ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಮೋಟಾರ್ ತನ್ನ ರೇಡಿಯಾನ್ ಬೈಕ್ ಅನ್ನು ಹೊಸ ಬಣ್ಣಗಳ ಅಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹಬ್ಬದ ಸೀಸನ್ ನಲ್ಲಿ ಮಾರಾಟವನ್ನು ಹೆಚ್ಚಿಸಲು ಟಿವಿಎಸ್ ರೇಡಿಯಾನ್(TVS Radeon) ಬೈಕ್ ಅನ್ನು ಬಿಡುಗಡೆಗೊಳಿಸಿರಬಹುದು.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಹೊಸ ಟಿವಿಎಸ್ ರೇಡಿಯಾನ್ ಬೈಕ್ ರೆಡ್ ಮತ್ತು ಬ್ಲ್ಯಾಕ್ ಹಾಗೂ ಬ್ಲೂ ಮತ್ತು ಬ್ಲ್ಯಾಕ್ ಎಂಬ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ. ಬೆಲೆಗೆ ಸಂಬಂಧಿಸಿದಂತೆ, ಹೊಸ ಡ್ಯುಯಲ್-ಟೋನ್ ರೇಡಿಯಾನ್ ಸ್ಟ್ಯಾಂಡರ್ಡ್ ಕಲರ್ ಆಯ್ಕೆಗಳಿಗಿಂತ ಸುಮಾರು ರೂ.900 ಹೆಚ್ಚಾಗಿದೆ. ಟಿವಿಎಸ್ ರೇಡಿಯಾನ್ ಡ್ಯುಯಲ್-ಟೋನ್ ಡ್ರಮ್ ಬ್ರೇಕ್ ವೆರಿಯಂಟ್ ಬೆಲೆಯು ರೂ.68,982 ಗಳಾದರೆ, ಡ್ಯುಯಲ್ ಟೋನ್ ಡಿಸ್ಕ್ ಬ್ರೇಕ್ ವೆರಿಯಂಟ್ ಬೆಲೆಯು ರೂ.71,982 ಗಳಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಡ್ಯುಯಲ್-ಟೋನ್ ಬಣ್ಣದೊಂದಿಗೆ ರೇಡಿಯಾನ್ ಬೈಕಿನ ಸ್ಟೈಲಿಂಗ್ ಗಮನಾರ್ಹ ಅಂತರದಿಂದ ಸುಧಾರಿಸಿದೆ. ಡ್ಯುಯಲ್-ಟೋನ್ ಅಂಶಗಳನ್ನು ಫ್ಯೂಯಲ್ ಟ್ಯಾಂಕ್ ಮತ್ತು ಸೈಡ್ ಪ್ಯಾನಲ್‌ಗಳಲ್ಲಿ ಕಾಣಬಹುದು. ಫ್ಯೂಯಲ್ ಟ್ಯಾಂಕ್ ಮೇಲೆ ಬಿಳಿ ಬಣ್ಣದ ಸ್ಟ್ರೀಪ್ ಮತ್ತು ಇದು ಒಟ್ಟಾರೆ ವಿನ್ಯಾಸಕ್ಕೆ ಸ್ವಲ್ಪ ಸ್ಪೋರ್ಟಿನೆಸ್ ಅನ್ನು ನೀಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಹೆಡ್‌ಲ್ಯಾಂಪ್ ಮಾಸ್ಕ್ ಬಾಡಿ ಬಣ್ಣದಲ್ಲಿದೆ. ಈ ಬೈಕಿನ ಮುಂಭಾಗದ ಮಡ್‌ಗಾರ್ಡ್ ಮತ್ತು ಹಿಂಭಾಗದ ಬಾಡಿ ಪ್ಯಾನಲ್ ಅನ್ನು ಗ್ಲೋಷ್ ಬ್ಲ್ಯಾಕ್ ಬಣ್ಣದಿಂದ ಕೂಡಿದೆ. ಬೈಕಿನ ಒಟ್ಟಾರೆ ವಿನ್ಯಾಸವನ್ನು ಉಳಿಸಿಕೊಳ್ಳಲಾಗಿದೆ. ಇಂಜಿನ್ ಕೇಸಿಂಗ್‌ನಲ್ಲಿನ ಗೋಲ್ಡ್ ಫಿನಿಶ್ ಹಾಗೂ ಅಲಾಯ್ ವ್ಹೀಲ್‌ಗಳಲ್ಲಿ ಬ್ಲ್ಯಾಕ್ ಬಣ್ಣವನ್ನು ಸಹ ಸ್ಟ್ಯಾಂಡರ್ಡ್ ಮಾಡೆಲ್ ನಿಂದ ಉಳಿಸಿಕೊಳ್ಳಲಾಗಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಈ ಸೌಂದರ್ಯದ ವ್ಯತ್ಯಾಸಗಳ ಹೊರತಾಗಿ, ಡ್ಯುಯಲ್-ಟೋನ್ ಟಿವಿಎಸ್ ರೇಡಿಯಾನ್ ಬೈಕ್ ಉಳಿದಂತೆ ಯಾವುದೇ ವ್ಯತ್ಯಾಸಗಳಿಲ್ಲ. ಈ ಬೈಕಿನಲ್ಲಿ ಅದೇ ಏರ್-ಕೂಲ್ಡ್, 109.7ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 7,350 ಆರ್‌ಪಿಎಂನಲ್ಲಿ 8.08 ಬಿಹೆಚ್‌ಪಿ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಎಂಜಿನ್ ನೊಂದಿಗೆ ನಾಲ್ಕು-ಸ್ಪೀಡ್ ಗೇರ್‌ಬಾಕ್ಸ್‌ ಜೋಡಿಸಲಾಗಿದೆ. ಈ ಎಂಜಿನ್ ನಲ್ಲಿ ಫ್ಯೂಯಲ್ ಇಂಜೆಕ್ಷನ್ ಅನ್ನು ಸೇರ್ಪಡಿಸಲಾಗಿದೆ. ಈ ಟಿವಿಎಸ್ ರೇಡಿಯಾನ್ ಬೈಕ್ 79.3 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ ಈ ಬೈಕಿನಲ್ಲಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್, SB ಚಾರ್ಜಿಂಗ್ ಪೋರ್ಟ್ ಮತ್ತು ಹಿಂಭಾಗದಲ್ಲಿ ಲಗೇಜ್ ರ್ಯಾಕ್ ಅನ್ನು ಒಳಗೊಂಡಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ರೇಡಿಯಾನ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಸೆಟಪ್ ಅನ್ನು ಒಳಗೊಂಡಿರುತ್ತದೆ. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂಗಳ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್ ಅನ್ನು ಹೊಂದಿದೆ. ಇನ್ನು 240 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಟಿವಿಎಸ್ ಮೋಟಾರ್ ಕಂಪನಿಯು ತನ್ನ ರೇಡಿಯಾನ್ 110ಸಿಸಿ ಬೈಕನ್ನು ಮೊದಲ ಬಾರಿಗೆ ಭಾರತದಲ್ಲಿ 2018ರ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಿತ್ತು. ಈ ಟಿವಿಎಸ್ ರೇಡಿಯಾನ್ ಬೈಕ್ ಮಾರಾಟದಲ್ಲಿ ಕಳೆದ ವರ್ಷ ಮೂರು ಲಕ್ಷ ಯೂನಿಟ್‌ಗಳು ಮಾರಾಟವಾ ಹೊಸ ಮೈಲುಗಲ್ಲು ಸಾಧಿಸಿತು.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳ ಮಾರಾಟ ವರದಿಯನ್ನು ಇತ್ತೀಚೆಗೆ ಬಹಿರಂಗಪಡಿಸಿತು. ಅದರಂತೆ ಕಳೆದ ತಿಂಗಳು ಒಟ್ಟು 3,47,156 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ.ಟಿವಿಎಸ್ ಮೋಟಾರ್ ಕಂಪನಿಯ ಈ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳ ಮಾರಾಟ ಪ್ರಮಾಣಕ್ಕಿಂತ 6% ನಷ್ಟು ಹೆಚ್ಚಾಗಿದೆ. 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 3,27,692 ಯುನಿಟ್ TVS ವಾಹನಗಳನ್ನು ಮಾರಾಟ ಮಾಡಿತ್ತು.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಹಾಗೆಯೇ ಸೆಪ್ಟೆಂಬರ್‌ ತಿಂಗಳ ಮಾರಾಟ ಪ್ರಮಾಣವು ಆಗಸ್ಟ್ ತಿಂಗಳ ಮಾರಾಟಕ್ಕಿಂತ 19.42% ನಷ್ಟು ಹೆಚ್ಚಾಗಿದೆ. ಆಗಸ್ಟ್ ತಿಂಗಳಿನಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 3 ಲಕ್ಷಕ್ಕಿಂತ ಕಡಿಮೆ ಅಂದರೆ 2,90,694 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ತಿಂಗಳು ಟಿವಿಎಸ್ ಮೋಟಾರ್ ಮಾರಾಟ ಮಾಡಿರುವ 3,47,156 ಯುನಿಟ್ ವಾಹನಗಳಲ್ಲಿ ‌ದ್ವಿ ಚಕ್ರ ವಾಹನಗಳು ಮಾತ್ರವಲ್ಲದೆ ತ್ರಿಚಕ್ರ ವಾಹನಗಳೂ ಸಹ ಸೇರಿವೆ.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ದ್ವಿಚಕ್ರ ಚಕ್ರ ವಾಹನ ಮಾರಾಟದ ಬಗ್ಗೆ ಹೇಳುವುದಾದರೆ ಟಿವಿಎಸ್ ಮೋಟಾರ್ ಕಂಪನಿಯು ಕಳೆದ ತಿಂಗಳು 3,32,511 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಂಪನಿಯು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ 3,13,332 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 2,74,313 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಹೊಸ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆಗೊಂಡ TVS Radeon ಬೈಕ್

ಟಿವಿಎಸ್ ರೇಡಿಯಾನ್ ಬೈಕ್ ಯಾವಾಗಲೂ ಆಕರ್ಷಕ ಬೈಕ್ ಆಗಿದೆ. ಇದು ಸಮರ್ಥವಾದ ಚಾಸಿಸ್, ಯೋಗ್ಯವಾದ-ಶಕ್ತಿಯುತ ಎಂಜಿನ್ ಮತ್ತು ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದೀಗ ಹೊಸ ಡ್ಯುಯಲ್-ಟೋನ್ ಬಣ್ಣಗಳ ಆಯ್ಕೆಗಳ ಮೂಲಕ ಟಿವಿಎಸ್ ರೇಡಿಯಾನ್ ಬೈಕ್ ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು. ಟಿವಿಎಸ್ ರೇಡಿಯಾನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಡಿ 110 ಡ್ರೀಮ್ ಡಿಎಕ್ಸ್, ಬಜಾಜ್ ಪ್ಲಾಟಿನಾ ಇಎಸ್ 100 ಮತ್ತು ಹೀರೋ ಸ್ಪ್ಲೆಂಡರ್ ಪ್ಲಸ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
Tvs radeon new colours dual tone launched in india prices details
Story first published: Saturday, October 23, 2021, 16:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X