಂಷನ್, ಡ್ಯಯಲ್ ಪಿಸ್ಟನ್ ಹೊಂದಿರುವ 310 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 255 ಎಂಎಂ ಸಿಂಗಲ್ ಪಿಸ್ಟನ್ ಹೊಂದಿರುವ ರಿಯರ್ ಡಿಸ್ಕ್ ಬ್ರೇಕ್, ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯಗಳಿವೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಟ್ರೈಡೆಂಟ್ 660 ಬೈಕ್ ಮಾದರಿಗಾಗಿ ಹಲವಾರು ಆಕ್ಸೆಸರಿಸ್ ಬಿಡುಗಡೆ ಮಾಡಿದ ಟ್ರಯಂಫ್

ಜೊತೆಗೆ ಹೊಸ ಬೈಕಿನಲ್ಲಿ 17-ಇಂಚಿನ ಅಲಾಯ್ ವೀಲ್ಹ್, 14-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ಪರ್ಫಾಮೆನ್ಸ್ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ನೀಡಲಾಗುತ್ತಿದ್ದು, ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಬೈಕ್ ಬರೋಬ್ಬರಿ 189 ಕೆ.ಜಿ ತೂಕ ಹೊಂದಿದೆ.

Most Read Articles

Kannada
English summary
Triumph Offers A Number Of Accessories For The Trident 660. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X