ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ 2021ರ ಫೆಬ್ರವರಿ ತಿಂಗಳ ಮಾರಾಟ ವರದಿಯನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ, ಕಳೆದ ತಿಂಗಳು ಟಿವಿಎಸ್ ಕಂಪನಿಯು 2,97,747 ಯುನಿಟ್ ಗಳನ್ನು ಮಾರಾಟಗೊಳಿಸಿವೆ.

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

2021ರ ಫೆಬ್ರವರಿ ತಿಂಗಳಲ್ಲಿ ವಾಹನಗಳ ಮಾರಾಟವು ಶೇ.2% ನಷ್ಟು ಹೆಚ್ಚಾಗಿದೆ. ಟಿವಿಎಸ್ ಕಂಪನಿಯು 2021ರ ಫೆಬ್ರವರಿಯಲ್ಲಿ 2,84,581 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಟಿವಿಎಸ್ 2,35,891 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಕಳೆದ ತಿಂಗಳು ಟಿವಿಎಸ್ 1,95,145 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

ಇನ್ನು 2020ರ ಫೆಬ್ರವರಿಯಲ್ಲಿ ಟಿವಿಎಸ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 1,69,684 ಯುನಿಟ್‌ಗಳನ್ನು ಮಾರಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.15 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

ಟಿವಿಎಸ್ ಕಂಪನಿಯು ಕಳೆದ ತಿಂಗಳು 1,37,259 ಬೈಕುಗಳನ್ನು ಮಾರಾಟಗೊಳಿಸಿವೆ. ಕಳೆದ ವರ್ಷದ ಬೈಕ್ ಮಾರಾಟಕ್ಕೆ ಹೋಲಿಸಿದರೆ ಟಿವಿಎಸ್ ಕಂಪನಿಯು ಶೇ. 16ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿ ಅನೇಕ ಹೊಸ ಮಾದರಿಗಳನ್ನು ಪಪರಿಚಯಿಸುವ ಮೂಲಕ ತನ್ನ ಮಾರುಕಟ್ಟೆ ಪಾಲನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕಂಪನಿಯು ಶೀಘ್ರದಲ್ಲೇ ಬಿಎಸ್ 6 ಎಂಜಿನ್‌ನೊಂದಿಗೆ 2021 ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಅನ್ನು ಬಿಡುಗಡೆ ಮಾಡಲಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

2021ರ ಸ್ಟಾರ್ ಸಿಟಿ ಪ್ಲಸ್‌ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಟಿವಿಎಸ್ ಸಜ್ಜಾಗುತ್ತಿದೆ. ಇದರ ಭಾಗವಾಗಿ ಟಿವಿಎಸ್ ತನ್ನ 2021ರ ಸ್ಟಾರ್ ಸಿಟಿ ಪ್ಲಸ್‌ ಬೈಕಿನ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು.

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

ಹೊಸ ಸ್ಪೆಷಲ್ ಎಢಿಷನ್ ಮಾದರಿ ಅಥವಾ ಹೊಸ ಆಲ್-ಬ್ಲ್ಯಾಕ್ ಬಣ್ಣದ ಆಯ್ಕೆಯಾಗಿರಬಹುದು. ಟೀಸರ್ ಚಿತ್ರದಲ್ಲಿ ಬೈಕ್‌ನ ಗೋಚರಿಸುವ ಅಂಶಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗೆ ಹೋಲುತ್ತದೆ. ಕಳೆದ ವರ್ಷ ಟಿವಿಎಸ್ ಕಂಪನಿಯು ಸ್ಟಾರ್ ಸಿಟಿ ಪ್ಲಸ್ ಬೈಕಿನ ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ ಬಿಎಸ್-6 ಅಪಾಚೆ ಆರ್‌ಆರ್ 310 ಬೈಕಿನ ಬೆಲೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಹೆಚ್ಚಿಸಿದೆ. ಟಿವಿಎಸ್ ಕಂಪನಿಯು ಈ ಅಪಾಚೆ ಆರ್‌ಆರ್ 310 ಬೈಕಿನ ಬೆಲೆಯನ್ನು ರೂ.2,000 ಗಳವರೆಗೆ ಹೆಚ್ಚಿಸಲಾಗಿದೆ.

ಫೆಬ್ರವರಿ ತಿಂಗಳ ಮಾರಾಟದಲ್ಲಿ ಏರಿಕೆ ಕಂಡ ಟಿವಿಎಸ್ ಮೋಟಾರ್

2021ರ ಫೆಬ್ರವರಿ ತಿಂಗಳ ಮಾರಾಟದಲ್ಲಿ ಬೆಳವೆಣಿಗೆಯನ್ನು ಸಾಧಿಸುವಲ್ಲಿ ಟಿವಿಎಸ್ ಕಂಪನಿಯು ಯಶಸ್ವಿಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ದ್ವಿಚಕ್ರ ವಾಹನಗಳು ಉತ್ತಮ ಬೇಡಿಕೆಯೊಂಡಿಗೆ ಮಾರಾಟವಾಗುತ್ತಿವೆ.

Most Read Articles

Kannada
English summary
TVS Records 18% Sales Growth In February 2021. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X