ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯಿಸಿದ ಟಿವಿಎಸ್ ಮೋಟಾರ್

ಕೋವಿಡ್ ಆತಂಕದಿಂದ ಆಟೋ ಉದ್ಯಮವು ತೀವ್ರ ಹಿನ್ನಡೆ ಅನುಭವಿಸುತ್ತಿದ್ದು, ಹೊಸ ವಾಹನ ಮಾರಾಟದಲ್ಲಿ ಭಾರೀ ಪ್ರಮಾಣದ ಕುಸಿತ ಕಂಡಿದೆ. ಕೋವಿಡ್ ಸಂಕಷ್ಟದಿಂದಾಗಿ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವ ಗ್ರಾಹಕರು ಸೆಳೆಯಲು ಪ್ರಮುಖ ಕಾರು ಕಂಪನಿಗಳು ಹರಸಾಹಸಪಡುತ್ತಿವೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ದೇಶಾದ್ಯಂತ ಕೋವಿಡ್ 2ನೇ ಅಲೆ ಹೆಚ್ಚಾದ ಪರಿಮಾಮ ವಿವಿಧ ರಾಜ್ಯಗಳಲ್ಲಿ ಹಲವು ಕೆಲವು ವಿನಾಯ್ತಿಗಳೊಂದಿಗೆ ಲಾಕ್ಡೌನ್ ಮುಂದುವರಿಸುತ್ತಿದ್ದು, ಹೊಸ ಸುರಕ್ಷಾ ಕ್ರಮಗಳ ಪರಿಣಾಮ ಆಟೋ ಉದ್ಯಮವು ಕಳೆದ ವರ್ಷಕ್ಕಿಂತೂ ಹೆಚ್ಚು ನಷ್ಟು ಅನುಭವಿಸುತ್ತಿದೆ. ಕಳೆದ ವರ್ಷವು ಲಾಕ್‌ಡೌನ್‌ ಹೊಡೆತಕ್ಕೆ ಸಿಲುಕಿದ್ದ ಆಟೋ ಉದ್ಯಮವು ಇದೀಗ ಮತ್ತೆ ಸಂಕಷ್ಟ ಎದುರಿಸುತ್ತಿದ್ದು, ಕುಸಿದಿರುವ ವಾಹನ ಮಾರಾಟವನ್ನು ಸುಧಾರಿಸಲು ಆಟೋ ಕಂಪನಿಗಳು ಹರಸಾಹಸಪಡುತ್ತಿವೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಕೋವಿಡ್ 2ನೇ ಅಲೆ ಹೆಚ್ಚಾದ ಪರಿಣಾಮ ವಾಹನ ಉತ್ಪಾದನೆ ಮತ್ತು ಮಾರಾಟವು ಸಾಕಷ್ಟು ಕುಸಿತ ಕಂಡಿದ್ದು, ಇದೀಗ ಕೋವಿಡ್ ತಗ್ಗುತ್ತಿರುವ ಪರಿಣಾಮ ಆಟೋ ಉದ್ಯಮ ಚಟುವಟಿಕೆಗೆ ಮರುಜೀವಬಂದಂತಾಗಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಆದರೆ ಆರ್ಥಿಕ ಸಂಕಷ್ಟದಿಂದಾಗಿ ಹೊಸ ವಾಹನಗಳ ಖರೀದಿಗೆ ಬುಕ್ಕಿಂಗ್ ಸಲ್ಲಿಕೆ ತೀವ್ರ ಕುಸಿತ ಕಂಡಿರುವುದಲ್ಲದೆ ಈಗಾಗಲೇ ಬುಕ್ಕಿಂಗ್ ಸಲ್ಲಿಕೆ ಮಾಡಿದ್ದ ಲಕ್ಷಾಂತರ ಹೊಸ ವಾಹನ ಖರೀದಿದಾರರು ಕೂಡಾ ಬುಕ್ಕಿಂಗ್ ಅನ್ನು ಸಹ ಹಿಂಪಡೆಯುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಹೊಸ ವಾಹನ ಖರೀದಿಯಿಂದ ಆರ್ಥಿಕ ಸಂಕಷ್ಟ ಹೆಚ್ಚಳವಾಗಬಹುದು ಎನ್ನುವ ಉದ್ದೇಶದಿಂದ ವಾಹನ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದಾರೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಈ ಕಾರಣಕ್ಕಾಗಿ ವಿವಿಧ ಆಟೋ ಕಂಪನಿಗಳು ಗ್ರಾಹಕರಿಗೆ ಖರೀದಿಯನ್ನು ಉತ್ತೇಜಿಸಲು ಹಲವಾರು ಆಫರ್‌ಗಳನ್ನು ನೀಡುತ್ತಿದ್ದು, ಟಿವಿಎಸ್ ಮೋಟಾರ್ ಕಂಪನಿಯು ಸಹ ತನ್ನ ಜನಪ್ರಿಯ ಮೊಪೆಡ್ ಎಕ್ಸ್ಎಲ್ 100 ಮಾದರಿಯ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಹೊಸ ಫೈನಾನ್ಸ್ ಸ್ಕೀಮ್‌ನಲ್ಲಿ ಎಕ್ಸ್ಎಲ್ 100 ಖರೀದಿಸುವ ಗ್ರಾಹಕರಿಗೆ ಶೇ.100 ಸಾಲ ಸೌಲಭ್ಯದೊಂದಿಗೆ 3 ತಿಂಗಳು ಇಎಂಐ ಮರುಪಾವತಿಗೆ ಸಮಯಾವಕಾಶ ನೀಡಲಾಗುತ್ತಿದ್ದು, ಜೊತೆಗೆ ದಿನಂಪ್ರತಿ ರೂ. 49 ಅನ್ವಯವಾಗುವಂತೆ ಇಎಂಐ ಪಾವತಿಸಲು ಅವಕಾಶ ನೀಡುತ್ತಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ದಿನಂಪ್ರತಿ ರೂ.49 ಗಳಾದರೆ ಪ್ರತಿ ತಿಂಗಳು ರೂ. 1,470 ಗಳಂತೆ ಇಎಂಐ ಆಯ್ಕೆಯನ್ನು ನೀಡುತ್ತಿದ್ದು, ಶೇ. 7.99 ಬಡ್ಡಿದರದಲ್ಲಿ ಗರಿಷ್ಠ ಸಾಲ ಸೌಲಭ್ಯವನ್ನು ಸಹ ಖಾತ್ರಿಪಡಿಸುತ್ತಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಹೊಸ ಫೈನಾನ್ಸ್ ಸೇವೆಗಳಿಗಾಗಿ ಟಿವಿಎಸ್ ಕಂಪನಿಯು ಶ್ರೀರಾಮ್ ಫೈನಾನ್ಸ್, ಎಲ್ ಅಂಡ್ ಟಿ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನಂತಹ ಹಣಕಾಸು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅತಿ ಕಡಿಮೆ ಡೌನ್‌ಪೆಮೆಂಟ್‌ನೊಂದಿಗೆ ಆಕರ್ಷಕ ಇಎಂಐ ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಇನ್ನು ಭಾರತೀಯ ಆಟೋ ಉದ್ಯಮದಲ್ಲಿ ದೀರ್ಘಕಾಲಿಕವಾಗಿ ಮಾರಾಟಗೊಳ್ಳುತ್ತಿರುವ ಮೊಪೆಡ್ ಎಂಬ ಹೆಗ್ಗಳಿಕೆ ಹೊಂದಿರುವ ಎಕ್ಸ್ಎಲ್ 100 ಮಾದರಿಯು ಸದ್ಯ ಹೊಸ ಎಮಿಷನ್ ನಿಯಮ ಅನುಸಾರವಾಗಿ ಮಾರಾಟಗೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಒಟ್ಟು ಐದು ವೆರಿಯೆಂಟ್‌ಗಳಲ್ಲಿ ಮಾರಾಟಗೊಳ್ಳುತ್ತಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಕಂಫರ್ಟ್, ಹೆವಿ ಡ್ಯೂಟಿ, ಹೆವಿ ಡ್ಯೂಟಿ ಐ-ಟಚ್‌ಸ್ಮಾರ್ಟ್, ಹೆವಿ ಡ್ಯೂಟಿ ಐ-ಟಚ್‌ಸ್ಮಾರ್ಟ್ ಸ್ಪೆಷಲ್ ಎಡಿಷನ್, ಕಂಫರ್ಟ್ ಐ-ಟಚ್‌ಸ್ಮಾರ್ಟ್ ಮತ್ತು ಹೆವಿ ಡ್ಯೂಟಿ ಐ-ಟಚ್‌ಸ್ಮಾರ್ಟ್ ವಿನ್ ಎಡಿಷನ್ ವೆರಿಯೆಂಟ್ ಹೊಂದಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 40,015 ರಿಂದ ಟಾಪ್ ಎಂಡ್ ಮಾದರಿಯು ರೂ. 50,126 ಬೆಲೆ ಹೊಂದಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಟಿವಿಎಸ್ ಮೋಟಾರ್ ಕಂಪನಿಯು ಹೊಸ ಮೊಪೆಡ್‌ನಲ್ಲಿ ಬಿಎಸ್-6 ಪ್ರೇರಿತ 99.7 ಸಿಸಿ ಸಿಂಗಲ್ ಸಿಲಿಂಡರ್, ನಾಲ್ಕು-ಸ್ಟ್ರೋಕ್ ಎಂಜಿನ್ ಜೋಡಿಸಿದ್ದು, 4.3 ಬಿಹೆಚ್‌ಪಿ ಮತ್ತು 6.5 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಎಕ್ಸ್ಎಲ್ 100 ಮೊಪೆಡ್ ಖರೀದಿಗೆ ಅತ್ಯುತ್ತಮ ಇಎಂಐ ಆಯ್ಕೆ ಪರಿಚಯ

ಫ್ಯೂಲ್ ಇಂಜೆಕ್ಷನ್ ತಂತ್ರಜ್ಞಾನ ಬಳಕೆಯಿಂದಾಗಿ ಎಕ್ಸ್ಎಲ್ 100 ಮಾದರಿಯ ಮೈಲೇಜ್ ಪ್ರಮಾಣವು ಈ ಹಿಂದಿಗಿಂತಲೂ ಶೇ. 15 ರಷ್ಟು ಹೆಚ್ಚಳವಾಗಿದ್ದು, ಟಾಪ್ ಎಂಡ್ ಮಾದರಿಯಾಗಿರುವ ಹೆವಿ ಡ್ಯೂಟಿ ಐ-ಟಚ್‌ಸ್ಮಾರ್ಟ್ ವಿನ್ ಎಡಿಷನ್‌ನಲ್ಲಿ ಹಲವಾರು ಹೊಸ ವೈಶಿಷ್ಯತೆಗಳೊಂದಿಗೆ ಆನ್-ಆಫ್ ಸ್ವಿಚ್, ಮೊಬೈಲ್ ಚಾರ್ಜಿಂಗ್ ಸಾಕೆಟ್, ಪೆಟ್ರೋಲ್ ರಿಸರ್ವ್ ಇಂಡಿಕೇಟರ್ ಸೇರಿದಂತೆ ಆರಾಮದಾಯಕ ಆಸನ ಸೌಲಭ್ಯವನ್ನು ಒದಗಿಸಲಾಗಿದೆ.

Most Read Articles

Kannada
English summary
TVS announced new finance schemes on XL 100. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X