ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜೂಪಿಟರ್ ಸ್ಕೂಟರಿನ ಹೊಸ ಮಾದರಿಯನ್ನು ಬಿಡುಗಡೆಗೊಳಿಸಿದೆ. ಈ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.63,497ಗಳಾಗಿದೆ. ಟಿವಿಎಸ್ ಜೂಪಿಟರ್ ಶೀಟ್ ಮೆಟಲ್ ಮಾದರಿಯನ್ನು ಸ್ಥಗಿತಗೊಳಿಸಲಾಗಿದೆ.

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಈಗ ಜೂಪಿಟರ್ ಸ್ಕೂಟರ್ ಒಟ್ಟು 5 ಮಾದರಿಗಳಲ್ಲಿ ಲಭ್ಯವಿದೆ. ಟಿವಿಎಸ್ ಕಂಪನಿಯು ಜೂಪಿಟರ್ ಸ್ಕೂಟರಿನ ಎಲ್ಲಾ ಮಾದರಿಗಳ ಬೆಲೆಯನ್ನು ರೂ.1,645ಗಳಿಂದ ರೂ.2,770ಗಳವರೆಗೆ ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ ಸ್ಟ್ಯಾಂಡರ್ಡ್ ಮಾದರಿಯ ಬೆಲೆ ರೂ.65,497ಗಳಾದರೆ, ಝಡ್ಎಕ್ಸ್ ಮಾದರಿಯ ಬೆಲೆ ರೂ.68,247, ಝಡ್ಎಕ್ಸ್ ಡಿಸ್ಕ್ ಮಾದರಿಯ ಬೆಲೆ ರೂ.72,347 ಹಾಗೂ ಕ್ಲಾಸಿಕ್ ಮಾದರಿಯ ಬೆಲೆ ರೂ.72,472ಗಳಾಗಿದೆ.

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಬೆಲೆ ಏರಿಕೆಯ ನಂತರ ಕಂಪನಿಯು ಹೊಸ ಮಾದರಿಯನ್ನು ಕೈಬಿಟ್ಟಿದೆ. ಇದರಿಂದಾಗಿ ಗ್ರಾಹಕರು ಕಡಿಮೆ ಬೆಲೆಯ ಹೊಸ ಮಾದರಿಯನ್ನು ಖರೀದಿಸಬಹುದು. ಟಿವಿಎಸ್ ಜೂಪಿಟರ್ ಸ್ಕೂಟರ್ ಅನ್ನು ನಗರದಲ್ಲಿನ ದೈನಂದಿನ ಚಾಲನೆಗೆ ಹೆಚ್ಚು ಬಳಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯ ಈ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ. ಜೂಪಿಟರ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 6 ಜಿ ಹಾಗೂ ಹೀರೋ ಮೆಸ್ಟ್ರೋ ಸ್ಕೂಟರ್'ಗಳಿಗೆ ಪೈಪೋಟಿ ನೀಡುತ್ತದೆ.

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಜೂಪಿಟರ್ ಸ್ಕೂಟರಿನ ಎಲ್ಲಾ ಮಾದರಿಗಳಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಈ ಸ್ಕೂಟರಿನಲ್ಲಿ ದೊಡ್ಡ ಸೀಟ್, ಅದರ ಕೆಳಗೆ 21 ಲೀಟರಿನ ಅಂಡರ್-ಸೀಟ್ ಸ್ಟೋರೇಜ್, ಮೊಬೈಲ್ ಚಾರ್ಜಿಂಗ್ ಪ್ರೊವಿಷನ್ ಹಾಗೂ ಎರಡೂ ಬದಿಗಳಲ್ಲಿ 12 ಇಂಚಿನ ವ್ಹೀಲ್'ಗಳನ್ನು ನೀಡಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ಇದಕ್ಕೂ ಮುನ್ನ 2020ರ ಆಗಸ್ಟ್ ತಿಂಗಳಿನಲ್ಲಿ ಝಡ್ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಈ ಸ್ಕೂಟರ್ ಎಕೋಸ್ಟ್ರಸ್ಟ್ ಫ್ಯೂಯಲ್ ಇಂಜೆಕ್ಷನ್, ಐ-ಟಚ್ ಸ್ಟಾರ್ಟ್, ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ ಸಿಸ್ಟಂಗಳನ್ನು ಹೊಂದಿದೆ.

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಜೂಪಿಟರ್ ಸ್ಕೂಟರಿನಲ್ಲಿ 109 ಸಿಸಿಯ ಸಿಂಗಲ್ ಸಿಲಿಂಡರ್ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 7.4 ಬಿಹೆಚ್‌ಪಿ ಪವರ್ ಹಾಗೂ 8.4 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಜೂಪಿಟರ್ ಸ್ಕೂಟರಿನ ಎಲ್ಲಾ ಮಾದರಿಗಳಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆಂಷನ್ ಹಾಗೂ ಅಲಾಯ್ ವ್ಹೀಲ್'ಗಳನ್ನು ನೀಡಲಾಗಿದೆ. ಇದರ ಜೊತೆಗೆ ಎಲ್ಇಡಿ ಹೆಡ್ ಲೈಟ್, ಎಲ್ಇಡಿ ಟೇಲ್ ಲೈಟ್, ಹೊಸ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, 2-ಲೀಟರ್ ಗ್ಲೋವ್ಬಾಕ್ಸ್ ಹಾಗೂ ಕ್ಲಾಸಿಕ್ ಮಾದರಿಯಲ್ಲಿ ವಿಂಡ್ ಷೀಲ್ಡ್ ಅನ್ನು ನೀಡಲಾಗಿದೆ.

ಜೂಪಿಟರ್ ಸ್ಕೂಟರಿನ ಹೊಸ ಮಾದರಿ ಬಿಡುಗಡೆಗೊಳಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಜೂಪಿಟರ್ ಸ್ಕೂಟರ್ ಈಗ ಇಗ್ನಿಷನ್, ಸ್ಟೀಯರಿಂಗ್ ಲಾಕ್, ಸೀಟ್ ಲಾಕ್, ಫ್ಯೂಯಲ್ ಟ್ಯಾಂಕ್ ಕ್ಯಾಪ್ ಓಪನರ್ ಸೇರಿದಂತೆ ಆಲ್-ಇನ್-ಲಾಕ್ ಕಾರ್ಯವಿಧಾನದೊಂದಿಗೆ ಲಭ್ಯವಿದೆ. ಹೊಸ ಮಾದರಿಗಳು ಎಷ್ಟು ಜನಪ್ರಿಯವಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
TVS Motor company launches new variant of Jupiter Scooter. Read in Kannada.
Story first published: Monday, January 11, 2021, 18:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X