ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಹೊಸೂರು ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ಇಂಡಿಯಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆದ ಐಕ್ಯೂಬ್ ಅನ್ನು 2020ರ ಜನವರಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಸುಮಾರು ಒಂದು ವರ್ಷದ ನಂತರ ಈ ಎಲೆಕ್ಟ್ರಿಕ್ ಸ್ಕೂಟರಿಗೆ ಸಂಬಂಧಿಸಿದ ಹೊಸ ಮಾಹಿತಿಯೊಂದು ಹೊರಬಂದಿದೆ. ಈ ಮಾಹಿತಿಯ ಪ್ರಕಾರ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೆಹಲಿ-ಎನ್‌ಸಿಆರ್ ಸೇರಿದಂತೆ ಹಲವು ನಗರಗಳಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಇದರಿಂದಾಗಿ ಐಕ್ಯೂಬ್ ಮಾರಾಟ ಜಾಲವು ವಿಸ್ತರಿಸಲಿದೆ. ಕಂಪನಿಯು ಆರಂಭದಲ್ಲಿ 10 ಡೀಲರ್'ಶಿಪ್'ಗಳನ್ನು ಆರಂಭಿಸಲಿದೆ.

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರ್‌ಗಾಗಿ ಕರ್ನಾಟಕದಲ್ಲಿ ಹಲವು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕಂಪನಿ ಈ ಹಿಂದೆ ತಿಳಿಸಿತ್ತು. ಟಿವಿಎಸ್ ಮೋಟಾರ್ ಕಂಪನಿಯು ಮೊದಲು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬೆಂಗಳೂರಿನಲ್ಲಿ ಮಾತ್ರ ಬಿಡುಗಡೆಗೊಳಿಸಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರಿನ ಆನ್ ರೋಡ್ ಬೆಲೆ ರೂ.1.15 ಲಕ್ಷಗಳಾಗಿದೆ. ಈ ಬೆಲೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿಗಿಂತ ಸ್ವಲ್ಪ ಕಡಿಮೆ ಹಾಗೂ ಎಥೆರ್ 450 ಎಕ್ಸ್ ಸ್ಕೂಟರಿಗಿಂತ ಕೆಲವು ಸಾವಿರ ರೂಪಾಯಿಗಳಷ್ಟು ಜಾಸ್ತಿ.

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಐಕ್ಯೂಬ್ ಸ್ಕೂಟರಿನಲ್ಲಿ ಅಳವಡಿಸಿರುವ 4.4 ಕೆಜಿ ವ್ಯಾಟ್ ಮೋಟರ್ 140 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್ ಕೇವಲ 4.2 ಸೆಕೆಂಡುಗಳಲ್ಲಿ ಗಂಟೆಗೆ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಟಿವಿಎಸ್ ಐಕ್ಯೂಬ್ ಸ್ಪೋರ್ಟ್ ಮೋಡ್‌ನಲ್ಲಿ ಪ್ರತಿ ಗಂಟೆಗೆ 78 ಕಿ.ಮೀ ವೇಗದಲ್ಲಿ ಹಾಗೂ ಇಕೋ ಮೋಡ್‌ನಲ್ಲಿ ಪ್ರತಿ ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ 75 ಕಿ.ಮೀಗಳವರೆಗೆ ಚಲಿಸುತ್ತದೆ.

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಈ ಸ್ಕೂಟರಿನಲ್ಲಿ ಅಳವಡಿಸಲಾಗಿರುವ 2.25 ಕಿ.ವ್ಯಾ ಬ್ಯಾಟರಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು 5 ಆಂಪಿಯರ್ ಚಾರ್ಜರ್ ನೀಡಲಾಗಿದೆ. ಈ ಚಾರ್ಜರ್ ಅನ್ನು ಕಂಪನಿಯು ಉಚಿತವಾಗಿ ಅಳವಡಿಸುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರಿನ ರೀತಿಯಲ್ಲಿ ಈ ಸ್ಕೂಟರ್ ಸಹ ಪೂರ್ತಿಯಾಗಿ ಚಾರ್ಜ್ ಆಗಲು 5 ಗಂಟೆ ಬೇಕಾಗುತ್ತದೆ. ಐಕ್ಯೂಬ್ ಸ್ಕೂಟರಿನಲ್ಲಿ ಅಳವಡಿಸಿರುವ ಟಿಎಫ್‌ಟಿ ಸ್ಕ್ರೀನ್ ಅನ್ನು ಐಕ್ಯೂಬ್ ಆ್ಯಪ್ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದು.

ರಾಷ್ಟ್ರ ರಾಜಧಾನಿಯಲ್ಲೂ ಬಿಡುಗಡೆಯಾಗಲಿದೆ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್

ಇದರಿಂದ ಜಿಯೋ ಫೆನ್ಸಿಂಗ್, ರಿಮೋಟ್ ಬ್ಯಾಟರಿ ಚಾರ್ಜ್ ಸ್ಥಿತಿ, ನ್ಯಾವಿಗೇಷನ್ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ಬಳಸಬಹುದು. ಸ್ಕೂಟರ್ ಪಾರ್ಕ್ ಆಗಿರುವ ಸ್ಥಳ, ಫೋನ್ ಕಾಲ್ / ಎಸ್‌ಎಂಎಸ್ ಅಲರ್ಟ್ ಸೇರಿದಂತೆ ಇನ್ನೂ ಹಲವಾರು ಫೀಚರ್'ಗಳನ್ನು ಸಹ ಈ ಅಪ್ಲಿಕೇಶನ್‌ನಿಂದ ಬಳಸಬಹುದು.

Most Read Articles

Kannada
English summary
TVS motor company to launch its electric scooter in Delhi NCR. Read in Kannada.
Story first published: Friday, January 8, 2021, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X