ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಪ್ರಮುಖ ನಗರಗಳಿಂದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆಯಂತೆ ಹೊಸ ಇವಿ ಸ್ಕೂಟರ್ ಮಾರಾಟವನ್ನು ವಿವಿಧ ನಗರಗಳಿಗೆ ವಿಸ್ತರಣೆಗೂ ಮುನ್ನ ಚಾರ್ಜಿಂಗ್ ಸೌಲಭ್ಯದ ಹೆಚ್ಚಿಸುವತ್ತ ಗಮನಹರಿಸಿದೆ.

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಪ್ರಮುಖವಾಗಿದ್ದು, ಟಿವಿಎಸ್ ಮೋಟಾರ್ ಕಂಪನಿಯು ಸಹ ಇದೇ ವಿಚಾರವಾಗಿ ಹೊಸ ಇವಿ ಸ್ಕೂಟರ್ ಮಾರಾಟ ವಿಸ್ತರಣೆ ಮೂಲಕ ಅಗತ್ಯ ಚಾರ್ಜಿಂಗ್ ನಿಲ್ದಾಣಗಳನ್ನು ವಿಸ್ತರಿಸಲು ಮುಂದಾಗಿದೆ. ಸದ್ಯ ಬೆಂಗಳೂರು, ಮುಂಬೈ, ಪುಣೆ ಮತ್ತು ಹೈದ್ರಾಬಾದ್ ನಲ್ಲಿ ಮಾತ್ರ ಇವಿ ಸ್ಕೂಟರ್ ಮಾರಾಟ ಹೊಂದಿರುವ ಟಿವಿಎಸ್ ಕಂಪನಿಯು ಹೊಸ ಚಾರ್ಜಿಂಗ್ ಸೌಲಭ್ಯ ಜೋಡಣೆ ನಂತರ ಈ ವರ್ಷಾಂತ್ಯಕ್ಕೆ ದೇಶದ ಪ್ರಮುಖ 20 ನಗರಗಳಲ್ಲಿ ಐ-ಕ್ಯೂಬ್ ಇವಿ ಸ್ಕೂಟರ್ ಮಾರಾಟ ಪರಿಚಯಿಸುವ ಸಿದ್ದತೆಯಲ್ಲಿದೆ.

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಗ್ರಾಹಕರು ಒಲವು ಹೊಂದಿದ್ದರೂ ಸಾರ್ವಜನಿಕವಾಗಿ ಬಳಕೆ ಮಾಡಬಹುದಾದ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರತೆಯಿಂದಾಗಿ ಇವಿ ವಾಹನಗಳ ಮಾರಾಟವು ಹಿನ್ನಡೆ ಅನುಭವಿಸುತ್ತಿದೆ.

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಹೀಗಾಗಿ ಮುಂಬರುವ ದಿನಗಳಲ್ಲಿ ಮಾರಾಟಕ್ಕೆ ಉದ್ದೇಶಿಸಲಾಗಿರುವ ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಚಾರ್ಜಿಂಗ್ ನಿಲ್ದಾಣಗಳ ಸ್ಥಾಪನೆಗೆ ಉದ್ದೇಶಿಸಿರುವ ಟಿವಿಎಸ್ ಕಂಪನಿಯು ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ ಒಡೆತನದ ಅಂಗಸಂಸ್ಥೆ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್‌ನೊಂದಿಗೆ ಸಹಭಾಗಿತ್ವ ಘೋಷಣೆ ಮಾಡಿದೆ.

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಟಿವಿಎಸ್ ಕಂಪನಿಯ ಹೊಸ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಬ್ದಾರಿ ಹೊತ್ತಿರುವ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್‌ ಕಂಪನಿಯು ಅಗತ್ಯ ಚಾರ್ಜಿಂಗ್ ನಿಲ್ದಾಣಗಳನ್ನು ನಿರ್ಮಾಣ ಮಾಡಲಿದ್ದು, ಟಿವಿಎಸ್ ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಚಾರ್ಜಿಂಗ್ ಸೌಲಭ್ಯ ತೆರೆಯುತ್ತಿದೆ.

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಇನ್ನು ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್‌ಗಿಂತಲೂ ಆಕರ್ಷಕ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬಂದಿದ್ದು, ಹೊಸ ಸ್ಕೂಟರ್‌ನಲ್ಲಿ 4.4kW ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ ಉತ್ತಮ ಮೈಲೇಜ್ ಹೊಂದಿದೆ.

MOST READ: ಭಾರತದಲ್ಲಿ ಮಾರಾಟವಾಗುತ್ತಿರುವ ಪ್ರಮುಖ ಹೈ ಪರ್ಫಾಮೆನ್ಸ್ ಸ್ಕೂಟರ್‌ಗಳಿವು

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಪ್ರತಿ ಗಂಟೆಗೆ ಗರಿಷ್ಠ 78 ಕಿಮೀ ಟಾಪ್ ಸ್ಪೀಡ್‌ನೊಂದಿಗೆ ಎಕಾನಮಿ ಮತ್ತು ಪವರ್ ಮೊಡ್ ಮೂಲಕ ಅತ್ಯುತ್ತಮ ರೈಡಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದು, ಎಕಾನಮಿ ಮೋಡ್‌ನಲ್ಲಿ ಐಕ್ಯೂಬ್ ಸ್ಕೂಟರ್ ಪ್ರತಿ ಚಾರ್ಜ್‌ಗೆ ಗರಿಷ್ಠ 75 ಕಿಮೀ ಮೈಲೇಜ್ ಮತ್ತು ಪವರ್ ಮೋಡ್‌ ರೈಡಿಂಗ್‌ನಲ್ಲಿ ಗರಿಷ್ಠ 70 ಕಿಮೀ ಮೈಲೇಜ್ ಹಿಂದಿರುಗಿಸಲಿದೆ.

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ಹೊಸ ಸ್ಕೂಟರ್ ಬೆಲೆಯು ಬೆಂಗಳೂರಿನಲ್ಲಿ ಆನ್‌-ರೋಡ್ ಪ್ರಕಾರ ರೂ.1.15 ಲಕ್ಷ ಬೆಲೆ ಹೊಂದಿದ್ದರೆ ದೆಹಲಿಯಲ್ಲಿ ವಿವಿಧ ಸಬ್ಸಡಿ ಯೋಜನೆಗಳಿಂದಾಗಿ ಹೊಸ ಸ್ಕೂಟರ್ ರೂ.1.08 ಲಕ್ಷಕ್ಕೆ ಖರೀದಿಗೆ ಲಭ್ಯವಿದೆ.

MOST READ: ಪ್ರತಿ ಚಾರ್ಜ್‌ಗೆ 240ಕಿ.ಮೀ ಮೈಲೇಜ್ ನೀಡುವ ಸಿಂಪಲ್ ಎನರ್ಜಿ ಸ್ಕೂಟರ್ ಬೆಲೆ ಮಾಹಿತಿ ಬಹಿರಂಗ

ಚಾರ್ಜಿಂಗ್ ಸೌಲಭ್ಯ ವಿಸ್ತರಣೆಗಾಗಿ ಇಇಎಸ್ಎಲ್ ಜೊತೆ ಕೈಜೋಡಿಸಿದ ಟಿವಿಎಸ್

ವಿಶೇಷ ಅಂದ್ರೆ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೋಮ್ ಚಾರ್ಜರ್ ಜೊತೆಗೆ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್‌ಗಳ ಸೇವೆಯನ್ನು ನೀಡಲಾಗುತ್ತಿದ್ದು, ಹೊಸ ಸ್ಕೂಟರ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವಾರು ಫೀಚರ್ಸ್‌ಗಳಿವೆ.

Most Read Articles

Kannada
English summary
TVS Made Partnership With Convergence Energy. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X