ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯು ಟಿವಿಎಸ್ ತನ್ನ ಎಕ್ಸ್‌ಎಲ್100 ಮೊಪೆಡ್ ಅನ್ನು ಹೊಸ ಬಣ್ಣದ ಆಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಬಣ್ಣದ ಆಯ್ಕೆಯೊಂದಿಗೆ ಟಿವಿಎಸ್ ಎಕ್ಸ್‌ಎಲ್100 (TVS XL100) ಮೊಪೆಡ್ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಯಲ್ಲಿ ಪ್ರವೇಶಿಸಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ಉನ್ನತ ಮಟ್ಟದ ವಿಶ್ವಾಸಾರ್ಹತೆ, ಇಂಧನ ದಕ್ಷತೆ ಮತ್ತು ಹೆದ್ದಾರಿಯುದ್ದಕ್ಕೂ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಪ್ರಸ್ತುತ ಎಕ್ಸ್‌ಎಲ್100 ಮಿಂಟ್ ಬ್ಲೂ, ಲಸ್ಟರ್ ಗೋಲ್ಡ್, ರೆಡ್ ಬ್ಲ್ಯಾಕ್ ಮತ್ತು ಗ್ರೇ ಬ್ಲಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿತ್ತು. ಇದೀಗ ಹೊಸ ಕೋರಲ್ ಸಿಲ್ಕ್ ಎಂಬ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಈ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ಆಕರ್ಷಕ ವಿನ್ಯಾಸನವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಈ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ಆರಂಬಿಕ ಬೆಲೆಯು ರೂ.41,139 ಆಗಿದೆ. ಅಗ್ಗದ ಚಾಲನಾ ವೆಚ್ಚ ಮತ್ತು ಕೈಗೆಟುಕುವ ನಿರ್ವಹಣೆಗಾಗಿ ಕಂಪನಿಯ ಸಾಲಿನಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಇದರ ವಿನ್ಯಾಸವು ಎತ್ತರದ ಸೆಟ್ ಹ್ಯಾಂಡಲ್‌ಬಾರ್, ಸಿಂಗಲ್ ಸೀಟ್ ಮತ್ತು ಸ್ಲಿಮ್ ಟೈರ್‌ಗಳೊಂದಿಗೆ ಉಪಯುಕ್ತವಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಈ ಮೊಪೆಡ್ ವನ್ನು ಮಹಿಳೆಯರು ಮತ್ತು ವಯಸ್ಕರು ಸುಲಭವಾಗಿ ಚಲಾಯಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಎಕ್ಸ್‌ಎಲ್ ದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ 86 ಕೆಜಿ ತೂಕವನ್ನು ಹೊಂದಿದೆ. ಇನ್ನು ಇದು 130 ಕೆಜಿ ಪೇಲೋಡ್ ಸಾಮರ್ಥ್ಯ ಮತ್ತು 4 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಈ ಟಿವಿಎಸ್ ಎಕ್ಸ್‌ಎಲ್100 ಕಂಫರ್ಟ್ ಐ-ಟಚ್‌ಸ್ಟಾರ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ತಂತ್ರಜ್ಞಾನವನ್ನು ಹೊಂದಿದ್ದು ಅದು ಮೊಪೆಡ್‌ನ ತ್ವರಿತವಾಗಿ ಸ್ಟಾರ್ಟ್ ಆಗಲು ಸಹಾಯ ಮಾಡುತ್ತದೆ. ಈ ಮೊಪೆಡ್ ನಲ್ಲಿ ಟರ್ನ್ ಇಂಡಿಕೇಟರ್‌ಗಳಿಂದ ಸುತ್ತುವರಿದ ಎಲ್ಇಡಿ ಸ್ಟ್ರಿಪ್‌ನೊಂದಿಗೆ ದುಂಡಾದ ಹ್ಯಾಲೊಜೆನ್ ಹೆಡ್‌ಲ್ಯಾಂಪ್ ಅನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಇನ್ನು ಈ ಎಕ್ಸ್‌ಎಲ್100 ಮೊಪೆಡ್ ನಲ್ಲಿ ಲಗೇಜ್ ಲೋಡ್ ಮಾಡಲು ಇದು ದೊಡ್ಡ ಫುಟ್‌ಬೋರ್ಡ್ ಅನ್ನು ಪಡೆಯುತ್ತದೆ, ಹೆಚ್ಚು ಆರಾಮದಾಯಕ ಸವಾರಿ ಸ್ಥಾನಕ್ಕಾಗಿ ಎರಡೂ ಬದಿಗಳಲ್ಲಿ ಫುಟ್‌ಪೆಗ್‌ಗಳಿವೆ. ಈ ಟಿವಿಎಸ್ ಎಕ್ಸ್‌ಎಲ್100 ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಅನಲಾಗ್ ಸ್ಪೀಡೋಮೀಟರ್, ಓಡೋಮೀಟರ್, ಹೈ-ಬೀಮ್ ಮತ್ತು ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿವೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಕಂಫರ್ಟ್ ರೂಪಾಂತರವು ಯುಎಸ್‌ಬಿ ಫೋನ್ ಚಾರ್ಜಿಂಗ್ ಸಾಕೆಟ್ ಅನ್ನು ಸಹ ಹೊಂದಿದೆ. ಇದು ಎಕ್ಸಾಸ್ಟ್ ಕವರ್‌ನಲ್ಲಿ ಕ್ರೋಮ್ ಅನ್ನು ಸಹ ಒಳಗೊಂಡಿದೆ. ಇನ್ನು ಈ ಟಿವಿಎಸ್ ಎಕ್ಸ್‌ಎಲ್ 100 ಮೊಪೆಡ್ ನಲ್ಲಿ 99.7 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಈ ಎಂಜಿನ್ 6000 ಆರ್‌ಪಿಎಂನಲ್ಲಿ 4.3 ಬಿಹೆಚ್‍ಪಿ ಪವರ್ ಮತ್ತು 3500 ಆರ್‌ಪಿಎಂನಲ್ಲಿ 6.0 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸಿಂಗಲ್-ಸ್ಪೀಡ್ ಗೇರ್ ಬಾಕ್ಸ್'ಗೆ ಸೆಂಟ್ರಿಫ್ಯೂಗಲ್ ವೆಟ್ ಕ್ಲಚ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಸ್ಟ್ಯಾಂಡರ್ಡ್ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಸೆಟಪ್ ಅನ್ನು ಹೊಂದಿದೆ. ಅಂಪ್ ಗಳಲ್ಲಿ ಮತ್ತು ಗುಂಡಿಗಳಲ್ಲಿ ಸುಲಭವಾಗಿ ಸಾಗುತ್ತದೆ. ಎಕ್ಸ್‌ಎಲ್ 100 ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ. ಇನ್ನು ಎಕ್ಸ್‌ಎಲ್ 100 ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಗಳ ಜೊತೆಯಲ್ಲಿ ಬ್ರ್ಯಾಂಡ್‌ನ ಸಿಂಕ್ರೊನೈಸ್ಡ್ ಬ್ರೇಕಿಂಗ್ ಸಿಸ್ಟಂ ಕೂಡ ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ನಲ್ಲಿ ಹೊಸ ತಲೆಮಾರಿನ ‘ಐ-ಟಚ್ ಸ್ಟಾರ್ಟ್ ಸಿಸ್ಟಂ ಹೊಂದಿದ್ದು, ಇದು ಎಂಜಿನ್ ಕಿಲ್ ಸ್ವಿಚ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಎಡ ಹ್ಯಾಂಡಲ್‌ಬಾರ್‌ನಲ್ಲಿ ಸ್ವಿಚ್‌ಗಳಿವೆ, ಅದು ಹೆಡ್‌ಲ್ಯಾಂಪ್‌ಗಳು, ಹಾರ್ನ್ ಸ್ವಿಚ್ ಮತ್ತು ಟರ್ನ್ ಇಂಡಿಕೇಟರ್ ಕಂಟ್ರೋಲ್ ಗಳಿಗೆ ಹೈ ಮತ್ತು ಲೋ ಬೀಮ್ ಅನ್ನು ಕಂಟ್ರೋಲ್ ಮಾಡುತ್ತದೆ. ಈ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ನಲ್ಲಿ ಈ ರೀತಿಯ ಹಲವು ಆಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಇದರೊಂದಿಗೆ ಟಿವಿಎಸ್ ಮೋಟಾರ್ ಕಂಪನಿಯು ತನ್ನ ರೇಡಿಯಾನ್ ಬೈಕ್ ಅನ್ನು ಹೊಸ ಬಣ್ಣಗಳ ಅಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಟಿವಿಎಸ್ ರೇಡಿಯಾನ್( ಬೈಕ್ ಅನ್ನು ಬಿಡುಗಡೆಗೊಳಿಸಿರಬಹುದು. ಹೊಸ ಟಿವಿಎಸ್ ರೇಡಿಯಾನ್ ಬೈಕ್ ರೆಡ್ ಮತ್ತು ಬ್ಲ್ಯಾಕ್ ಹಾಗೂ ಬ್ಲೂ ಮತ್ತು ಬ್ಲ್ಯಾಕ್ ಎಂಬ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಹೊಸ ಡ್ಯುಯಲ್-ಟೋನ್ ರೇಡಿಯಾನ್ ಸ್ಟ್ಯಾಂಡರ್ಡ್ ಕಲರ್ ಆಯ್ಕೆಗಳಿಗಿಂತ ಸುಮಾರು ರೂ.900 ಹೆಚ್ಚಾಗಿದೆ. ಟಿವಿಎಸ್ ರೇಡಿಯಾನ್ ಡ್ಯುಯಲ್-ಟೋನ್ ಡ್ರಮ್ ಬ್ರೇಕ್ ವೆರಿಯಂಟ್ ಬೆಲೆಯು ರೂ.68,982 ಗಳಾದರೆ, ಡ್ಯುಯಲ್ ಟೋನ್ ಡಿಸ್ಕ್ ಬ್ರೇಕ್ ವೆರಿಯಂಟ್ ಬೆಲೆಯು ರೂ.71,982 ಗಳಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ TVS XL100 ಮೊಪೆಡ್

ಕಂಪನಿಯು ತನ್ನ ಅತಿ ಹೆಚ್ಚು ಮಾರಾಟವಾಗುವ ಟಿವಿಎಸ್ ಎಕ್ಸ್‌ಎಲ್100 ವಿಶೇಷ ಇಎಂಐ ಯೋಜನೆಗಳನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಇತರ ಹಣಕಾಸು ಯೋಜನೆಗಳನ್ನು ಕೂಡ ಒಳಗೊಂಡಿದೆ. ಇನ್ನು ಹೊಸ ಬಣ್ಣದ ಆಯ್ಕೆಯೊಂದಿಗೆ ಜನಪ್ರಿಯ ಟಿವಿಎಸ್ ಎಕ್ಸ್‌ಎಲ್100 ಮೊಪೆಡ್ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಅಲ್ಲದೇ ಹಬ್ಬದ ಸೀಸನ್ ನಲ್ಲಿ ಮಾರಾಟದಲ್ಲಿ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ.

Most Read Articles

Kannada
English summary
Tvs launched new coral silk colour option for xl100 find here all details
Story first published: Sunday, October 24, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X