ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಮೇಲೆ ಬಂಪರ್ ಆಫರ್

ಟಿವಿಎಸ್ ಮೋಟಾರ್ ಕಂಪನಿ ತನ್ನ ಹೆಚ್ಚು ಜನಪ್ರಿಯ ಎನ್‌ಟಾರ್ಕ್ 125 ಸ್ಕೂಟರ್ ಗಾಗಿ ಹೊಸ ಇಎಂಐ ಆಫರ್ ಅನ್ನು ಪರಿಚಯಿಸಿದೆ. ಈ ಟಿವಿಎಸ್ ಎನ್‌ಟಾರ್ಕ್ 125 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಕೂಟರ್ ಗಳಲ್ಲಿ ಒಂದಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಟಿವಿಎಸ್ ಮೋಟಾರ್ ತನ್ನ ಜನಪ್ರಿಯ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಯಾವುದೇ ವೆಚ್ಚವಿಲ್ಲದ ಇಎಂಐ ಆಫರ್ ಅನ್ನು ನೀಡುತ್ತಿದೆ. ಈ ನೋ ಕಾಸ್ಟ್ ಇಎಂಐ ಸ್ಕೀಮ್ ಮೂರು ತಿಂಗಳು ಮತ್ತು ಆರು ತಿಂಗಳ ಅವಧಿವರೆಗೆ ಮಾತ್ರ ಲಭ್ಯವಿದೆ, ಕ್ರೆಡಿಟ್ ಕಾರ್ಡ್ ಮೂಲಕ ಆನ್‌ಲೈನ್ ವಹಿವಾಟು ನಡೆಸಿದರೆ ಮಾತ್ರ ಈ ಕೊಡುಗೆಯನ್ನು ಪಡೆಯಬಹುದು. ಈ ತಿಂಗಳ 15 ರವರೆಗೆ ಈ ಇಎಂಐ ಸ್ಕೀಮ್ ಮಾನ್ಯವಾಗಿರುತ್ತದೆ. ಆದರೆ ಇದಕ್ಕೆ ತನ್ನದೇ ಆದ ಕೆಲವು ನಿಯಮಗಳು ಮತ್ತು ಕೆಲವು ಷರತ್ತುಗಳಿವೆ. ಇದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಹತ್ತಿರದ ಟಿವಿಎಸ್ ಮೋಟಾರ್ ಕಂಪನಿಯ ಡೀಲರ್‌ಶಿಪ್‌ಗೆ ಭೇಟಿ ನೀಡಿ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದರಲ್ಲಿ 124 ಸಿಸಿ ಫ್ಯೂಯಲ್-ಇಂಜೆಕ್ಟ್ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7000 ಆರ್‌ಪಿಎಂನಲ್ಲಿ 9.1 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನ 10.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಈ ಎಂಜಿನ್ ನೊಂದಿಗೆ ಸಿವಿಟಿ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಇನ್ನು ಎನ್‌ಟಾರ್ಕ್ 125 ಸ್ಕೂಟರ್ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿದೆ, ಇದು ಕಂಪನಿಯ ಸ್ಮಾರ್ಟ್ ಎಕ್ಸ್ ಕನೆಕ್ಟ್ ಕನೆಕ್ಟಿವಿಟಿ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಸ್ಮಾರ್ಟ್ ಎಕ್ಸ್ ಕನೆಕ್ಟಿವಿಟಿ ಫೀಚರ್ ಮೂಲಕ ಸ್ಮಾರ್ಟ್ ಫೋನ್ ಅನ್ನು ಬ್ಲೂಟೂತ್ ಮೂಲಕ ಸ್ಕೂಟರ್'ಗೆ ಕನೆಕ್ಟ್ ಮಾಡಿ ಹಲವಾರು ಫೀಚರ್ಸ್ ಗಳನ್ನು ಬಳಸಬಹುದು.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಇದರ ಕ್ಲಸ್ಟರ್ ನ್ಯಾವಿಗೇಷನ್ ಅಸಿಸ್ಟ್, ಟಾಪ್ ಸ್ಪೀಡ್ ರೆಕಾರ್ಡರ್, ಇನ್ ಬಿಲ್ಡ್ ಲ್ಯಾಪ್-ಟೈಮರ್, ಫೋನ್-ಬ್ಯಾಟರಿ ಸಾಮರ್ಥ್ಯ ಪ್ರದರ್ಶನ, ಸರ್ವಿಸ್ ರಿಮೈಂಡರ್, ಟ್ರಿಪ್ ಮೀಟರ್ ಮತ್ತು ಸ್ಟ್ರೀಟ್ ಮತ್ತು ಸ್ಪೋರ್ಟ್‌ನಂತಹ ಮಲ್ಟಿ-ರೈಡ್ ಸ್ಟ್ಯಾಟಿಸ್ಟಿಕ್ ಮೋಡ್‌ಗಳ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಟಿವಿಎಸ್ ಕಂಪನಿಯು ಭಾರತದಲ್ಲಿ ತನ್ನ ಹೊಸ ರೇಸ್-ಎಡಿಷನ್' ಅನ್ನು ಹೊಸ ಬಣ್ಣಗಳ ಆಯ್ಕೆಯನ್ನು ಕಳೆದ ವರ್ಷದಲ್ಲಿ ಬಿಡುಗಡೆಗೊಳಿಸಿತ್ತು. ಸ್ಟ್ಯಾಂಡರ್ಡ್ ಮಾದರಿಗಿಂತಲೂ ಇದು ಹಲವಾರು ಕಾಸ್ಮೆಟಿಕ್ ಹಾಗೂ ಪ್ರೀಮಿಯಂ ಫೀಚರ್ಸ್ ಅಪ್‌ಡೇಟ್‌ಗಳನ್ನು ಪಡೆದುಕೊಂಡಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ರೇಸ್ ಎಡಿಷನ್‌ನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಎಕ್ಸಾಸ್ಟ್ ಸಿಸ್ಟಂ ಬದಲಾವಣೆ ಮಾಡಿರುವುದು ಈ ಬಾರಿ ಪ್ರಮುಖ ಆಕರ್ಷಣೆಯಾಗಿದೆ. ರೇಸ್ ಎಡಿಷನ್ ಎನ್‌ಟಾರ್ಕ್ 125 ಸ್ಕೂಟರ್ ಮಾರಾಟವನ್ನು ಹೆಚ್ಚಿಸಲು ಸಹಾಯವಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಭಾರತದಲ್ಲಿ ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದ ಬಳಿಕ ತೂಕದಲ್ಲಿ ಹೆಚ್ಚಳವಾಗಿದೆ. ಎನ್‌ಟಾರ್ಕ್ 125 ಸ್ಕೂಟರ್ ತೂಕವು 1.9 ಕೆಜಿಯಷ್ಟು ಹೆಚ್ಚಾಗಿದೆ. ಒಟ್ಟು ತೂಕ 118 ಕೆಜಿಯಾಗಿದೆ. ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು 5-ಲೀಟರ್‌ನಿಂದ 5.8-ಲೀಟರ್‌ಗೆ ಹೆಚ್ಚಿಸಲಾಗಿದೆ.

ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್ ಖರೀದಿ ಮೇಲೆ ಬಂಪರ್ ಆಫರ್

ಟಿವಿಎಸ್ ಎನ್‌ಟಾರ್ಕ್ 125 ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 125 ಎಫ್ಐ, ಸುಜುಕಿ ಆಕ್ಸೆಸ್ 125, ಯಮಹಾ ರೇ ಜೆಡ್ಆರ್ 125 ಮತ್ತು ಹೋಂಡಾ ಗ್ರಾಜಿಯಾ ಸ್ಕೂಟರ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
TVS Ntorq 125 No Cost Emi Scheme Available. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X