ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ದೇಶಿಯ ಮಾರುಕಟ್ಟೆಯಲ್ಲಿ ತನ್ನ ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಟಿವಿಎಸ್ ಕಂಪನಿಯು ತನ್ನ ಸರಣಿಯಲ್ಲಿರುವ ಇತರ ದ್ವಿಚಕ್ರ ವಾಹನಗಳ ಬೆಲೆಯನ್ನು ಕೂಡ ಹೆಚ್ಚಿಸಲಾಗಿದೆ.

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಕಂಪನಿಯು ರೇಡಿಯಾನ್ ಬೈಕಿನ ಎಲ್ಲಾ ರೂಪಾಂತರಗಳ ಬೆಲೆಯನ್ನು ರೂ,1,280 ವರೆಗೆ ಬೆಲೆಯನ್ನು ಹೆಚ್ಚಿಸಿದೆ. ಈ ಬೈಕಿನ ಸ್ಪೆಷಲ್ ಎಡಿಷನ್ ಮಾದರಿಯು ಕೂಡ ಲಭ್ಯವಿದೆ. ಇದು ಡ್ರಮ್ ಮತ್ತು ಡಿಸ್ಕ್ ಆಯ್ಕೆಯೊಂದಿಗೆ ಬರುತ್ತದೆ. ಇದೀಗ ಈ ಡ್ರಮ್ ರೂಪಾಂತರದ ಎಲೆಯು ರೂ.65,567 ಗಳಾದರೆ, ಡಿಸ್ಕ್ ರೂಪಾಂತರದ ಬೆಲೆಯು ರೂ.68,567 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಇನ್ನು ಟಿವಿಎಸ್ ತನ್ನ ಸ್ಪೋರ್ಟ್ ಬೈಕಿನ ಬೆಲೆಯನ್ನು ರೂ.30 ಗಳಷ್ಟು ಹೆಚ್ಚಿಸಲಾಗಿದೆ. ಈ ಬೈಕ್ ಕಿಕ್ ಸ್ಟಾರ್ಟ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟ್ ರೂಪಾಂತಗಳಲ್ಲಿ ಲಭ್ಯವಿದೆ. ಇವುಗಳ ಬೆಲೆ ಈಗ ಕ್ರಮವಾಗಿ ರೂ.56,130 ಮತ್ತು ರೂ.62,980 ಗಳಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ರೇಡಿಯಾನ್ ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 109.7 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 7,350 ಆರ್‌ಪಿಎಂನಲ್ಲಿ 8.08 ಬಿಹೆಚ್‌ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಎಂಜಿನ್ ನೊಂದಿಗೆ ನಾಲ್ಕು-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ ನಲ್ಲಿ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರ್ಪಡಿಸಲಾಗಿದೆ. ಇದರಿಂದಾಗಿ ಈ ಹೊಸ ಬೈಕಿನ ಮೈಲೇಜ್ ಶೇ.15 ಸುಧಾರಣೆಯಾಗಿದೆ ಎಂದು ಕಂಪನಿ ಹೇಳಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಬಿಎಸ್-6 ರೇಡಿಯಾನ್ ಬೈಕ್ ಡಿಸ್ಕ್ ಬ್ರೇಕ್ ಮತ್ತು ಡ್ರಮ್ ಬ್ರೇಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರಲ್ಲಿ ಡಿಸ್ಕ್ ಬ್ರೇಕ್ ರೂಪಾಂತರವು ಈಗ 118 ಕೆಜಿ ತೂಕವನ್ನು ಹೊಂದಿದ್ದರೆ, ಡ್ರಮ್ ಬ್ರೇಕ್ ರೂಪಾಂತರವು 116 ಕೆಜಿ ತೂಕವನ್ನು ಹೊಂದಿದೆ.

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಡಿಸ್ಕ್ ಬ್ರೇಕ್ ರೂಪಾಂತರವು ಟ್ಯಾಂಕ್ ಪ್ಯಾಡ್, ಪೆಟ್ರೋಲ್ ಟ್ಯಾಂಕ್ ಕುಶನ್, ಪ್ರೀಮಿಯಂ ಸೀಟ್ ವಿನ್ಯಾಸ, ಕ್ರೋಮ್ ರೇರ್ ವ್ಯೂ ಮಿರರ್ ಮತ್ತು ಹೊಸ ಗ್ರಾಫಿಕ್ಸ್ ಅನ್ನು ಹೊಂದಿದೆ. ಈ ಟಿವಿಎಸ್ ರೇಡಿಯಾನ್ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಸ್ಪೋರ್ಟ್ ಬೈಕಿನ ಬಗ್ಗೆ ಹೇಳುವುದಾದರೆ, ಇದರಲ್ಲಿ 109.7 ಸಿಸಿ, ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8.17 ಬಿಹೆಚ್‌ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಹೊಸ ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಹೊಂದಿದೆ. ಈ ಹೊಸ ಟಿವಿಎಸ್ ಸ್ಪೋರ್ಟ್ ಬೈಕು ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಶೇ.15 ರಷ್ಟು ಹೆಚ್ಚಿನ ಮೈಲೇಜ್ ಅನ್ನು ನೀಡುತ್ತದೆ.

ರೇಡಿಯಾನ್ ಮತ್ತು ಸ್ಪೋರ್ಟ್ ಬೈಕ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಸ್ಪೋರ್ಟ್ ಬೈಕಿನಲ್ಲಿ ಸಸ್ಪೆಂಕ್ಷನ್ ಸೆಟಪ್ ಗಾಗಿ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಐದು ಹಂತದ ಅಡ್ಜೆಸ್ಟಬಲ್ ರೇರ್ ಶಾಕ್ ಅಬ್ಸಾರ್ಬರ್ ಅನ್ನು ಹೊಂದಿದೆ. ಇನ್ನು ಆಂಕರಿಂಗ್ ಪವರ್ 130 ಎಂಎಂ ಫ್ರಂಟ್ ಮತ್ತು 110 ಎಂಎಂ ರೇರ್ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

Most Read Articles

Kannada
English summary
TVS Radeon And Sport Prices Increased. Read In Kannada.
Story first published: Thursday, April 15, 2021, 21:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X