ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ದಿನ ನಿತ್ಯದ ಪ್ರಯಾಣಕ್ಕಾಗಿ ವಾಹನಗಳನ್ನು ಅವಲಂಬಿಸಿರುವವರು ಇಂಧನ ಬೆಲೆ ಏರಿಕೆಯಿಂದಾಗಿ ಹೈರಾಣಾಗಿದ್ದಾರೆ. ಭಾರತದ ವಿವಿಧ ಭಾಗಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಈಗಾಗಲೇ ರೂ.100 ಗಳ ಗಡಿ ದಾಟಿದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಪೆಟ್ರೋಲ್, ಡೀಸೆಲ್ ಬೆಲೆಯಿಂದ ತತ್ತರಿಸಿರುವ ವಾಹನ ಸವಾರರು ಪರ್ಯಾಯ ಇಂಧನ ಹೊಂದಿರುವ ವಾಹನಗಳತ್ತ ಮುಖ ಮಾಡಿದ್ದಾರೆ. ಪರ್ಯಾಯ ಇಂಧನ ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಮುಖವಾಗಿವೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಯಿಂದ ಪಾರಾಗಲು ತೆಲಂಗಾಣದ ವ್ಯಕ್ತಿಯೊಬ್ಬರು ಹೊಸ ಮಾರ್ಗವೊಂದನ್ನು ಕಂಡು ಕೊಂಡಿದ್ದಾರೆ. 42 ವರ್ಷ ವಯಸ್ಸಿನ ವಿದ್ಯಾಸಾಗರ್ ಎಂಬುವವರು ತಮ್ಮ ಬಳಿಯಿರುವ 15 ವರ್ಷ ಹಳೆಯ ಬಜಾಜ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ್ದಾರೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಅವರು ಈ ಬೈಕಿನಲ್ಲಿದ್ದ ಪೆಟ್ರೋಲ್ ಎಂಜಿನ್ ತೆಗೆದು ಬ್ಯಾಟರಿ, ಕನ್ವರ್ಟರ್ ಹಾಗೂ ಎಲೆಕ್ಟ್ರಿಕ್ ಮೋಟರ್ ಅಳವಡಿಸಿದ್ದಾರೆ. ವಿದ್ಯಾಸಾಗರ್ ಮೂಲತಃ ಟಿವಿ ಮೆಕ್ಯಾನಿಕ್. ಆದರೆ ಪೆಟ್ರೋಲ್ ಬೈಕ್ ಅನ್ನು ಸ್ವತಃ ತಾವೇ ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿ ಜನರ ಗಮನ ಸೆಳೆದಿದ್ದಾರೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ವಿದ್ಯಾಸಾಗರ್ ರೂ.10,000 ನೀಡಿ ನಾಲ್ಕು 30 ಎಹೆಚ್ 12 ವೋಲ್ಟ್ ಬ್ಯಾಟರಿಗಳನ್ನು ಖರೀದಿಸಿದ್ದಾರೆ. ಜೊತೆಗೆ ರೂ.7,500 ನೀಡಿ 48 ವೋಲ್ಟ್ ಮೋಟರ್ ಹಾಗೂ ಎಲೆಕ್ಟ್ರಿಕ್ ಬೈಕ್ ಕನ್ವರ್ಟರ್ ಕಿಟ್ ಖರೀದಿಸಿದ್ದಾರೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಅಗತ್ಯವಿರುವ ಬಿಡಿ ಭಾಗಗಳನ್ನು ಖರೀದಿಸಿದ ನಂತರ ವಿದ್ಯಾಸಾಗರ್ ಪೆಟ್ರೋಲ್ ಎಂಜಿನ್ ಅನ್ನು ಹೊರ ತೆಗೆದಿದ್ದಾರೆ. ಪೆಟ್ರೋಲ್ ಎಂಜಿನ್ ಇದ್ದ ಜಾಗದಲ್ಲಿ ಬ್ಯಾಟರಿ ಹಾಗೂ ಎಲೆಕ್ಟ್ರಿಕ್ ಮೋಟರ್ ಅಳವಡಿಸಿದ್ದಾರೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಅವರಿಗೆ ದ್ವಿಚಕ್ರ ವಾಹನ ಮೆಕ್ಯಾನಿಕ್ ಒಬ್ಬರು ನೆರವಾಗಿದ್ದಾರೆ. ಈ ಎಲೆಕ್ಟ್ರಿಕ್ ಬೈಕ್ ಚಾಲನೆಗೆ ಪ್ರತಿ ಕಿ.ಮೀಗೆ ಕೇವಲ ರೂ. 0.2 ಖರ್ಚಾಗುತ್ತದೆ. ಈ ಬಗ್ಗೆ ಮಾತನಾಡಿರುವ ವಿದ್ಯಾಸಾಗರ್, ನಾನು ಒಟ್ಟು ರೂ.20,000 ಖರ್ಚು ಮಾಡಿದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಆದರೆ ಇನ್ನು ಮುಂದೆ ಪೆಟ್ರೋಲ್'ಗಾಗಿ ಖರ್ಚು ಮಾಡುವಂತಿಲ್ಲ. ಇದರಿಂದ ನಾನು ಪ್ರತಿ ತಿಂಗಳು ರೂ.3,000 ಉಳಿಸಬಹುದು ಎಂದು ಹೇಳಿದ್ದಾರೆ. ಈ ಬೈಕ್‌ನಲ್ಲಿರುವ ಬ್ಯಾಟರಿಯನ್ನು ಪ್ರತಿದಿನ ಸುಮಾರು 5 ಗಂಟೆಗಳ ಕಾಲ ಚಾರ್ಜ್ ಮಾಡಬೇಕು.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಆದರೆ ಇದು ಕಷ್ಟದ ಸಂಗತಿಯಲ್ಲ. ರಾತ್ರಿ ವೇಳೆ ಈ ಬೈಕ್ ಅನ್ನು ಚಾರ್ಜ್ ಮಾಡಬಹುದು. ಉಳಿತಾಯವಾಗುವ ಹಣಕ್ಕೆ ಹೋಲಿಸಿದರೆ, ಇದು ಖಂಡಿತ ಕಷ್ಟದ ಕೆಲಸವಲ್ಲ ಎಂದು ವಿದ್ಯಾಸಾಗರ್ ಹೇಳಿದ್ದಾರೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಗಮನಿಸಬೇಕಾದ ಸಂಗತಿಯೆಂದರೆ ಬೈಕ್ ಚಾಲನೆಯಲ್ಲಿರುವಾಗಲೇ ಬ್ಯಾಟರಿ ಚಾರ್ಜ್ ಮಾಡಬಹುದಾದ ಸೌಲಭ್ಯವನ್ನು ವಿದ್ಯಾಸಾಗರ್ ಅಭಿವೃದ್ಧಿಪಡಿಸುತ್ತಿದ್ದಾರೆ. ಇದು ಸಾಧ್ಯವಾದರೆ ಚಾರ್ಜ್ ಮಾಡುವ ಸಮಯವೂ ಕಡಿಮೆಯಾಗುತ್ತದೆ.

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿದ ಟಿವಿ ಮೆಕ್ಯಾನಿಕ್

ಪೆಟ್ರೋಲ್ ಬೈಕ್ ಅನ್ನು ಎಲೆಕ್ಟ್ರಿಕ್ ಬೈಕ್ ಆಗಿ ಬದಲಿಸಿರುವ ವಿದ್ಯಾಸಾಗರ್'ರವರ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಹಲವಾರು ಜನರು ತಮ್ಮ ಪೆಟ್ರೋಲ್ ಬೈಕ್‌ಗಳನ್ನು ಎಲೆಕ್ಟ್ರಿಕ್ ಬೈಕ್‌ಗಳಾಗಿ ಪರಿವರ್ತಿಸಲು ಚಿಂತನೆ ನಡೆಸುತ್ತಿದ್ದಾರೆ.

Most Read Articles

Kannada
English summary
TV mechanic converts his petrol bike into electric bike. Read in Kannada.
Story first published: Wednesday, July 14, 2021, 11:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X