ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಟಿವಿಎಸ್ ಕಂಪನಿಯ ಎನ್‌ಟಾರ್ಕ್ ಸ್ಕೂಟರ್ ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳ ಮಾರಾಟದಲ್ಲಿ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ತನ್ನ ಪ್ರತಿಸ್ಪರ್ಧಿಯಾದ ಹೋಂಡಾ ಗ್ರಾಜಿಯಾ 125 ಸ್ಕೂಟರನ್ನು ಹಿಂದಿಕ್ಕಿದೆ.

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

2020ರ ಡಿಸೆಂಬರ್ ತಿಂಗಳ ಮಾರಾಟದಲ್ಲಿ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಹೋಂಡಾ ಆಕ್ಟಿವಾ, ಸುಜುಕಿ ಆಕ್ಸೆಸ್ ಮತ್ತು ಟಿವಿಎಸ್ ಜೂಪಿಟರ್ ಸ್ಕೂಟರ್ ಗಳ ನಂತರದ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ತಿಂಗಳು ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯ ಒಟ್ಟು 25,692 ಯುನಿಟ್ ಗಳು ಮಾರಾಟವಾಗಿವೆ. ಇದು ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇ.22 ರಷ್ಟು ಏರಿಕೆಯಾಗಿದೆ.

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್‌ಗೆ ಹೋಂಡಾ ಗ್ರಾಜಿಯಾ 125 ಮಾದರಿಯು ನೇರವಾಗಿ ಪೈಪೋಟಿಯನ್ನು ನೀಡುತ್ತದೆ. 2020ರ ಡಿಸೆಂಬರ್ ತಿಂಗಳಲ್ಲಿ ಹೋಂಡಾ ಗ್ರಾಜಿಯಾ 125 ಮಾದರಿಯ 3,347 ಯುನಿಟ್ ಗಳು ಮಾರಾಟವಾಗಿವೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರಿನಲ್ಲಿ 124 ಸಿಸಿ ಫ್ಯೂಯಲ್-ಇಂಜೆಕ್ಟ್ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 9.1 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನ 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ಟಿವಿಎಸ್ ಕಂಪನಿಯು ಇತ್ತೀಚೆಗೆ ತನ್ನ ಹೊಸ ರೇಸ್-ಎಡಿಷನ್' ಅನ್ನು ಹೊಸ ಬಣ್ಣಗಳ ಆಯ್ಕೆಯನ್ನು ಕಳೆದ ವರ್ಷದಲ್ಲಿ ಬಿಡುಗಡೆಗೊಳಿಸಿತ್ತು. ಹೊಸ ಸ್ಕೂಟರ್‌ನಲ್ಲಿ ಈ ಬಾರಿ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ರೇಸ್ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಿದೆ. ರೇಸ್ ಎಡಿಷನ್ ಎನ್‌ಟಾರ್ಕ್ ಮಾದರಿಯ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಿದೆ.

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ಪರ್ಫಾಮೆನ್ಸ್ ಪ್ರಿಯರಿಗಾಗಿ ಎನ್‌ಟಾರ್ಕ್ ರೇಸ್ ಎಡಿಷನ್ ಸಹ ಖರೀದಿಗೆ ಲಭ್ಯವಿದೆ. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಇದು ಹಲವಾರು ಕಾಸ್ಮೆಟಿಕ್ ಹಾಗೂ ಪ್ರೀಮಿಯಂ ಫೀಚರ್ಸ್ ಅಪ್‌ಡೇಟ್‌ಗಳನ್ನು ಮಾಡಲಾಗಿದೆ.

MOST READ: ಹೊಸ ಹೋಂಡಾ ಗ್ರಾಜಿಯಾ 125 ಸ್ಕೂಟರ್ ಮೇಲೆ ಆಕರ್ಷಕ ಕ್ಯಾಶ್‌ಬ್ಯಾಕ್ ಆಫರ್

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ತೂಕದಲ್ಲಿ ಹೆಚ್ಚಳವಾಗಿದೆ. ಎನ್‌ಟಾರ್ಕ್ 125 ಸ್ಕೂಟರ್ ತೂಕವು 1.9 ಕೆಜಿಯಷ್ಟು ಹೆಚ್ಚಾಗಿದೆ. ಒಟ್ಟು ತೂಕ 118 ಕೆಜಿಯಾಗಿದೆ. ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು 5-ಲೀಟರ್‌ನಿಂದ 5.8-ಲೀಟರ್‌ಗೆ ಹೆಚ್ಚಿಸಿದೆ.

ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಹೋಂಡಾ ಗ್ರಾಜಿಯಾ ಸ್ಕೂಟರನ್ನು ಹಿಂದಿಕ್ಕಿದ ಟಿವಿಎಸ್ ಎನ್‌ಟಾರ್ಕ್

ಟಿವಿಎಸ್ ಎನ್‌ಟಾರ್ಕ್ 125 ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಎಫ್ಐ, ಸುಜುಕಿ ಆಕ್ಸೆಸ್ 125, ಯಮಹಾ ರೇ ಜೆಡ್ಆರ್ 125 ಮತ್ತು ಹೋಂಡಾ ಗ್ರಾಜಿಯಾ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Ntorq Beats Honda Grazia By Big Margin In Dec 2020 Sales. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X