Just In
Don't Miss!
- News
ರಾಜ್ಯ ಬಜೆಟ್ ಬಗ್ಗೆ ಸಿಎಂ ಯಡಿಯೂರಪ್ಪ ಹೇಳಿದ್ದೇನು?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Finance
30,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಿದೆ ಕ್ಯಾಪ್ಜೆಮಿನಿ
- Movies
ರಾಬರ್ಟ್ ಸಂಭ್ರಮ: ವಿನಯದಿಂದ ತೆಲುಗು ಅಭಿಮಾನಿಗಳ ಮನಸು ಕದ್ದ ದರ್ಶನ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೈಗೆಟುಕುವ ದರದಲ್ಲಿ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿ ತನ್ನ ಎಕ್ಸ್ಎಲ್100 ವಿನ್ನರ್ ಎಡಿಷನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.49,599 ಗಳಾಗಿದೆ.

ಟಿವಿಎಸ್ ಎಕ್ಸ್ಎಲ್100 ಮೊಪೆಡ್ ವನ್ನು ಗ್ರಾಮೀಣ ಭಾಗದಲ್ಲಿ ಹೆಚ್ಚು ಬಳುಸುತ್ತಾರೆ. ಈ ಎಕ್ಸ್ಎಲ್100 ಮೊಪೆಡ್ ರೈತರ ಬಂಡಿ ಎಂದೇ ಜನಜನಿತವಾಗಿದೆ. ಟಿವಿಎಸ್ ಎಕ್ಸ್ಎಲ್100 ಮೊಪೆಡ್ ವನ್ನು ಸಾಮಾನ್ಯವಾಗಿ ತರಕಾರಿಗಳ ಅಥವಾ ಮುಂತಾದ ಸಾಮಗ್ರಿಗಳನ್ನು ಸಾಗಿಸಲು ರೈತರು ಹೆಚ್ಚಾಗಿ ಬಳಸುತ್ತಾರೆ. ಒಂದೆರಡು ವರ್ಷಗಳ ಹಿಂದೆ ಪರಿಚಯಿಸಲಾದ ಟಿವಿಎಸ್ ಎಕ್ಸ್ಎಲ್100 ಮೊಪೆಡ್ ಕಂಫರ್ಟ್ ರೂಪಾಂತರವು ಕೂಡ ಹೆಚ್ಚು ಯಶಸ್ವಿಯನ್ನು ಗಳಿಸಿದೆ.

ಇನ್ನು ಕಳೆದ ವರ್ಷ ಇದರ ಹೆವಿ ಡ್ಯೂಟಿ ರೂಪಾಂತವನ್ನು ಬಿಡುಗಡೆಗೊಳಿಸಿತ್ತು. ಇದೀಗ ಟಿವಿಎಸ್ ಎಕ್ಸ್ಎಲ್100 ಮೊಪೆಡ್ ವಿನ ವಿನ್ನರ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ವಿನ್ನರ್ ಎಡಿಷನ್ ಪ್ರಾರಂಭಿಸುವುದರೊಂದಿಗೆ ಡ್ಯಾಪರ್ ಅನ್ನು ಕೂಡ ಪಡೆದುಕೊಂಡಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್ಸೈಕಲ್

ಅಧಿಕೃತವಾಗಿ ಎಕ್ಸ್ಎಲ್100 ಹೆವಿ ಡ್ಯೂಟಿ ಐ-ಟಚ್ಸ್ಟಾರ್ಟ್ ವಿನ್ನರ್ ಎಢಿಷನ್ ಎಂದು ಕರೆಯಲ್ಪಡುತ್ತದೆ, ಹೊಸ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ವಿಶಿಷ್ಟ ಮತ್ತು ವಿಶೇಷವಾದ ನೇವಿ ಬ್ಲೂ ಬಣ್ಣವನ್ನು ಹೊಂದಿದೆ.

ಸ್ನ್ಯಾಜ್ನೆಸ್ ಅನ್ನು ಮತ್ತಷ್ಟು ಹೆಚ್ಚಿಸಲು, ಟಿವಿಎಸ್ ಎಕ್ಸಾಸ್ಟ್ ಶೀಲ್ಡ್, ರೌಂಡ್ ಕ್ರೋಮ್ ಮೀರರ್ ಗಳು ಮತ್ತು ಫ್ಲೋರ್ಬೋರ್ಡ್ನಲ್ಲಿ ಮೆಟಲ್ ಪ್ಲೇಟ್ನಲ್ಲಿ ವಿನ್ನರ್ ಎಡಿಷನ್ ಕ್ರೋಮ್ ಅಸ್ಸೆಂಟ್ ಗಳನ್ನು ನೀಡಿದೆ.
MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್ಟಾರ್ಕ್ 125 ಸ್ಕೂಟರ್

ಇನ್ನು ಹೊಸ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಸ್ಪ್ಲಿಟ್ ಸೀಟುಗಳು ಉತ್ತಮ ಫಿನಿಶ್ ನೊಂದಿಗೆ ಆಕರ್ಷಕ ಟ್ಯಾನ್ ಮತ್ತು ಬೀಜ್ ಡ್ಯುಯಲ್-ಟೋನ್ ಬಣ್ಣಗಳಿಂದ ಕೂಡಿದೆ. ಉಳಿದಂತೆ ಯಾವುದೇ ಪ್ರಮುಖ ಬದಲಾವಣೆಗಳನ್ನು ಹೊಂದಿಲ್ಲ. ಉಳಿದೆಲ್ಲವೂ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತದೆ.

ಎಕ್ಸ್ಎಲ್100 ಮಾದರಿಯಲ್ಲಿ 99.7 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ನೊಂದಿಗೆ ಫ್ಯೂಯಲ್ ಇಂಜೆಕ್ಷನ್ ಅನ್ನು ಹೊಂದಿದೆ.ಈ ಎಂಜಿನ್ 6,000 ಆರ್ಪಿಎಂನಲ್ಲಿ 4.4 ಬಿಹೆಚ್ಪಿ ಪವರ್ ಮತ್ತು 3,500 ಆರ್ಪಿಎಂನಲ್ಲಿ 6.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್ಮಾಸ್ಟರ್ ಬೈಕ್

ಹೊಸ ಎಕ್ಸ್ಎಲ್100 ಮಾದರಿಯಲ್ಲಿ ಫ್ಯೂಯಲ್ ಇಂಜೆಕ್ಷನ್ ಹೊಂದಿರುವುದರಿಂದ ಇದರ ಮೈಲೇಜ್ ಕೂಡ ಹೆಚ್ಚಿಸುತ್ತದೆ. ಟಿವಿಎಸ್ ಎಕ್ಸ್ಎಲ್100 ಮೊಪೆಡ್ ದಲ್ಲಿ ಎರಡೂ ಕಡೆಗಳಲ್ಲಿಯು ಡ್ರಮ್ ಬ್ರೇಕ್ಗಳನ್ನು ಅಳವಡಿಸಲಾಗಿದೆ.

ಇನ್ನು ಈ ಎಕ್ಸ್ಎಲ್100 ಮಾದರಿಯಲ್ಲಿ ಮೆಂಟೆನೆನ್ಸ್ ಇಲ್ಲದ ಬ್ಯಾಟರಿ, ಅನಲಾಗ್ ಸ್ಪೀಡೋಮೀಟರ್, ಕಿಕ್ ಸ್ಟಾರ್ಟ್ ಹಾಗೂ ಬಲ್ಬ್-ಟೈಪ್ ಟರ್ನ್ ಸಿಗ್ನಲ್ ಇಂಡಿಕೇಟರ್ಗಳಿವೆ. ಹೊಸ ಟಿವಿಎಸ್ ಎಕ್ಸ್ಎಲ್100 ವಿನ್ನರ್ ಎಡಿಷನ್ ಆಕರ್ಷಕ ಲುಕ್ ಅನ್ನು ಹೊಂದಿದೆ. ಮೊಪೆಡ್ ವನ್ನು ಖರೀದಿಸಲು ಬಯಸುವವರಿಗೆ ಹೆಚ್ಚಿನ ಆಯ್ಕೆಯನ್ನು ಹೊಂದಿದೆ.