ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

TVS Motor, ದೇಶದ ಪ್ರಮುಖ ದ್ವಿಚಕ್ರ ಹಾಗೂ ತ್ರಿ ಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಕಂಪನಿಯು ಭಾರತದ ಅತಿ ದೊಡ್ಡ ಸಮಗ್ರ ವಿದ್ಯುತ್ ಕಂಪನಿಗಳಲ್ಲಿ ಒಂದಾದ Tata Power ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ. ಈ ಒಪ್ಪಂದವು ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದರಿಂದ ಭಾರತದ ರಸ್ತೆಗಳಲ್ಲಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಕಾಣಬಹುದು. ಹಸಿರು ನಂಬರ್ ಪ್ಲೇಟ್ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಸೈಲೆನ್ಸರ್ ಶಬ್ದವಿಲ್ಲದೆ ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಂಗೆ ಹಲವಾರು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಎಲೆಕ್ಟ್ರಿಕ್ ವಾಹನಗಳು ಯಾವುದೇ ಮಾಲಿನ್ಯವನ್ನುಂಟು ಮಾಡುವುದಿಲ್ಲ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಕಚ್ಚಾ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ. ಆದರೂ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಇದಕ್ಕೆ ಪ್ರಮುಖ ಕಾರಣ ಮೂಲಭೂತ ಸೌಕರ್ಯಗಳ ಕೊರತೆ. ದೇಶದಲ್ಲಿ ಪೆಟ್ರೋಲ್ ಬಂಕ್ ಗಳು ಇರುವಷ್ಟು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿಲ್ಲ. ದೊಡ್ಡ ದೊಡ್ಡ ನಗರಗಳಲ್ಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳಿಲ್ಲ. ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಕಾಣಬಹುದು. ಅದೂ ಸಹ ಕಡಿಮೆ ಸಂಖ್ಯೆಯಲ್ಲಿ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಈ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆ ಹರಿಸಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ TVS Motor ಹಾಗೂ Tata Power ಕಂಪನಿಗಳು ಸಹ ಭಾಗಿತ್ವವನ್ನು ಮಾಡಿಕೊಂಡಿವೆ. ಈ ಎರಡು ಕಂಪನಿಗಳ ಸಹ ಭಾಗಿತ್ವದ ಅಡಿಯಲ್ಲಿ, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಎಲೆಕ್ಟ್ರಿಕ್ ವಾಹನ ಬಳಕೆದಾರರನ್ನು ಉತ್ತೇಜಿಸುವ ಸಲುವಾಗಿ ಈ ಎರಡು ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ. ಇದರ ಜೊತೆಗೆ TVS Motor ಕಾರ್ಯ ನಿರ್ವಹಿಸುವ ಪ್ರದೇಶಗಳಲ್ಲಿ ಸೌರ ವಿದ್ಯುತ್ ತಂತ್ರಜ್ಞಾನಗಳನ್ನು ನಿರ್ಮಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಸಹಭಾಗಿತ್ವವು ಹೊಂದಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಇದಕ್ಕಾಗಿ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಮೀಸಲಾದ ಚಾರ್ಜಿಂಗ್ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಚಾರ್ಜಿಂಗ್ ಕೇಂದ್ರಗಳನ್ನುಸುಲಭಗೊಳಿಸಲು ವಿಶೇಷ ಪ್ರೊಸೆಸರ್‌ಗಳನ್ನು ತೆರೆಯಲಾಗುವುದು. TVS IQube ಬಳಕೆದಾರರು ಇವುಗಳನ್ನು ಸ್ಕೂಟರ್ ಹಾಗೂ Tata Power ZZ ಚಾರ್ಜಿಂಗ್ ಪ್ರೊಸೆಸರ್ ಮೂಲಕ ಪಡೆಯಬಹುದು.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಈ ಸಹಭಾಗಿತ್ವವು ಸಾಂಪ್ರದಾಯಿಕ ಎಸಿ ಚಾರ್ಜಿಂಗ್ ನೆಟ್‌ವರ್ಕ್ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಡಿಸಿ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಿದೆ. ಇದರಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಖಂಡಿತವಾಗಿಯೂ ನೆರವಾಗುತ್ತದೆ. ಮಾಲಿನ್ಯ ರಹಿತ ವಾಹನದ ಚಲನೆಯನ್ನು ಹೆಚ್ಚಿಸುವುದರ ಜೊತೆಗೆ, TVS ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಸೌರ ಶಕ್ತಿ ಚಾಲಿತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಇದರಿಂದ ಕಂಪನಿಗೆ ಹೆಚ್ಚಿನ ಲಾಭವಾಗಲಿದೆ ಎಂದು ವರದಿಯಾಗಿದೆ. TVS Motor ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ IQube ಎಂಬ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ದೇಶದ ಕೆಲವು ನಗರಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಿದೆ. TVS ಕಂಪನಿಯು ಇತ್ತೀಚೆಗೆ ಈ ಎಲೆಕ್ಟ್ರಿಕ್ ಸ್ಕೂಟರಿನ ಮಾರಾಟವನ್ನು ಚೆನ್ನೈನಲ್ಲಿ ಆರಂಭಿಸಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸದ್ಯಕ್ಕೆ ಬೆಂಗಳೂರು, ದೆಹಲಿ, ಪುಣೆ, ಕೊಚ್ಚಿ, ಕೊಯಮತ್ತೂರು, ಹೈದರಾಬಾದ್, ಸೂರತ್, ವಿಶಾಖಪಟ್ಟಣಂ, ಜೈಪುರ ಹಾಗೂ ಅಹಮದಾಬಾದ್ ನಗರಗಳಲ್ಲಿ ಮಾರಾಟ ಮಾಡಲಾಗುತ್ತಿದೆ. TVS Iqube ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ರೂ. 1,15,218 ಗಳಾಗಿದೆ. ಅಂದ ಹಾಗೆ TVS ಕಂಪನಿಯು ಇತ್ತೀಚೆಗಷ್ಟೇ ತನ್ನ Raider 125 ಬೈಕ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಈ ಹೊಸ ಬೈಕ್ ಭಾರತೀಯ ಗ್ರಾಹಕರಲ್ಲಿ ವ್ಯಾಪಕ ಸ್ವಾಗತವನ್ನು ಪಡೆದಿದೆ. ಈ ಬೈಕಿನ ಬಿಡುಗಡೆಯ ನಂತರ TVS Motor ಕಂಪನಿಯು ತನ್ನ ಮತ್ತೊಂದು ಹೊಸ ಉತ್ಪನ್ನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಈ ಹೊಸ ವಾಹನವು ಅಕ್ಟೋಬರ್ 7 ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಆದರೆ TVS ಕಂಪನಿಯು ತನ್ನ ಹೊಸ ದ್ವಿಚಕ್ರ ವಾಹನದ ವಿವರಗಳನ್ನು ಗೌಪ್ಯವಾಗಿರಿಸಿದೆ.

ಇವಿ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಲು Tata Power ಜೊತೆ ಕೈಜೋಡಿಸಿದ TVS Motor

ಈ ಹೊಸ ವಾಹನವು 125 ಸಿಸಿ ಸ್ಕೂಟರ್ ಆಗಿರಬಹುದು ಎಂದು ನಂಬಲಾಗಿದೆ. ಆಟೋ ಮೊಬೈಲ್ ಉದ್ಯಮವು TVS ಕಂಪನಿಯ ಹೊಸ ವಾಹನವು Jupiter 125 ಸ್ಕೂಟರ್ ಆಗಿರಬಹುದು ಎಂದು ಊಹಿಸುತ್ತಿದೆ.

Most Read Articles

Kannada
English summary
Tvs motor joins with tata power to set up ev charging stations details
Story first published: Wednesday, October 6, 2021, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X