ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಹೊಂದಿರುವ TVS iQube ಫಸ್ಟ್ ರೈಡ್ ರಿವ್ಯೂ

ಎಲೆಕ್ಟ್ರಿಕ್ ವಾಹನ ಮಾರಾಟವು ಇತ್ತೀಚೆಗೆ ಉತ್ತಮ ಬೇಡಿಕೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ವಿವಿಧ ವಾಹನ ತಯಾರಕ ಕಂಪನಿಗಳು ಹಲವಾರು ಹೊಸ ಮಾದರಿಯ ಇವಿ ವಾಹನಗಳನ್ನು ಬಿಡುಗಡೆ ಮಾಡಿವೆ. ಟಿವಿಎಸ್ ಮೋಟಾರ್(TVS Motor) ಕಂಪನಿಯು ಸಹ ಹೊಸ ಪ್ಲ್ಯಾಟ್‌ಫಾರ್ಮ್ ಅಡಿ ಐಕ್ಯೂಬ್(iQube) ಮಾದರಿಯನ್ನು ಪರಿಚಯಿಸಿದ್ದು, ಹೊಸ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ.

ಹೊಸ ಐಕ್ಯೂಬ್ ಸ್ಕೂಟರ್ ಬಿಡುಗಡೆಯ ನಂತರ ಡ್ರೈವ್‌ಸ್ಪಾರ್ಕ್ ತಂಡಕ್ಕೂ ಹೊಸ ಸ್ಕೂಟರ್ ಕಾರ್ಯಕ್ಷಮತೆ ಕುರಿತಾಗಿ ತಿಳಿಯಲು ಆಹ್ವಾನ ನೀಡಿದ್ದ ಟಿವಿಎಸ್ ಮೋಟಾರ್ ಕಂಪನಿಯು ಇವಿ ವಾಹನ ಮಾರಾಟದಲ್ಲಿ ತನ್ನ ಹೊಸ ಐಕ್ಯೂಬ್ ಮಾದರಿಯೊಂದಿಗೆ ಹೊಸ ಸಂಚಲನಕ್ಕೆ ಸಿದ್ದವಾಗಿದೆ. ಗ್ರಾಹಕರ ಬೇಡಿಕೆಯನ್ನು ಅನುಸರಿ ಹೊಸ ವಾಹನವನ್ನು ಅಭಿವೃದ್ದಿಗೊಳಿಸಿರುವ ಟಿವಿಎಸ್ ಕಂಪನಿಯು ಪ್ರತಿಸ್ಪರ್ಧಿ ಮಾದರಿಗಳಿಂತಲೂ ಉತ್ತಮ ಬೆಲೆಯೊಂದಿಗೆ ಆಕರ್ಷಕ ಮೈಲೇಜ್ ರೇಂಜ್ ನೀಡಿದೆ.

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಆಕರ್ಷಕ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬಂದಿದ್ದು, ಹೊಸ ಸ್ಕೂಟರ್‌ನಲ್ಲಿ 4.4kW ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ ಉತ್ತಮ ಮೈಲೇಜ್ ಹೊಂದಿದೆ. ಪ್ರತಿ ಗಂಟೆಗೆ ಗರಿಷ್ಠ 78 ಕಿಮೀ ಟಾಪ್ ಸ್ಪೀಡ್‌ನೊಂದಿಗೆ ಎಕಾನಮಿ ಮತ್ತು ಪವರ್ ಮೊಡ್ ಮೂಲಕ ಅತ್ಯುತ್ತಮ ರೈಡಿಂಗ್ ಸೌಲಭ್ಯವನ್ನು ಒದಗಿಸುತ್ತದೆ.

ಎಕಾನಮಿ ಮೋಡ್‌ನಲ್ಲಿ ಐಕ್ಯೂಬ್ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 75 ಕಿಮೀ ಮೈಲೇಜ್ ಮತ್ತು ಪವರ್ ಮೋಡ್‌ ರೈಡಿಂಗ್‌ನಲ್ಲಿ ಗರಿಷ್ಠ 70 ಕಿಮೀ ಮೈಲೇಜ್ ಹಿಂದಿರುಗಿಸಲಿದ್ದರೂ ಉತ್ತಮ ಬ್ಯಾಟರಿ ಪ್ಯಾಕ್‌ನೊಂದಿಗೆ ಟಾಪ್ ಸ್ಪೀಡ್‌ನಲ್ಲಿ ಗಮನಸೆಳೆಯುತ್ತದೆ.

Most Read Articles

Kannada
English summary
Tvs iqube kannada review video range features specs details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X