ಕೈಗೆಟುಕುವ ದರದಲ್ಲಿ 2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ 2021ರ ಸ್ಟಾರ್ ಸಿಟಿ ಪ್ಲಸ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಕಮ್ಯೂಟರ್ ಬೈಕಿನ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.68,645 ಗಳಾಗಿದೆ.

ಕೈಗೆಟುಕುವ ದರದಲ್ಲಿ 2021ರ ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್ 'ರೊಟೊ ಪೆಟಲ್ ಡಿಸ್ಕ್ ಬ್ರೇಕ್‌'ಗಳೊಂದಿಗೆ ಸ್ಟ್ಯಾಂಡರ್ಡ್ ಆಗಿ ಬರುತ್ತದೆ. ಇದು ಇಟಿ-ಫೈ (ಇಕೋ ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್), ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್ ಸೆಟಪ್‌ನಂತಹ ಕೆಲವು ಫೀಚರ್ ಗಳನ್ನು ಪಡೆದುಕೊಂಡಿವೆ. 2021ರ ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಈಗ ಹೊಸ ರೆಡ್-ಬ್ಲ್ಯಾಕ್ ಎಂಬ ಡ್ಯುಯಲ್ ಟೋನ್ ಬಣ್ಣಗಳಲ್ಲಿ ಲಭ್ಯವಿದೆ.

ಕೈಗೆಟುಕುವ ದರದಲ್ಲಿ 2021ರ ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಇನ್ನು ಇದರೊಂದಿಗೆ ಬ್ಲ್ಯಾಕ್ ಬ್ಲೂ, ಗ್ರೇ ಬ್ಲ್ಯಾಕ್, ರೆಡ್ ಬ್ಲ್ಯಾಕ್ ಮತ್ತು ವೈಟ್ ಬ್ಲ್ಯಾಕ್ ಅನ್ನು ಒಳಗೊಂಡಿರುವ ಇತರ ಬಣ್ಣಗಳಲ್ಲಿಯು 2021ರ ಬಜಾಜ್ ಸ್ಟಾರ್ ಸಿಟಿ ಪ್ಲಸ್ ಲಭ್ಯವಿರುತ್ತದೆ. ಈ ಹೊಸ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

2021ರ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕಿನಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದರಲ್ಲಿ ಅದೇ 109ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಈ ಎಂಜಿನ್ 8.08 ಬಿಹೆಚ್‍ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 4-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಎಂಜಿನ್‌ನಲ್ಲಿನ ಇಟಿ-ಫೈ ತಂತ್ರಜ್ಞಾನವು ಮೊದಲಿಗಿಂತ ಉತ್ತಮ ಪರಿಷ್ಕರಣೆಯನ್ನು ಮತ್ತು ಶೇ.15 ಸುಧಾರಿತ ಇಂಧನ ದಕ್ಷತೆಯನ್ನು ನೀಡುತ್ತದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಮೆಕ್ಯಾನಿಕಲ್‌ಗಳ ವಿಷಯದಲ್ಲಿ, 2021ರ ಸ್ಟಾರ್ ಸಿಟಿ ಪ್ಲಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ.

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

2021ರ ಸ್ಟಾರ್ ಸಿಟಿ ಪ್ಲಸ್ ಎಂಟ್ರಿ ಲೆವೆಲ್ ವೆರಿಯೆಂಟ್ ನಲ್ಲಿ ಎರಡು ಕಡೆಗಳಲ್ಲಿ ಡ್ರಮ್ ಬ್ರೇಕ್ ಗಳನ್ನು ನೀಡಲಾಗಿದೆ. ಆದರೆ ಟಾಪ್ ವೆರಿಯೆಂಟ್ ಗಳಲ್ಲಿ ಮುಂಭಾಗದಲ್ಲಿ ರೊಟೊ ಪೆಟಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ ಅನ್ನು ಅಳವಡಿಸಲಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಕಮ್ಯೂಟರ್ ಬೈಕ್ ಆಗಿದೆ. ಈ ಹೊಸ ಬೈಕ್ ಕೇವಲ 116 ಕಿಲೋಗ್ರಾಂಗಳಷ್ಟು ಕಡಿಮೆ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 10-ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆಯುತ್ತದೆ.

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಇದಲ್ಲದೆ ಈ ಹೊಸ ಬೈಕ್ ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇದು ತುಂಭಾ ಸರಳವಾಗಿದ್ದು, ಸವಾರನಿಗೆ ಇದನ್ನು ಸುಲಭವಾಗಿ ಓದಬಹುದು. ಹೊಸ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಹಣಕ್ಕಾಗಿ ಕೈಗೆಟುಕುವ ಮತ್ತು ಅನುಕೂಲಕರ ಪ್ರಯಾಣಿಕರ ವಿಭಾಗದ ಬೈಕ್ ಆಗಿದೆ.

ಕೈಗೆಟುಕುವ ದರದಲ್ಲಿ 2021 ಬಜಾಜ್ ಸ್ಟಾರ್ ಸಿಟಿ ಪ್ಲಸ್ ಬೈಕ್ ಬಿಡುಗಡೆ

ಈ ಹೊಸ ಸ್ಟಾರ್ ಸಿಟಿ ಪ್ಲಸ್ ಬೈಕ್ ಉತ್ತಮ ಮೈಲೇಜ್, ಸುಗಮ ಎಂಜಿನ್ ಕಾರ್ಯಕ್ಷಮತೆ ಮತ್ತು ಆರಾಮದಾಯಕ ಸವಾರಿ ಅನುಭವನ್ನು ನೀಡುತ್ತದೆ. ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಎಚ್‌ಎಫ್ ಡಿಲಕ್ಸ್ ಮತ್ತು ಹೀರೋ ಸ್ಪ್ಲೆಂಡರ್ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
2021 TVS Star City+ Launched. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X