ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಹೊಸ ಹಣಕಾಸಿನ ವರ್ಷದಲ್ಲಿ ಹಲವಾರು ವಾಹನ ತಯಾರಕ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳನ್ನು ಬೆಲೆಯನ್ನು ಹೆಚ್ಚಿಸಿದೆ. ಟಿವಿಎಸ್ ಮೋಟಾರ್ ಕಂಪನಿಯು ತನ್ನ ಅಪಾಚೆ ಸರಣಿಯ ಆರ್‌ಟಿಆರ್ 160 4ವಿ ಮತ್ತು ಆರ್‌ಟಿಆರ್ 200 4ವಿ ಬೈಕ್‌ಗಳ ಬೆಲೆಯನ್ನು ಏರಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಟಿವಿಎಸ್ ಕಂಪನಿಯು ತನ್ನ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಬೆಲೆಯನ್ನು ರೂ.1,295 ಗಳವರೆಗೆ ಹೆಚ್ಚಿಸಲಾಗಿದೆ. ಇದೀಗ ಈ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಸಿಂಗಲ್-ಚಾನೆಲ್ ಎಬಿಎಸ್ ರೂಪಾಂತರದ ಬೆಲೆಯು ರೂ.1,29,315 ಗಳಾಗಿದೆ. ಇನ್ನು ಇದರ ಡ್ಯುಯಲ್-ಚಾನೆಲ್ ಎಬಿಎಸ್ ರೂಪಾಂತರದ ಬೆಲೆಯು ರೂ.1,34,365 ಗಳಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಟಿವಿಎಸ್ ಕಂಪನಿಯು ತನ್ನ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಡ್ರಮ್ ಮತ್ತು ಡಿಸ್ಕ್ ರೂಪಾಂತರಗಳಲ್ಲಿ ಲಭ್ಯವಿದೆ. ಈ ಎರಡು ರೂಪಾಂತರಗಳ ಬೆಲೆಯನ್ನು ರೂ.45 ದವರೆಗೆ ಹೆಚ್ಚಿಸಿದೆ. ಇದೀಗ ಟಿವಿಎಸ್ ಆರ್‌ಟಿಆರ್ 160 4ವಿ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.1,07,315 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.1,10,365 ಗಳಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕಿನಲ್ಲಿ 197.75 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಈ ಎಂಜಿನ್ ರೈನ್ ಮತ್ತು ಅರ್ಬನ್ ರೈಡಿಂಗ್ ಮೋಡ್‌ಗಳಲ್ಲಿ 17.2 ಬಿಹೆಚ್‍ಪಿ ಪವರ್ ಮತ್ತು 16.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇನ್ನು 'ಸ್ಪೋರ್ಟ್' ಮೋಡ್‌ ನಲ್ಲಿ 20.4 ಬಿಹೆಚ್‍ಪಿ ಪವರ್ ಮತ್ತು 17.25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅದೇ ಶೋವಾ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ, ಇವೆರಡೂ ಪ್ರೀ ಲೋಡ್ ಹೊಂದಾಣಿಕೆ ಮಾಡಬಹುದಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ 270 ಎಂಎಂ ಮತ್ತು 240 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸಿಂಗಲ್-ಚಾನೆಲ್ ಸೂಪರ್-ಮೋಟೋ ಎಬಿಎಸ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಆಯ್ಕೆಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಟಿವಿಎಸ್ ಮೋಟಾರ್ ಕಂಪನಿಯು ಈ ವರ್ಷದ ಮಾರ್ಚ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಮಾರ್ಚ್ ತಿಂಗಳಿನಲ್ಲಿ ಒಟ್ಟು 3.22 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಟಿವಿಎಸ್ ಕಂಪನಿಯು 2020ರ ಮಾರ್ಚ್ ತಿಂಗಳಿನಲ್ಲಿ 1.44 ಲಕ್ಷ ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟವು 123%ನಷ್ಟು ಹೆಚ್ಚಳವಾಗಿದೆ. ಬೈಕ್ ಸೆಗ್'ಮೆಂಟಿನ ಮಾರಾಟವು 136%ನಷ್ಟು ಹೆಚ್ಚಳವಾಗಿದ್ದರೆ, ಸ್ಕೂಟರ್ ಸೆಗ್'ಮೆಂಟಿನ ಮಾರಾಟವು 206%ನಷ್ಟು ಹೆಚ್ಚಳವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಬೈಕ್‌ಗಳು

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 200 ಮತ್ತು ಬಜಾಜ್ ಎನ್‌ಎಸ್ 200 ಬೈಕ್‌ಗಳಿಗೆ ಪೈಪೋಟಿ ನೀಡುತ್ತದೆ. ಇನ್ನು ವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮತು ಆರ್‌ಟಿಆರ್ 200 4ವಿ ಬೈಕ್‌ಗಳ ಬೆಲೆ ಏರಿಕೆಯು ಮಾರಾಟದ ಮೇಲೆ ಪರಿಣಾಮ ಬೀರುವುದಿಲ್ಲವೆಂದು ನಿರೀಕ್ಷಿಸುತ್ತೇವೆ.

Most Read Articles

Kannada
English summary
TVS Apache RTR 200 4V And Apache 160 4V Prices Hiked. Read In Kannada.
Story first published: Monday, April 12, 2021, 18:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X