ರಿವ್ಯೂ ವಿಡಿಯೋ: ಹೋಂಡಾ ಆಕ್ಟಿವಾ 125 ಮಾದರಿಗಿಂತಲೂ ಟಿವಿಎಸ್ ಜೂಪಿಟರ್ 125 ಯಾಕೆ ಬೆಸ್ಟ್?

ಟಿವಿಎಸ್ ಮೋಟಾರ್(TVS Motor) ಕಂಪನಿಯು ಜೂಪಿಟರ್ ಸ್ಕೂಟರ್ ಮಾದರಿಯ ಮೂಲಕ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಜೂಪಿಟರ್ ಮಾದರಿಯು ಸದ್ಯ ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಎರಡನೇ ಅತಿ ಹೆಚ್ಚು ಬೇಡಿಕೆ ಹೊಂದಿರುವ ಸ್ಕೂಟರ್ ಮಾದರಿಯಾಗಿದ್ದು, 110 ಸಿಸಿ ಜೂಪಿಟರ್ ಸ್ಕೂಟರ್ ಮಾದರಿಯನ್ನು ಟಿವಿಎಸ್‌ ಕಂಪನಿಯು ಇದೀಗ 125 ಸಿಸಿ ಎಂಜಿನ್ ಆಯ್ಕೆಯೊಂದಿಗೆ ಉನ್ನತೀಕರಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಟಿವಿಎಸ್ ಕಂಪನಿಯು ಈಗಾಗಲೇ 125 ಸಿಸಿ ವಿಭಾಗದಲ್ಲಿ ಎನ್‌ಟಾರ್ಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದ್ದರೂ ಸಹ ಎನ್‌ಟಾರ್ಕ್ 125 ಮಾದರಿಯನ್ನು ಯುವ ಗ್ರಾಹಕರಿಗಾಗಿ ಮತ್ತು ಜೂಪಿಟರ್ 125 ಮಾದರಿಯನ್ನು ಎಲ್ಲಾ ವರ್ಗದ ಗ್ರಾಹಕರು ಇಷ್ಟಪಡುವಂತೆ ಉನ್ನತೀಕರಿಸಿದ ಎಂಜಿನ್, ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಮತ್ತು ಆರಾಮದಾಯಕ ಸವಾರಿಗಾಗಿ ಹಲವಾರು ಹೊಸ ಫೀಚರ್ಸ್‌ಗಳನ್ನು ನೀಡುವ ಮೂಲಕ ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲು ಸಿದ್ದವಾಗಿದೆ.

ಮಾರುಕಟ್ಟೆಯಲ್ಲಿ ಸದ್ಯ ಹೋಂಡಾ ಆಕ್ಟಿವಾ 110 ಸಿಸಿ ಮಾದರಿಯು ಸ್ಕೂಟರ್ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದ್ದು, ತದನಂತರ ಆಕ್ಟಿವಾ 125 ಮತ್ತು ಜೂಪಿಟರ್ ಸ್ಕೂಟರ್ ನಡುವೆ ಸಾಕಷ್ಟು ಪೈಟೋಟಿಯಿದೆ. ಇದೀಗ ಜೂಪಿಟರ್ ಮಾದರಿಯು ಸಹ ಆಕ್ಟಿವಾ 125 ಸರಿಸಮನಾದ ಎಂಜಿನ್ ಆಯ್ಕೆಯೊಂದಿಗೆ ಮತ್ತು ಆಕ್ಟಿವಾ 125 ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್, ಇಂಧನ ದಕ್ಷತೆಯನ್ನು ಪಡೆದುಕೊಂಡಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿದೆ.

ಹೊಸ ಸ್ಕೂಟರ್ ಮಾದರಿಯನ್ನು ಟಿವಿಎಸ್ ಕಂಪನಿಯು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಡ್ರಮ್ ಬ್ರೇಕ್ ಸ್ಟೀಲ್ ವ್ಹೀಲ್ ವೆರಿಯೆಂಟ್, ಡ್ರಮ್ ಬ್ರೇಕ್ ಅಲಾಯ್ ವ್ಹೀಲ್ ವೆರಿಯೆಂಟ್ ಮತ್ತು ಫ್ರಂಟ್ ಡಿಸ್ಕ್ ಅಲಾಯ್ ವ್ಹೀಲ್ ವೆರಿಯೆಂಟ್‌ನೊಂದಿಗೆ ದೆಹೆಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 73,400 ರಿಂದ ಹೈ ಎಂಡ್ ಮಾದರಿಯು ರೂ. 81,300 ಬೆಲೆ ಹೊಂದಿದೆ.

ಪ್ರತಿ ಸ್ಪರ್ಧಿಯಾದ ಹೋಂಡಾ ಆಕ್ಟಿವಾ 125 ಮಾದರಿಯು ಸಹ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ರೂ.72,637ರಿಂದ ಟಾಪ್ ಎಂಡ್ ಮಾದರಿಯು ರೂ. 79,760 ಬೆಲೆ ಹೊಂದಿದ್ದು, ಹೊಚ್ಚ ಹೊಸ ಫೀಚರ್ಸ್ ಮತ್ತು ಗುಣಮಟ್ಟದ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಜೂಪಿಟರ್ 125 ಸ್ಕೂಟರ್ ಮಾದರಿಯು ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ವಿನ್ಯಾಸವು ಸ್ಕೂಟರ್‌ಗೆ ಹೊಸ ಆಕರ್ಷಣೆ ತಂದಿವೆ.

ಜೊತೆಗೆ ಹೊಸ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಸ್ಟಾರ್ಟ್-ಸ್ಟಾಪ್ ಸಿಸ್ಟಂ, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಮತ್ತು ಯುಎಸ್ಬಿ ಚಾರ್ಜಿಂಗ್ ಸಾಕೆಟ್ ಅನ್ನು ಉನ್ನತ ಮಾದರಿಯಲ್ಲಿ ಜೋಡಿಸಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್ ಡಿಜಿಟಲ್ ರೂಪದಲ್ಲಿ ಸಮಯ, ನೈಜ-ಸಮಯದ ಇಂಧನ ಬಳಕೆ, ಸರಾಸರಿ ಇಂಧನ ಬಳಕೆ ಮತ್ತು ಇಂಧನ ಮಟ್ಟದ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಈ ಹೊಸ ಸ್ಕೂಟರ್‌ನಲ್ಲಿ ಗಮನಿಸಬೇಕಾದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಹೊಸ ಸ್ಕೂಟರ್ ಆಸನದ ಗಾತ್ರವು ಉತ್ತಮವಾಗಿರುವುದು ಹಿಂಬದಿಯ ಸವಾರರೂ ಕೂಡಾ ಅನುಕೂಲಕರವಾಗಿದ್ದು, ಹೊಸ ಸ್ಕೂಟರ್ ಮಾದರಿಯ 110 ಮಾದರಿಗಿಂತಲೂ 65 ಎಂಎಂ ಉದ್ದವಾಗಿದೆ. ಹಾಗೆಯೇ ಫುಟ್ ರೆಸ್ಟ್ ಕೂಡಾ ಸಾಕಷ್ಟು ಸ್ಥಳಾವಕಾಶ ಹೊಂದಿದ್ದು, ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಕಂಪನಿಯು 32 ಲೀಟರ್ ಸಾಮರ್ಥ್ಯದ ಅಂಡರ್ ಸೀಟ್ ಸ್ಟೋರೆಜ್ ಸ್ಥಳಾವಕಾಶ ನೀಡಿದೆ. ಇದರಲ್ಲಿ ಆರಾಮವಾಗಿ ಎರಡು ಫುಲ್ ಫೇಸ್ ಹೆಲ್ಮೆಟ್ ಇಡಬಹುದಾಗಿದ್ದು, ಸ್ಟೋರೇಜ್ ಸಾಮಥ್ಯ ಹೆಚ್ಚಿಸಿರುವುದರಿಂದ ಫ್ಲೋರ್‌ಬೋರ್ಡ್‌‌ನಲ್ಲಿ ಫ್ಯೂಲ್ ಫಿಲ್ಲರ್ ಕ್ಯಾಪ್ ನೀಡಿರುವುದರಿಂದ ನೀವಿಗ ಅರಾಮವಾಗಿ ಇಂಧನ ತುಂಬಿಸಲು ಸುಲಭವಾಗಿದೆ.

Most Read Articles

Kannada
English summary
Tvs jupiter 125 review video segment first features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X