2021ರ TVS Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಹೊಚ್ಚ 'ಬಿಲ್ಟ್ ಟು ಆರ್ಡರ್' (ಬಿಟಿಒ) ಪ್ಲಾಟ್‍ಫಾರ್ಮ್ ಆರಂಭಿಸುವುದೊಂದಿಗೆ ಹೊಸ 2021ರ ಅಪಾಚೆ ಆರ್‌ಆರ್310(Apache RR310) ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯನ್ನು ಕಂಪನಿಯೇ ಗ್ರಾಹಕರ ಬೇಡಿಕೆಯೆಂತೆ ಕಸ್ಟಮೈಜ್ಡ್ ಸೌಲಭ್ಯದೊಂದಿಗೆ ರೇಸ್ ಮಾದರಿಯಲ್ಲಿ ಸಿದ್ದಪಡಿಸುತ್ತದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಪರ್ಫಾಮೆನ್ಸ್ ಉದ್ದೇಶಕ್ಕಾಗಿಯೇ ಈಗಾಗಲೇ ಹಲವಾರು ವೈಶಿಷ್ಟ್ಯತೆಗಳನ್ನು ಹೊಂದಿರುವ ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯಲ್ಲಿ ಕಂಪನಿಯು ಪರಿಪೂರ್ಣ ಅನ್ವೇಷಣೆಯನ್ನು ಮುಂದುವರಿಸುವ ಮೂಲಕ 2018, 2019 ಮತ್ತು 2020ರಲ್ಲಿ ಕೆಲವು ಬದಲಾವಣೆಗಳೊಂದಿಗೆ ನವೀಕರಿಸಿದ್ದು, ಇದೀಗ ಮತ್ತೊಮ್ಮೆ ಹೊಸ ಬೈಕ್ ಮಾದರಿಗಾಗಿ ವಿಶೇಷ 'ಬಿಲ್ಟ್ ಟು ಆರ್ಡರ್' ಪ್ಲ್ಯಾಟ್‌ಫಾರ್ಮ್ ತೆರೆದಿದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಸ್ಟ್ಯಾಂಡರ್ಡ್ ಮಾದರಿಯ ಜೊತೆಗೆ ಕಸ್ಟಮೈಜ್ಡ್ ಮಾದರಿಯಲ್ಲೂ ಖರೀದಿಗೆ ಲಭ್ಯವಿದ್ದು, ಹೊಸ ಬೈಕ್ ಮಾದರಿಯು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.59 ಲಕ್ಷ ಬೆಲೆ ಹೊಂದಿದೆ. ಕಸ್ಟಮೈಜ್ಡ್ ಮಾದರಿಯು ಹೆಚ್ಚುವರಿ ತಾಂತ್ರಿಕ ಅಂಶಗಳೊಂದಿಗೆ ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿಯಾಗಲಿರಲಿದ್ದು, ಕಂಪನಿಯು ಆರಂಭಿಕ ಹಂತದಲ್ಲಿ ಉತ್ಪಾದನೆ ಕೈಗೊಂಡಿದ್ದ 150 ಕಸ್ಟಮೈಜ್ಡ್ ಮಾದರಿಗಳನ್ನು ಮೊದಲ ಬ್ಯಾಚ್‌ನಲ್ಲಿ ಮಾರಾಟ ಪೂರ್ಣಗೊಳಿಸಿದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಹೊಸ ಬೈಕ್ ಅನ್ನು ಬಿಲ್ಟ್-ಟು-ಆರ್ಡರ್ ಪ್ಲಾಟ್‌ಫಾರ್ಮ್ ಮೂಲಕ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಕಸ್ಟಮೈಸ್ ಸೌಲಭ್ಯ ಜೋಡಣೆ ಮಾಡಿಕೊಳ್ಳಬಹುದಾಗಿದ್ದು, ಇದರಲ್ಲಿ ಡೈನಾಮಿಕ್ ಕಿಟ್ ಮತ್ತು ರೇಸ್ ಕಿಟ್ ಎಂಬ ಎರಡು ಪರ್ಫಾಮೆನ್ಸ್ ಕಿಟ್‌ಗಳನ್ನು ಪಡೆಯುತ್ತದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಹೊಸ ವೈಶಿಷ್ಟ್ಯಗಳ ಪಟ್ಟಿಗೆ ದೊಡ್ಡ ಸೇರ್ಪಡೆ ಎಂದರೆ ಅಂದರೆ ಅದು ಮುಂಭಾಗ ಮತ್ತು ಹಿಂಭಾಗದಲ್ಲಿ ಸಂಪೂರ್ಣ ಹೊಂದಾಣಿಕೆಯ ಸಸ್ಷೆಂಷನ್ ಸೆಟಪ್ ನೀಡಲಿದ್ದು, ರೇಸ್‌ ಟ್ರಾಕ್‌ನಲ್ಲಿ ರೈಡ್ ಮಾಡಿದಾಗ ಅನುಭವವನ್ನು ನೀಡುವಂತೆ ಮಾಡಲು ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಟಿವಿಎಸ್‌ ಕಂಪನಿಯು ಬಿಲ್ಟ್-ಟು-ಆರ್ಡರ್ ಪ್ಲಾಟ್‌ಫಾರ್ಮ್ ಕಾರ್ಖಾನೆಯೊಂದಿಗೆ ಗ್ರಾಹಕೀಕರಣವನ್ನು ಅನುಮತಿಸಲು ಕೈಗೊಂಡ ಮೊದಲ ಉದ್ಯಮವಾಗಿದ್ದು, ಇದನ್ನು ವೆಬ್‌ಸೈಟ್ ಆಧಾರಿತ ಸಂರಚಕದ ಮೂಲಕ ಅಥವಾ TVS ARIVE ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಗ್ರಾಹಕರ ತಮ್ಮಿಷ್ಟದಂತೆ ಹೊಸ ಬೈಕ್ ತಾಂತ್ರಿಕ ಅಂಶಗಳನ್ನು ನಿರ್ಧರಿಸಬಹುದು.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಸಂರಚಕದ ಮೂಲಕ ಬೈಕ್ ಖರೀದಿದಾರರು ಮೋಟಾರ್ ಸೈಕಲ್‌ನಲ್ಲಿ ಗ್ರಾಫಿಕ್ಸ್, ವೈಯಕ್ತಿಕ ರೇಸ್ ಸಂಖ್ಯೆಯನ್ನು ಸೇರಿಸಬಹುದು ಮತ್ತು ಡೈನಾಮಿಕ್ ಅಥವಾ ರೇಸ್ ಕಿಟ್ ಅನ್ನು ತಮ್ಮ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಆರಿಸಿಕೊಳ್ಳಬಹುದಾಗಿದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

2021ರ ಟಿವಿಎಸ್ ಅಪಾಚೆ ಆರ್‌ಆರ್310 ಮಾದರಿಯಲ್ಲಿ ಕೇವಲ ರೇಸ್ ಕಿಟ್, ಡೈನಾಮಿಕ್ ಕಿಟ್ ಮತ್ತು ಬಿಲ್ಟ್ ಟು ಆರ್ಡರ್ ಪ್ಲಾಟ್‌ಫಾರ್ಮ್ ವೈಶಿಷ್ಟ್ಯತೆಗಳು ಮಾತ್ರವಲ್ಲ ಸ್ಟ್ಯಾಂಡರ್ಡ್ ಮೋಟಾರ್‌ಸೈಕಲ್ ಕೂಡಾ ಹಲವಾರು ಫೀಚರ್ಸ್ ಸೇರ್ಪಡೆಗಳನ್ನು ಹೊಂದಿದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಹೊಸ ವೈಶಿಷ್ಟ್ಯತೆಗಳು ಹೆಚ್ಚಿನ ಸಂಖ್ಯೆಯಲ್ಲಿ TFT ಸಲಕರಣೆಗಳ ನಿಯಂತ್ರಣದಲ್ಲಿ ಜೋಡಿಸಲಾಗಿದ್ದು, 2020 ರಿಂದ, ಅಪಾಚೆ ಆರ್‌ಆರ್310 ಮಾದರಿಯು 5.2 ಇಂಚಿನ ಪೂರ್ಣ-ಬಣ್ಣದ ಟಿಎಫ್‌ಟಿ ಪರದೆಯ ಮೂಲಕ ಡಿಜಿ ಡಾಕ್ಸ್, ಡೈನಾಮಿಕ್ ರೆವ್ ಲಿಮಿಟ್ ಇಂಡಿಕೇಟರ್, ಪ್ರತಿದಿನದ ಟ್ರಿಪ್ ಮೀಟರ್ ಮತ್ತು ಅತಿ ವೇಗದ ಸೂಚನೆಯನ್ನು ತಿಳಿಯಬಹುದು.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಮೇಲಿನ ಹೊಸ ವೈಶಿಷ್ಟ್ಯ ಸೇರ್ಪಡೆಗಳನ್ನು ಹೊರತುಪಡಿಸಿ, ಟಿವಿಎಸ್ ಮೇಲೆ ತಿಳಿಸಿದ ಡೈನಾಮಿಕ್ ಮತ್ತು ರೇಸ್ ಕಿಟ್‌ಗಳನ್ನು ಪರಿಚಯಿಸಿದ್ದು, ಹೊಸ ಬೈಕಿನಲ್ಲಿ ಮೇಲಿನ ಬದಲಾವಣೆಗಳಿಂತಲೂ ಇವು ಪ್ರಮುಖ ಬದಲಾವಣೆ ಎನ್ನಬಹುದು.

ಡೈನಾಮಿಕ್ ಕಿಟ್

- ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ KYB ಅಪ್‌ಸೈಡ್-ಡೌನ್ ಫೋರ್ಕ್

(20-ಹಂತದ ರಿಬೌಂಡ್ & ಕಂಪ್ರೆಷನ್ ಡ್ಯಾಂಪಿಂಗ್; 15ಎಂಎಂ ಪ್ರಿ-ಲೋಡ್ ಹೊಂದಾಣಿಕೆ ಹೊಂದಿದೆ)

- ಸಂಪೂರ್ಣ ಹೊಂದಾಣಿಕೆ ಮಾಡಬಹುದಾದ ಕೆವೈಬಿ ಮೊನೊಶಾಕ್

(20-ಹಂತದ ರಿಬೌಂಡ್ ಡ್ಯಾಂಪಿಂಗ್; 15-ಹಂತದ ಪ್ರಿ-ಲೋಡ್ ಹೊಂದಾಣಿಕೆ ಹೊಂದಿದೆ)

-ಬ್ರಾಸ್(ಹಿತ್ತಾಳೆ) ಲೇಪಿತ, ತುಕ್ಕು ನಿರೋಧಕ ಹೊಂದಿರುವ ಚೈನ್

- ಬೆಲೆ- ರೂ. 12,000

ರೇಸ್ ಕಿಟ್:

- ರೇಸ್ ವೈಶಿಷ್ಟ್ಯತೆಯ ಹ್ಯಾಂಡಲ್‌ಬಾರ್

- ವಿಸ್ತರಿಸಲಾದ ಫೂಟ್‌ರೆಸ್ಟ್ ಅಸೆಂಬ್ಲಿ

- ಮರುವಿನ್ಯಾಸಗೊಳಿಸಲಾದ ಫುಟ್‌ಪೆಗ್‌ಗಳು

- ಬೆಲೆ- ರೂ. 5,000

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಕಸ್ಟಮೈಜ್ಡ್ ಮಾದರಿಯ ರೇಸ್ ಕಿಟ್ ಹೊರತುಪಡಿಸಿ ಟಿವಿಎಸ್ ಕಂಪನಿಯು ಹೊಸ ಅಪಾಚೆ ಆರ್‌ಆರ್310 ಮಾದರಿಯಲ್ಲಿ ವಿವಿಧ ರೈಡ್ ಮೋಡ್‌ಗಳನ್ನು ನೀಡುತ್ತಿದ್ದು, ರೈನ್, ಸಿಟಿ, ಸ್ಪೋರ್ಟ್ ಮತ್ತು ರೇಸ್ ಮೋಡ್ ನೀಡಲಾಗುತ್ತಿದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಹೊಸ ಬೈಕ್ ಮಾದರಿಯು 312 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್‌ಗೆ ಪೂರಕವಾಗಿ 6-ಸ್ಪೀಡ್ ಗೇರ್ ಬಾಕ್ಸ್ ತ್ವರಿತವಾಗಿ ಬದಲಾಗುತ್ತದೆ ಮತ್ತು ಸ್ಲಿಪ್ಪರ್ ಕ್ಲಚ್ ಇದಕ್ಕೆ ಸಹಕಾರಿಯಾಗಿದ್ದು, 34 ಬಿಎಚ್‌ಪಿ ಮೋಟಾರ್‌ಸೈಕಲ್ ಅನ್ನು ತ್ವರಿತವಾಗಿ ವೇಗಗೊಳಿಸುತ್ತದೆ.

Apache RR310 ಬೈಕಿನ ಬಿಟಿಒ ವರ್ಷನ್ ಮೊದಲ ಬ್ಯಾಚ್ ಸೋಲ್ಡ್ ಔಟ್

ಹೊಸ ಬೈಕ್ ನಿರ್ವಹಣೆಯ ವಿಷಯದಲ್ಲಿ ಹೊಂದಾಣಿಕೆಯ ಸಸ್ಷೆಂಷನ್‌ಗಳು, ರೇಸ್‌ಗೆ ಪೂರಕವಾದ ಹ್ಯಾಂಡಲ್‌ಬಾರ್‌ಗಳು ಮತ್ತು ಫುಟ್‌ಪೆಗ್‌ಗಳು ಪರ್ಫಾಮೆನ್ಸ್‌ಗೆ ಪೂರಕವಾದ ಅಂಶಗಳಾಗಿವೆ. ಇನ್ನು ಟಿವಿಎಸ್ ಹೊಸ ಅಪಾಚೆ ಆರ್‌ಆರ್310 ಮಾದರಿಯು ನೇರವಾಗಿ ಕವಾಸಕಿ ನಿಂಜಾ 300(Kawasaki Ninja 300) ಮತ್ತು ಕೆಟಿಎಂ ಆರ್‌ಸಿ390(KTM RC390) ಪೈಪೋಟಿ ನೀಡಲಿದ್ದು, ಆದಾಗ್ಯೂ, ಜಪಾನ್ ಮತ್ತು ಆಸ್ಟ್ರಿಯಾ ಕಂಪನಿಗಳು ಟಿವಿಎಸ್ ಮೋಟಾರ್ ಸೈಕಲ್ ನೀಡುವ ಹಲವು ಹೊಸ ವೈಶಿಷ್ಟ್ಯಗಳನ್ನು ನೀಡುವುದಿಲ್ಲ.

Most Read Articles

Kannada
English summary
Tvs 2021 apache rr310 bto motorcycle first batch sold out
Story first published: Friday, September 24, 2021, 21:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X