ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಟಿವಿಎಸ್ ಮೋಟರ್ ಕಂಪನಿಯು ತನ್ನ ಜನಪ್ರಿಯ ಪ್ರೀಮಿಯಂ ಸ್ಕೂಟರ್ ಎನ್‌ಟಾರ್ಕ್ 125 ಮಾದರಿಯಲ್ಲಿ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಮಾದರಿಯು ಎನ್‌ಟಾರ್ಕ್ 125 ಸ್ಕೂಟರಿನ ಎರಡನೇ ಟಾಪ್ ಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್ ಮತ್ತು ಸೂಪರ್ ಸ್ಕ್ವಾಡ್ ಎಡಿಷನ್ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಹೊಸದಾಗಿ ಎನ್‌ಟಾರ್ಕ್ 125 ರೇಸ್ ಎಕ್ಸ್‌ಪಿ ಎಡಿಷನ್ ಪರಿಚಯಿಸಲಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಎನ್‌ಟಾರ್ಕ್ 125 ರೇಸ್ ಎಕ್ಸ್‌ಪಿ ಎಡಿಷನ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 83,275 ಬೆಲೆ ಹೊಂದಿದ್ದು, ಇದು ಬೇಸಿಕ್ ಎನ್‌ಟಾರ್ಕ್ 125 ಮಾದರಿಗಿಂತಲೂ ರೂ. 7 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೆಚ್ಚು ಗ್ರಾಫಿಕ್ಸ್ ಮತ್ತು ಪವರ್‌ಫುಲ್ ಎಂಜಿನ್ ಟೋನ್‌ನೊಂದಿಗೆ ಸ್ಪೋರ್ಟಿ ಮಾದರಿಯಾಗಿ ಗುರುತಿಸಿಕೊಂಡಿದ್ದು, ಹೊಸ ಮಾದರಿಯಲ್ಲಿ ಸ್ಮಾರ್ಟ್‌ಕನೆಕ್ಟ್ ಮತ್ತು ವಾಯ್ಸ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ರೇಸ್ ಎಕ್ಸ್‌ಪಿ ಎಡಿಷನ್‌ನಲ್ಲಿ ಎನ್‌ಟಾರ್ಕ್ 125 ಮಾದರಿಯಲ್ಲಿ ಇತರೆ ವೆರಿಯೆಂಟ್‌ಗಳಲ್ಲಿ ಇರುವಂತೆ 124 ಏರ್ ಕೂಲ್ಡ್, ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಬಳಕೆ ಮಾಡಿದ್ದು, ಹೊಸ ಆವೃತ್ತಿಯು ಇತರೆ ಆವೃತ್ತಿಗಿಂತಲೂ ಹೆಚ್ಚು ಹಾರ್ಸ್ ಪವರ್ ಹೊಂದಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಸ್ಟ್ಯಾಂಡರ್ಡ್ ಮಾದರಿಗಳು 9.17-ಬಿಎಚ್‌ಪಿ ಹೊಂದಿದ್ದರೆ ರೇಸ್ ಎಕ್ಸ್‌ಪಿ ಮಾದರಿಯು 10-ಬಿಎಚ್‌ಪಿ ಸಾಮರ್ಥ್ಯ ಹೊಂದಿದ್ದು, ಈ ಹಿಂದಿನಂತಯೇ 10.5-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಜೊತೆಗೆ ಹೊಸ ಎನ್‌ಟಾರ್ಕ್ 125 ರೇಸ್ ಎಕ್ಸ್‌ಪಿ ಮಾದರಿಯಲ್ಲಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ರೇಸ್ ಮತ್ತು ಸ್ಟ್ರೀಟ್ ರೈಡ್ ಮೋಡ್‌ಗಳನ್ನು ಜೋಡಿಸಿದ್ದು, ರೇಸ್ ಮೋಡ್ ಪರ್ಫಾಮೆನ್ಸ್‌ಗಾಗಿ ಮತ್ತು ಸ್ಟ್ರೀಟ್ ಮೋಡ್ ಇಂಧನ ದಕ್ಷತೆ ಕಾಯ್ದುಕೊಳ್ಳಲು ಸಹಕಾರಿಯಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಜೊತೆಗೆ ಹೊಸ ವೆರಿಯೆಂಟ್‌ನಲ್ಲಿ ಟಿವಿಎಸ್ ಕಂಪನಿಯು ಉನ್ನತೀಕರಿಸಲಾದ ಹಲವು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಿದ್ದು, ಟಿ ಆಕಾರದ ಹೆಡ್‌ಲ್ಯಾಂಪ್ ಮತ್ತು ಟೈಲ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್ಎಸ್, ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಏಂಜಿನ್ ಕಿಲ್ ಸ್ವಿಚ್, 5.8 -ಲೀಟರ್ ಫ್ಯೂಲ್ ಟ್ಯಾಂಕ್ ನೀಡಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಉನ್ನತೀಕರಿಸಿದ ಸ್ಮಾರ್ಟ್‌ಕನೆಕ್ಸ್ ಫೀಚರ್ಸ್‌ನಲ್ಲಿ ಲೈವ್ ಡ್ಯಾಶ್‌ಬೋರ್ಡ್ ಮೂಲಕ ರೈಡಿಂಗ್ ಮೋಡ್ ಮಾಹಿತಿ ಸೌಲಭ್ಯ, ಬದಲಾವಣೆ ಮಾಡಲಾದ ಯುಐ ಮತ್ತು ಯುಎಕ್ಸ್, ಉಳಿಸಿಕೊಳ್ಳಬಹುದಾದ ನ್ಯಾವಿಗೇಷನ್ ಅಡ್ರೆಸ್ ಮತ್ತು ಸ್ಪೋರ್ಟಿ ಗ್ರಾಫಿಕ್ಸ್ ಆಕರ್ಷಕವಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯಲ್ಲಿ ಹೊಸ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆ

ಇನ್ನು ಹೊಸ ವೆರಿಯೆಂಟ್‌ನಲ್ಲಿ ಎನ್‌ಟಾರ್ಕ್ 125 ಮಾದರಿಯು ಐದು ವೆರಿಯೆಂಟ್ ಪಡೆದುಕೊಂಡಂತಾಗಿದ್ದು, ಡ್ರಮ್ ಮಾದರಿಯು ರೂ. 76,645, ಡಿಸ್ಕ್ ಮಾದರಿಯು ರೂ. 80,795 ರೇಸ್ ಎಡಿಷನ್ ಮಾದರಿಯು ರೂ. 80,795, ಸೂಪರ್ ಸ್ಕ್ವಾಡ್ ಎಡಿಷನ್ ರೂ. 84,575 ಮತ್ತು ಹೊಸದಾಗಿ ರೇಸ್ ಎಕ್ಸ್‌ಪಿ ಎಡಿಷನ್ ಬಿಡುಗಡೆಯಾಗಿದೆ.

Most Read Articles

Kannada
English summary
TVS Ntorq 125 Race XP Launched In India At Rs 83,275. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X