ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಟಿವಿಎಸ್ ಮೋಟಾರ್(TVS Motor) ಕಂಪನಿಯು ತನ್ನ ಜನಪ್ರಿಯ ಜೂಪಿಟರ್ ಸ್ಕೂಟರ್ ಮಾದರಿಯನ್ನು 125 ಸಿಸಿ ಸೆಗ್ಮೆಂಟ್‌ನಲ್ಲಿ ಹೊಸ ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 73,400 ಬೆಲೆ ಹೊಂದಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಜೂಪಿಟರ್ ಸ್ಕೂಟರ್ ಮಾದರಿಯು ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಕೂಟರ್ ಮಾದರಿಯಾಗಿ ಹೊರಹೊಮ್ಮಿದ್ದು, ಇದು ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಸ್ಕೂಟರ್ ಮಾದರಿಯಾಗಿದೆ. ಜೂಪಿಟರ್ ಸ್ಕೂಟರ್ ಮಾದರಿಯು 110 ಸಿಸಿ ಸ್ಕೂಟರ್ ವಿಭಾಗದಲ್ಲಿ ಟಿವಿಎಸ್‌ ಕಂಪನಿಗೆ ಉತ್ತಮ ಬೇಡಿಕೆ ತಂದುಕೊಟ್ಟಿದ್ದು, ಟಿವಿಎಸ್ ಕಂಪನಿಯು ಇದುವರೆಗೆ ಸುಮಾರು 45 ಲಕ್ಷ ಜೂಪಿಟರ್ ಸ್ಕೂಟರ್‌ಗಳನ್ನು ಮಾರಾಟ ಮಾಡಿ ಇದೀಗ ಮತ್ತೊಂದು ಹೊಸ ಬದಲಾವಣೆದೆ ಸಿದ್ದವಾಗಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ಜೂಪಿಟರ್ ಬ್ರಾಂಡ್ ಅನ್ನು ವಿಸ್ತರಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಜೂಪಿಟರ್ ಸ್ಕೂಟರ್ ಎಂಜಿನ್ ಉನ್ನತೀಕರಿಸುವ ಮೂಲಕ 125 ಸಿಸಿ ಕಮ್ಯೂಟರ್ ಸ್ಕೂಟರ್ ವಿಭಾಗದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಸದ್ಯ 125 ಸಿಸಿ ಸ್ಕೂಟರ್‌ಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದ್ದು, ಟಿವಿಎಸ್ ಕಂಪನಿಯು ಕೂಡಾ ತನ್ನ ಜೂಪಿಟರ್ ಸ್ಕೂಟರ್ ಮಾದರಿಯನ್ನು 110 ಸಿಸಿ ಮಾದರಿಯಿಂದ ಇದೀಗ 125 ಸಿಸಿ ಮಾದರಿಗೆ ಉನ್ನತೀಕರಿಸಿ ಬಿಡುಗಡೆ ಮಾಡಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ಈಗಾಗಲೇ 125 ಸಿಸಿ ವಿಭಾಗದಲ್ಲಿ ಎನ್‌ಟಾರ್ಕ್ ಮಾದರಿಯನ್ನು ಮಾರಾಟ ಮಾಡುತ್ತಿದ್ದು, ಎನ್‌ಟಾರ್ಕ್ 125 ಮಾದರಿಯನ್ನು ಯುವ ಗ್ರಾಹಕರಿಗಾಗಿ ಮತ್ತು ಜೂಪಿಟರ್ 125 ಮಾದರಿಯನ್ನು ಎಲ್ಲಾ ಮಾದರಿಯ ಗ್ರಾಹಕರು ಇಷ್ಟಪಡುವಂತೆ ಉನ್ನತೀಕರಿಸಿದ ಎಂಜಿನ್, ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಮತ್ತು ಆರಾಮದಾಯಕ ಸವಾರಿಗಾಗಿ ಹಲವಾರು ಹೊಸ ಫೀಚರ್ಸ್‌ಗಳನ್ನು ನೀಡಲಾಗಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಮಾದರಿಯನ್ನು ಟಿವಿಎಸ್ ಕಂಪನಿಯು ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯು ಡ್ರಮ್ ಬ್ರೇಕ್ ಸ್ಟೀಲ್ ವ್ಹೀಲ್ ವೆರಿಯೆಂಟ್, ಡ್ರಮ್ ಬ್ರೇಕ್ ಅಲಾಯ್ ವ್ಹೀಲ್ ವೆರಿಯೆಂಟ್ ಮತ್ತು ಫ್ರಂಟ್ ಡಿಸ್ಕ್ ಅಲಾಯ್ ವ್ಹೀಲ್ ವೆರಿಯೆಂಟ್‌ನೊಂದಿಗೆ ದೆಹೆಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 73,400 ರಿಂದ ಹೈ ಎಂಡ್ ಮಾದರಿಯು ರೂ. 81,300 ಬೆಲೆ ಹೊಂದಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್ ಮಾದರಿಯು ಸರಳವಾದ ಮತ್ತು ಆಕರ್ಷಕವಾಗಿ ವಿನ್ಯಾಸವನ್ನು ಹೊಂದಿದ್ದು, ಮುಂಭಾಗದ ಏಪ್ರಾನ್ ಮತ್ತು ಸೈಡ್ ಪ್ಯಾನಲ್‌ಗಳಲ್ಲಿ ಪ್ರಮುಖ ಕ್ರೀಸ್ ಲೈನ್‌ಗಳನ್ನು ಪಡೆದುಕೊಂಡಿದೆ. ಕ್ರೋಮ್ ವಿನ್ಯಾಸ ಮತ್ತು ಎಲ್ಇಡಿ ಡಿಆರ್‌ಎಲ್‌ಗಳ ಸೌಲಭ್ಯ ಹೊಸ ಸ್ಕೂಟರ್ ಮುಂಭಾಗದ ಅಂದವನ್ನು ಹೆಚ್ಚಿಸಿದ್ದು, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ವಿನ್ಯಾಸವು ಸ್ಕೂಟರ್‌ಗೆ ಹೊಸ ಆಕರ್ಷಣೆ ತಂದಿವೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ವೈಶಿಷ್ಟ್ಯತೆಗಳ ವಿಷಯದಲ್ಲಿ ಹೊಸ ಸ್ಕೂಟರ್‌ನಲ್ಲಿ ಟಿವಿಎಸ್ ಕಂಪನಿಯು ಸ್ಟಾರ್ಟ್-ಸ್ಟಾಪ್ ಸಿಸ್ಟಂ, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಮತ್ತು ಯುಎಸ್ಬಿ ಚಾರ್ಜಿಂಗ್ ಸಾಕೆಟ್ ಅನ್ನು ಉನ್ನತ ಮಾದರಿಯಲ್ಲಿ ಜೋಡಿಸಿದ್ದು, ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಪ್ಯಾನೆಲ್‌ನಲ್ಲಿ ಡಿಜಿಟಲ್ ಮಾಹಿತಿ ಪ್ರದರ್ಶಿಸಲಿದ್ದು, ಸಮಯ, ನೈಜ-ಸಮಯದ ಇಂಧನ ಬಳಕೆ, ಸರಾಸರಿ ಇಂಧನ ಬಳಕೆ ಮತ್ತು ಇಂಧನ ಮಟ್ಟವನ್ನು ನಿಖರವಾಗಿ ತಿಳಿಸುತ್ತದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಹೊಸ ಸ್ಕೂಟರ್‌ನಲ್ಲಿ ಗಮನಿಸಬೇಕಾದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಹೊಸ ಸ್ಕೂಟರ್ ಆಸನದ ಗಾತ್ರವು ಉತ್ತಮವಾಗಿರುವುದು ಹಿಂಬದಿಯ ಸವಾರರಿಗೆ ಉತ್ತಮವಾಗಿದೆ. ಹೊಸ ಸ್ಕೂಟರ್ ಮಾದರಿಯ 110 ಮಾದರಿಗಿಂತಲೂ 65 ಎಂಎಂ ಉದ್ದವಾಗಿದ್ದು, ಸವಾರ ಮತ್ತು ಪಿಲಿಯನ್ ಎರಡಕ್ಕೂ ಹೆಚ್ಚಿನ ಸ್ಥಳವನ್ನು ಅನುವು ಮಾಡಿಕೊಡುತ್ತದೆ. ಜೊತೆಗೆ ಆಸನದ ಎತ್ತರವನ್ನು 765 ಎಂಎಂಗೆ ಹೊಂದಿಸಬಹುದಾಗಿದ್ದು, ಫುಟ್ ರೆಸ್ಟ್ ಕೂಡಾ ಸಾಕಷ್ಟು ಸ್ಥಳಾವಕಾಶ ಹೊಂದಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಇದರ ಜೊತೆಗೆ ಹೊಸ ಸ್ಕೂಟರಿನ ಅಂಡರ್‌ಸೀಟ್ ಸ್ಟೋರೇಜ್ ವಿಭಾಗವು 125 ಸ್ಕೂಟರ್ ವಿಭಾಗದಲ್ಲಿಯೇ ಅತ್ಯುತ್ತಮ ಎಂದು ಹೇಳಬಹುದು. ಹೊಸ ಸ್ಕೂಟರ್‌ನಲ್ಲಿ ಕಂಪನಿಯು 32 ಲೀಟರ್ ಸಾಮರ್ಥ್ಯದ ಸ್ಟೋರೆಜ್ ಸ್ಥಳಾವಕಾಶ ನೀಡಿದ್ದು, ಇದರಲ್ಲಿ ಆರಾಮವಾಗಿ ಎರಡು ಫುಲ್ ಫೇಸ್ ಹೆಲ್ಮೆಟ್ ಇಡಬಹುದಾಗಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಅಂಡರ್ ಸ್ಟೋರೇಜ್ ಸ್ಥಳಾವಕಾಶ ಹೆಚ್ಚಿಸುವ ಉದ್ದೇಶದಿಂ ಸ್ಕೂಟರ್‌ರಿನ ಫ್ಲೋರ್‌ಬೋರ್ಡ್‌ನಲ್ಲಿ 5-ಲೀಟರ್ ಇಂಧನ ಟ್ಯಾಂಕ್ ಅನ್ನು ಇರಿಸಲಾಗಿದ್ದು, ಫ್ಯೂಯಲ್ ಫಿಲ್ಲರ್ ಕ್ಯಾಪ್ ಅನ್ನು ನೀವಿಗ ಅರಾಮವಾಗಿ ತೆಗೆದು ಹಾಕಬಹುದಾಗಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಎಂಜಿನ್ ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆ

ಟಿವಿಎಸ್ ಮೋಟಾರ್ ಕಂಪನಿಯು ಹೊಸ ಜೂಪಿಟರ್ 125 ಸ್ಕೂಟರ್‌ ಮಾದರಿಯಲ್ಲಿ ಹೊಸದಾಗಿ 124.8 ಸಿಸಿ ಎಂಜಿನ್ ಅನ್ನು ಜೋಡಿಸಿದ್ದು, ಇದು 8.3 ಬಿಎಚ್‌ಪಿ ಮತ್ತು 10.5 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಎನ್‌ಟಾರ್ಕ್ 125 ಮಾದರಿಯಲ್ಲಿ ಕಂಪನಿಯು 3-ವಾಲ್ವ್ ಸೆಟಪ್ ಅನ್ನು ಬಳಸಲಿದ್ದಲ್ಲಿ ಜೂಪಿಟರ್ 125 ಮಾದರಿಯಲ್ಲಿ 2 ವಾಲ್ಟ್ ಸೆಟಪ್ ಜೋಡಿಸಿದ್ದು, ಜೊತೆಗೆ ಇಟಿಎಫ್‌ಐ ಮತ್ತು ಇಂಟೆಲಿ-ಗೋ ಆಟೋ ಸ್ಟಾರ್ಟ್/ಸ್ಟಾಪ್ ತಂತ್ರಜ್ಞಾನವನ್ನು ಪಡೆಯುತ್ತದೆ. ಇದರರ್ಥ ಸ್ಟಾರ್ಟರ್ ಮೋಟಾರ್ ಅನ್ನು ಐಎಸ್‌ಜಿಯಿಂದ ಬದಲಾಯಿಸಲಾಗಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಈ ಮೂಲಕ ಸಂಪೂರ್ಣವಾಗಿ ಹೊಸ ಚಾಸಿಸ್ ಪಡೆದುಕೊಂಡಿರುವ ಜೂಪಿಟರ್ 125 ಮಾದರಿಯಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಷೆಷನ್ ಜೊತೆಗೆ ಗ್ಯಾಸ್-ಚಾರ್ಜ್ಡ್ ಸಿಂಗಲ್-ಶಾಕ್ ಸಸ್ಷೆಷನ್‌ಗಳನ್ನು ನೀಡಲಾಗಿದ್ದು, ಸೆಗ್ಮೆಂಟ್ ಫಸ್ಟ್ 220 ಎಂಎಂ ಮುಂಭಾಗದ ಡಿಸ್ಕ್ ಮತ್ತು ಹಿಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಜೋಡಣೆಯೊಂದಿಗೆ ಉತ್ತಮ ಬ್ರೇಕಿಂಗ್ ಹಿಡಿತ ಹೊಂದಿದೆ.

ಹೊಸ ಫೀಚರ್ಸ್, ಬಲಿಷ್ಠ ಎಂಜಿನ್ ಆಯ್ಕೆ ಹೊಂದಿರುವ TVS Jupiter 125 ಸ್ಕೂಟರ್ ಬಿಡುಗಡೆ

ಇದರೊಂದಿಗೆ ಹೊಸ ಜೂಪಿಟರ್ 125 ಸ್ಕೂಟರ್ ಮಾದರಿಯು ಹೋಂಡಾ ಆಕ್ಟಿವಾ 125, ಯಮಹಾ ಫಾಸಿನೊ 125 ಮತ್ತು ಸುಜುಕಿ ಆಕ್ಸೆಸ್ 125 ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಶೀಘ್ರದಲ್ಲೇ ಹೊಸ ಸ್ಕೂಟರ್ ವಿತರಣೆಯು ಆರಂಭವಾಗಲಿದೆ.

Most Read Articles

Kannada
English summary
Tvs jupiter 125 scooter launched from rs 73 400 performance features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X