ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಮಾದರಿಯನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಬೈಕ್ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 6.95 ಲಕ್ಷ ಬೆಲೆ ಹೊಂದಿದೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಮಾದರಿಯು ಸ್ಟ್ರೀಟ್ ನೆಕೆಡ್ ಆವೃತ್ತಿಯಾಗಿದ್ದು, ಹೊಸ ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್‌ಗಳನ್ನು ಹೊಂದಿದೆ. ಹೊಸ ಬೈಕಿನ ನವೀಕೃತ ವಿನ್ಯಾಸ ಮತ್ತು ಸುಧಾರಿತ ಎಂಜಿನ್ ಅನ್ನು ಜೋಡಿಸಲಾಗಿದ್ದು, ಬೈಕ್ ಬಿಡುಗಡೆಯೊಂದಿಗೆ ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯು ಬುಕ್ಕಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರಯಂಫ್ ಕಂಪನಿಯು ಹೊಸ ಬೈಕ್ ಬುಕ್ಕಿಂಗ್ ಪ್ರಕ್ರಿಯೆಗೆ ರೂ.50 ಸಾವಿರ ನಿಗದಿಪಡಿಸಿದ್ದು, ಈ ತಿಂಗಳಾಂತ್ಯಕ್ಕೆ ಹೊಸ ಬೈಕ್ ವಿತರಣೆಯಾಗಲಿದೆ. ಹೊಸ ಬೈಕ್ ಖರೀದಿಸುವ ಗ್ರಾಹಕರಿಗೆ ಅತ್ಯುತ್ತಮ ಸಾಲ-ಸೌಲಭ್ಯಗಳನ್ನು ಘೋಷಣೆ ಮಾಡಲಾಗಿದ್ದು, ಪ್ರತಿ ತಿಂಗಳು ರೂ. 9999 ಇಎಂಐ ಆಯ್ಕೆ ಸಹ ಲಭ್ಯವಿದೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಹೊಸ ಬೈಕ್ ಸ್ಕಪಲ್ಟಡ್ ಫ್ಯೂಯಲ್ ಟ್ಯಾಂಕ್, ಎಲ್ಇಡಿ ಹೆಡ್‌ಲ್ಯಾಂಪ್, ಅಂಡರ್ ಬೆಲ್ಲಿ ಎಕ್ಸಾಸ್ಟ್‌ನೊಂದಿಗೆ ಮಸ್ಕಲ್ಯೂರ್ ಲುಕ್ ಅನ್ನು ಹೊಂದಿದ್ದು, ಸಿಂಗಲ್-ಪೀಸ್ ಸೀಟ್, ಸಿಂಗಲ್-ಪೀಸ್ ಹ್ಯಾಂಡಲ್‌ಬಾರ್, ಎಕ್ಸ್‌ಪೋಸ್ಡ್ ಫ್ರೇಮ್ ಮತ್ತು ಎಂಜಿನ್ ಮತ್ತು ವೃತ್ತಾಕಾರದ ಅಂಶಗಳೊಂದಿಗೆ ಸಣ್ಣದಾಗಿ ರೆಟ್ರೋ ಶೈಲಿಯಯಲ್ಲಿ ಕಾಣುತ್ತದೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಟ್ರೈಡೆಂಟ್ ಸರಣಿ ಮಾದರಿಗಳನ್ನು ಟ್ರಯಂಫ್ ಕಂಪನಿಯು 70ರ ದಶಕದಲ್ಲಿದ್ದ ತನ್ನ ಪ್ರಮುಖ ಐಕಾನಿಕ್ ಬೈಕ್ ಮಾದರಿಗ ಪ್ರೇರಣೆಯೊಂದಿಗೆ ಪ್ರಸ್ತುತ ಮಾರುಟ್ಟೆಯಲ್ಲಿನ ಬೇಡಿಕೆಯೆಂತೆ ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸುತ್ತಿದ್ದು, ಟ್ರೈಡೆಂಟ್ 660 ಬೈಕ್ ಆವೃತ್ತಿಯು ಸಹ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ತಾಂತ್ರಿಕ ಅಂಶಗಳನ್ನು ಹೊಂದಿರುವ ಟ್ರೈಡೆಂಟ್ 660 ಬೈಕ್ ಮಾದರಿಯಲ್ಲಿ ಕಂಪನಿಯು ರೋಡ್ ಮತ್ತು ರೈನ್ ಎನ್ನುವ ಎರಡು ರೈಡಿಂಗ್ ಮೋಡ್ ನೀಡಿದ್ದು, ರೈಡ್ ಬೈ ವೈರ್ ಥ್ರೋಟಲ್, ಸ್ವಿಚ್ ಮಾಡಬಹುದಾದ ಟ್ರಾಕ್ಷನ್ ಕಂಟ್ರೋಲ್ ಮತ್ತು ಟ್ರಯಂಫ್ ಶಿಫ್ಟ್ ಅಸಿಸ್ಟ್ ಸೌಲಭ್ಯಗಳಿವೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಹಾಗೆಯೇ ಹೊಸ ಬೈಕ್ ರೈಡ್‌ಗೆ ಪೂರಕವಾಗಿ ಮೈ ಟ್ರಯಂಫ್ ಕನೆಕ್ಟಿವಿಟಿ ಸೌಲಭ್ಯಗಳನ್ನು ಸಹ ನೀಡಲಾಗಿದ್ದು, ಸ್ವಿಚ್ ಗೇರ್ ಮತ್ತು ಟಿಎಫ್‌ಟಿ ಮೂಲಕ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಣ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಸುರಕ್ಷತೆಗಾಗಿ ಹೊಸ ಬೈಕಿನಲ್ಲಿ ಎರಡು ಬದಿ ಸ್ವಿಂಗ್‌ಗ್ರಾಮ್, ಮುಂಭಾಗದಲ್ಲಿ 41 ಎಂಎಂ ಅಪ್‌ಸೈಡ್ ಡೌನ್ ಫೋಕ್ಸ್ ಸಸ್ಪೆಂಷನ್, ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಷೆಂಷನ್, ಡ್ಯಯಲ್ ಪಿಸ್ಟನ್ ಹೊಂದಿರುವ 310 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್, 255 ಎಂಎಂ ಸಿಂಗಲ್ ಪಿಸ್ಟನ್ ಹೊಂದಿರುವ ರಿಯರ್ ಡಿಸ್ಕ್ ಬ್ರೇಕ್, ಸ್ವಿಚ್ ಮಾಡಬಹುದಾದ ಡ್ಯುಯಲ್ ಚಾನೆಲ್ ಎಬಿಎಸ್ ಸೌಲಭ್ಯಗಳಿವೆ.

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಜೊತೆಗೆ ಹೊಸ ಬೈಕಿನಲ್ಲಿ 17-ಇಂಚಿನ ಅಲಾಯ್ ವೀಲ್ಹ್, 14-ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್, ಪರ್ಫಾಮೆನ್ಸ್ ಪೂರಕವಾದ ಆಕ್ಸೆಸರಿಸ್ ಪ್ಯಾಕೇಜ್ ನೀಡಲಾಗುತ್ತಿದ್ದು, ಒಟ್ಟು ನಾಲ್ಕು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರುವ ಹೊಸ ಬೈಕ್ ಬರೋಬ್ಬರಿ 189 ಕೆ.ಜಿ ತೂಕ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಬಹುನೀರಿಕ್ಷಿತ ಟ್ರೈಡೆಂಟ್ 660 ಬೈಕ್ ಬಿಡುಗಡೆ ಮಾಡಿದ ಟ್ರಯಂಫ್ ಮೋಟಾರ್‌ಸೈಕಲ್

ಎಂಜಿನ್ ಮತ್ತು ಪರ್ಫಾಮೆನ್ಸ್

ಟ್ರಯಂಫ್ ಕಂಪನಿಯು ಟ್ರೈಡೆಂಟ್ 660 ಬೈಕ್ ಮಾದರಿಯಲ್ಲಿ ಲಿಕ್ವಿಡ್ ಕೂಲ್ಡ್ ಇನ್ ಲೈನ್ ತ್ರಿ ಸಿಲಿಂಡರ್ ಪ್ರೇರಿತ 660ಸಿಸಿ ಎಂಜಿನ್ ಆಯ್ಕೆ ನೀಡಿದ್ದು, ಸಿಕ್ಸ್ ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್ ಅಸಿಸ್ಟ್ ಕ್ಲಚ್ ಸೌಲಭ್ಯದೊಂದಿಗೆ 80-ಬಿಎಚ್‌ಪಿ ಮತ್ತು 64-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

Most Read Articles

Kannada
English summary
Triumph Trident 660 Launched In India: Priced At Rs 6.95 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X