ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಈ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕ್‍ಗಳಲ್ಲಿ ಒಂದಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಇದೀಗ ಈ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಬೆಲೆಯನ್ನು ಟಿವಿಎಸ್ ಕಂಪನಿಯು ರೂ.1,250 ಗಳವರೆಗೆ ಹೆಚ್ಚಿಸಲಾಗಿದೆ. ಇದೀಗ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಡ್ರಮ್ ಬ್ರೇಕ್ ರೂಪಾಂತರದ ಬೆಲೆ ರೂ.1,08,565 ಗಳಾದರೆ ಡಿಸ್ಕ್ ಬ್ರೇಕ್ ರೂ.1,11,615 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಈ ಈ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನಲ್ಲಿ ಅದೇ 159.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,250 ಆರ್‌ಪಿಎಂನಲ್ಲಿ 17.4 ಬಿಹೆಚ್‌ಪಿ ಮತ್ತು 7,250 ಆರ್‌ಪಿಎಂನಲ್ಲಿ 14.73 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಈ ಎಂಜಿನ್ ಅನ್ನು ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಡಿಸ್ಕ್ ಬ್ರೇಕ್ ರೂಪಾಂತರವು 147 ಕೆಜಿ ತೂಕವಿದ್ದರೆ, ಡ್ರಮ್ ಬ್ರೇಕ್ ರೂಪಾಂತರವು 145 ಕೆಜಿ ತೂಕವನ್ನು ಹೊಂದಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ವಿನ್ಯಾಸ ಮತ್ತು ಸ್ಟೈಲಿಂಗ್ ವಿಷಯದಲ್ಲಿ ಅಪಾಚೆ ಆರ್‌ಟಿಆರ್ 160 4ವಿ ಮಾದರಿಯು 2019ಅಪ್ ಫ್ರಂಟ್ ಬೂಮರಾಂಗ್ ಆಕಾರದ ಎಲ್ಇಡಿ ಪೊಸಿಷನ್ ಲೈಟ್ಸ್‌ನೊಂದಿಗೆ ಲೋಮ್ ಬೀಮ್ ಹೆಡ್‌ಲ್ಯಾಂಪ್ ಮಾದರಿಗಳೇ ಡೇ ಲೈಟ್ ರನ್ನಿಂಗ್ ಲೈಟ್ ಮಾದರಿಯಾಗಿ ಬದಲಾಯಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಈ ಬೈಕಿನಲ್ಲಿ ಡಬಲ್-ಬ್ಯಾರೆಲ್ ಎಕ್ಸಾಸ್ಟ್ ಜೋಡಣೆ ಮಾಡಿದ್ದು, ಇದು ಬೈಕ್ ವಿನ್ಯಾಸದ ಅಂಶವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಂಭಾಗದ ತುದಿಯ ಮೇಲ್ಭಾಗದಲ್ಲಿ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಕೆಳಭಾಗದಲ್ಲಿ ಟೈಲ್ ಹಗ್ಗರ್ ಹೊಂದಿರುವ ಕೂಡಾ ಸರಳ ವಿನ್ಯಾಸವಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಈ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕಿನಲ್ಲಿ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಇದರ ಡಿಸ್ ಪ್ಲೇಯಲ್ಲಿ ಟ್ಯಾಕೋಮೀಟರ್, ಸ್ಪೀಡೋಮೀಟರ್, ಫ್ಯೂಲ್ ಗೇಜ್, ಗೇರ್ ಪೊಸಿಷನ್, ಟೈಮ್ ಇಂಡಿಕೇಟರ್‌ಗಳನ್ನು ಪ್ರದರ್ಶಿಸುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಇನ್ನು ಅಪಾಚೆ ಆರ್‌ಟಿಆರ್ 160 4ವಿ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಟೆಲಿಸ್ಕೋಪಿಕ್ ಫೋರ್ಕ್ ಅಪ್ ಫ್ರಂಟ್ ಮತ್ತು ಹಿಂಭಾಗದಲ್ಲಿ ಶೋವಾ ಮೊನೊಶಾಕ್ ನಿರ್ವಹಿಸಲಿದ್ದು, ಪರ್ಫಾಮೆನ್ಸ್‌ಗೆ ಪೂರಕವಾಗಿದೆ ಅತ್ಯುತ್ತಮವಾಗಿ ಟ್ಯೂನ್ ಮಾಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್

ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಇನ್ನು ಈ ಜನಪ್ರಿಯ ಬೈಕಿನ ಬೆಲೆ ಏರಿಲೆಯಾಗಿರುವುದರಿಂದ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
TVS Apache RTR 160 4V Prices Increased. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X