Just In
- 4 hrs ago Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- 4 hrs ago ಬಹುಕೋಟಿ ಬೆಲೆಯ ಕಾರುಗಳಿದ್ದರೂ ಸಾಮಾನ್ಯ ಮಾರುತಿ ಕಾರಿನಲ್ಲಿ ಓಡಾಡಿದ ರೋಹಿತ್ ಶರ್ಮಾ: ಕಾರಣವೇನು?
- 5 hrs ago HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- 5 hrs ago Nissan Magnite: ಕಾಮಧೇನುವಾದ ನಿಸ್ಸಾನ್ ಮ್ಯಾಗ್ನೈಟ್.. 6 ಲಕ್ಷ ಬೆಲೆ, 20 ಕಿ.ಮೀ ಮೈಲೇಜ್
Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Movies ತಿಂಗಳುಗಳ ಒಳಗೆ ಬಾಡಿದ ಪ್ರೀತಿ: ಹನ್ಸಿಕಾಗಾಗಿ ಸಿಂಬು ಖರ್ಚು ಮಾಡಿದ್ದು ಒಂದೆರಡು ಕೋಟಿ ಅಲ್ಲ!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವರ್ಷಾಂತ್ಯಕ್ಕೆ ದೇಶದ ಪ್ರಮುಖ 20 ನಗರಗಳಲ್ಲಿ ಖರೀದಿಗೆ ಲಭ್ಯವಿರಲಿದೆ ಟಿವಿಎಸ್ ಐಕ್ಯೂಬ್ ಇವಿ ಸ್ಕೂಟರ್
ಇಂಧನಗಳ ಬೆಲೆ ಏರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಟಿವಿಎಸ್ ಮೋಟಾರ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಯಾದ ಐಕ್ಯೂಬ್ ಮಾದರಿಯ ಮಾರಾಟ ವ್ಯಾಪ್ತಿಯನ್ನು ಹಂತ-ಹಂತವಾಗಿ ವಿಸ್ತರಣೆ ಮಾಡುತ್ತಿದೆ.
ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಯನ್ನು ಕಳೆದ 2020ರ ಜನವರಿಯಲ್ಲಿ ಬಿಡುಗಡೆ ಮಾಡಿದ್ದ ಟಿವಿಎಸ್ ಕಂಪನಿಯು ಆರಂಭದಲ್ಲಿ ಬೆಂಗಳೂರು ಮತ್ತು ಪುಣೆಯಲ್ಲಿ ಮಾತ್ರವೇ ಮಾರಾಟ ಆರಂಭಿಸಿತ್ತು. ತದನಂತರ ಕಳೆದ ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಹೊಸ ಇವಿ ಸ್ಕೂಟರ್ ಮಾರಾಟಕ್ಕೆ ಚಾಲನೆ ನೀಡಿರುವ ಟಿವಿಎಸ್ ಕಂಪನಿಯು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಈ ವರ್ಷಾಂತ್ಯಕ್ಕೆ ದೇಶದ ಪ್ರಮುಖ 20 ನಗರಗಳಲ್ಲಿ ಹೊಸ ಇವಿ ಸ್ಕೂಟರ್ ಮಾರಾಟ ಮಾಡುವ ಯೋಜನೆ ಹೊಂದಿದೆ.
ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿವಿಧ ನಗರಗಳಿಗೆ ಪರಿಚಯಿಸುವುದಕ್ಕೂ ಮುನ್ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ತೆರೆಯಲಿದ್ದು, ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಹೊಸ ವಾಹನಗಳ ಖರೀದಿದಾರರು ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿರುವುದು ಇವಿ ವಾಹನಗಳಿಗೆ ಉತ್ತಮ ಬೇಡಿಕೆ ಸೃಷ್ಠಿಯಾಗಿದೆ.
ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳು ಸಹ ಹೆಚ್ಚಿನ ಮಟ್ಟದ ಸ್ಥಾಪನೆಗೊಳ್ಳುತ್ತಿದ್ದು, ಆಟೋ ಉತ್ಪಾದನಾ ಕಂಪನಿಗಳು ಮೂಲಸೌಕರ್ಯ ಹೆಚ್ಚಿದಂತೆ ತಮ್ಮ ಮಾರಾಟ ವ್ಯಾಪ್ತಿಯನ್ನು ಕೂಡಾ ಹೆಚ್ಚಿಸುತ್ತಿವೆ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಇತರೆ ಎಲೆಕ್ಟ್ರಿಕ್ ಸ್ಕೂಟರ್ಗಿಂತಲೂ ಆಕರ್ಷಕ ವಿನ್ಯಾಸ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬಂದಿದ್ದು, ಹೊಸ ಸ್ಕೂಟರ್ನಲ್ಲಿ 4.4kW ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ ಉತ್ತಮ ಮೈಲೇಜ್ ಹೊಂದಿದ್ದು, ಪ್ರತಿ ಗಂಟೆಗೆ ಗರಿಷ್ಠ 78 ಕಿಮೀ ಟಾಪ್ ಸ್ಪೀಡ್ನೊಂದಿಗೆ ಎಕಾನಮಿ ಮತ್ತು ಪವರ್ ಮೊಡ್ ಮೂಲಕ ಅತ್ಯುತ್ತಮ ರೈಡಿಂಗ್ ಸೌಲಭ್ಯವನ್ನು ಒದಗಿಸುತ್ತದೆ.
ಎಕಾನಮಿ ಮೋಡ್ನಲ್ಲಿ ಐಕ್ಯೂಬ್ ಸ್ಕೂಟರ್ ಪ್ರತಿ ಚಾರ್ಜ್ಗೆ ಗರಿಷ್ಠ 75 ಕಿಮೀ ಮೈಲೇಜ್ ಮತ್ತು ಪವರ್ ಮೋಡ್ ರೈಡಿಂಗ್ನಲ್ಲಿ ಗರಿಷ್ಠ 70 ಕಿಮೀ ಮೈಲೇಜ್ ಹಿಂದಿರುಗಿಸಲಿದ್ದು, ಹೊಸ ಸ್ಕೂಟರ್ ಬೆಲೆಯು ಬೆಂಗಳೂರಿನಲ್ಲಿ ಆನ್-ರೋಡ್ ಪ್ರಕಾರ ರೂ.1.15 ಲಕ್ಷ ಬೆಲೆ ಹೊಂದಿದ್ದರೆ ದೆಹಲಿಯಲ್ಲಿ ವಿವಿಧ ಸಬ್ಸಡಿ ಯೋಜನೆಗಳಿಂದಾಗಿ ಹೊಸ ಸ್ಕೂಟರ್ ರೂ.1.08 ಲಕ್ಷ ಖರೀದಿಗೆ ಲಭ್ಯವಿದೆ.
ವಿಶೇಷ ಅಂದ್ರೆ, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಹೋಮ್ ಚಾರ್ಜರ್ ಜೊತೆಗೆ ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಫಾಸ್ಟ್ ಚಾರ್ಜಿಂಗ್ ಸ್ಟೆಷನ್ಗಳ ಸೇವೆಯನ್ನು ನೀಡಲಾಗುತ್ತಿದ್ದು, ಹೊಸ ಸ್ಕೂಟರ್ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಹಲವಾರು ಫೀಚರ್ಸ್ಗಳಿವೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!
ಐಕ್ಯೂಬ್ ಸ್ಕೂಟರ್ನಲ್ಲಿ ಎಲ್ಇಡಿ ಹೆಡ್ಲ್ಯಾಂಪ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಟೈಲ್ಲೈಟ್ಸ್, ಪ್ರತಿಫಲಿಸುವ ಲೊಗೋ, ರೀಜನರೇಟಿವ್ ಬ್ರೇಕಿಂಗ್ ಸಿಸ್ಟಂ ಸೌಲಭ್ಯವು ಉತ್ತಮವಾಗಿದ್ದು, ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಸುರಕ್ಷತೆಗಾಗಿ ಹೊಸ ಸ್ಕೂಟರ್ನಲ್ಲಿ ಮುಂಭಾಗದ ಚಕ್ರದಲ್ಲಿ ಡಿಸ್ಕ್ ಬ್ರೇಕ್, ರಿಮೋಟ್ ಚಾರ್ಜಿಂಗ್ ಸ್ಟೆಟಸ್, ಜಿಯೋ ಫೆನ್ಸ್, ಲಾಸ್ಟ್ ಪಾರ್ಕಿಂಗ್ ಲೊಕೆಷನ್, ಇನ್ಕಮಿಂಗ್ ಕಾಲ್ಸ್/ಮೆಜೆಸ್ ಅಲರ್ಟ್, ಕ್ಯೂ-ಪಾರ್ಕ್ ಅಸಿಸ್ಟ್ ಸೌಲಭ್ಯಗಳನ್ನು ಹೊಂದಿದೆ.
MOST READ: ಪ್ರತಿ ಚಾರ್ಜ್ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ
ಈ ಮೂಲಕ ಹೊಸ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ 450ಎಕ್ಸ್ , ಬಜಾಜ್ ಚೇತಕ್ ಎಲೆಕ್ಟ್ರಿಕ್ ಮತ್ತು ಒಕಿನಾವ ಸ್ಕೂಟರ್ಗಳಿಗೆ ಉತ್ತಮ ಪೈಪೋಟಿ ನೀಡುತ್ತಿದ್ದು, ದೆಹಲಿ ನಂತರ ಮುಂಬರುವ ದಿನಗಳಲ್ಲಿ ವಿವಿಧ ನಗರಗಳಲ್ಲೂ ಹೊಸ ಸ್ಕೂಟರ್ ಮಾರಾಟಗೊಳ್ಳಲಿದೆ.