ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ತಮಿಳುನಾಡಿನ ಹೊಸೂರಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ TVS Motor (ಟಿವಿಎಸ್ ಮೋಟರ್‌) ದೇಶಿಯ ಮಾರುಕಟ್ಟೆಯಲ್ಲಿ ಹಲವು ಬೈಕ್ ಹಾಗೂ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತದೆ. TVS Scooty (ಸ್ಕೂಟಿ) ಪ್ರವೇಶ ಮಟ್ಟದ ಸ್ಕೂಟರ್ ಸರಣಿಯು ದೇಶಿಯ ಮಾರುಕಟ್ಟೆಯಲ್ಲಿರುವ ಅತ್ಯಂತ ಜನಪ್ರಿಯ ಸ್ಕೂಟರ್ ಸರಣಿಗಳಲ್ಲಿ ಒಂದಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

Scooty, ಟಿವಿಎಸ್ ಮೋಟರ್‌ ಕಂಪನಿಯ ಕೈಗೆಟುಕುವ ಸರಣಿಯ ಸ್ಕೂಟರ್ ಆಗಿದೆ. ಕಂಪನಿಯು ಟಿವಿಎಸ್ ಸ್ಕೂಟಿ ಸರಣಿಯಲ್ಲಿ ಎರಡು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತದೆ. ಇದರಲ್ಲಿ ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಹಾಗೂ ಟಿವಿಎಸ್ ಸ್ಕೂಟಿ ಜೆಸ್ಟ್ 110 ಮಾದರಿಗಳು ಸೇರಿವೆ. ಈಗ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಟಿವಿಎಸ್ ಸ್ಕೂಟಿ ಸರಣಿಯ 50 ಲಕ್ಷ ಯುನಿಟ್‌ಗಳ ಮಾರಾಟವನ್ನು ಪೂರ್ಣಗೊಳಿಸಿರುವುದಾಗಿ ಮಾಹಿತಿ ನೀಡಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಟಿವಿಎಸ್ ಸ್ಕೂಟಿ ದೇಶಿಯ ಮಾರುಕಟ್ಟೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಮಹಿಳೆಯರ ನೆಚ್ಚಿನ ಸ್ಕೂಟರ್ ಗಳಲ್ಲಿ ಒಂದಾಗಿದೆ. ಬಿಡುಗಡೆಯಾದಾಗಿನಿಂದ ಟಿವಿಎಸ್ ಸ್ಕೂಟಿ ಭಾರತೀಯ ಮಹಿಳೆಯರ ಪ್ರಯಾಣದ ಅಗತ್ಯಗಳನ್ನು ಪೂರೈಸುವ ಮೂಲಕ ಸಾಂಪ್ರದಾಯಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ. ಟಿವಿಎಸ್ ಸ್ಕೂಟಿ ತನ್ನ ಗ್ರಾಹಕರ ವಿಕಾಸವನ್ನು ಪ್ರತಿ ಹಂತದಲ್ಲೂ ಹೊಂದಿಸಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಈ ಸ್ಕೂಟರ್ ದಿನ ನಿತ್ಯದ ಪ್ರಯಾಣಿಕರಿಗೆ ಸೂಕ್ತ ವಾಹನವಾಗಿದೆ. ಕಂಪನಿಯು ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಅನ್ನು ಮಾರುಕಟ್ಟೆಯಲ್ಲಿ ಎರಡು ಮಾದರಿಗಳಲ್ಲಿಮಾರಾಟ ಮಾಡುತ್ತದೆ. ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್ ಗ್ಲೋಸಿ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 52,915 ಗಳಾದರೆ, ಸ್ಕೂಟಿ ಪೆಪ್ ಪ್ಲಸ್ ಮ್ಯಾಟ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 54,735 ಗಳಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಟಿವಿಎಸ್ ಸ್ಕೂಟಿ ಪೆಪ್ ಪ್ಲಸ್‌ನಲ್ಲಿ ಅಳವಡಿಸಿರುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಮಾದರಿಯಲ್ಲಿ ಬಿಎಸ್ 6 ಆಧಾರಿತ 87.8 ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 6,500 ಆರ್‌ಪಿ‌ಎಂನಲ್ಲಿ 5.43 ಬಿ‌ಹೆಚ್‌ಪಿ ಪವರ್ ಹಾಗೂ 3,500 ಆರ್‌ಪಿ‌ಎಂನಲ್ಲಿ 6.5 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಇನ್ನು ಇದರ ಫೀಚರ್ ಗಳ ಬಗ್ಗೆ ಹೇಳುವುದಾದರೆ, ಈ ಸ್ಕೂಟರ್ ನಲ್ಲಿ ಏಪ್ರನ್ ಮೌಂಟೆಡ್ ಎಲ್‌ಇಡಿ ಡಿ‌ಆರ್‌ಎಲ್, ಹ್ಯಾಲೊಜೆನ್ ಹೆಡ್‌ಲ್ಯಾಂಪ್‌, ಅನಲಾಗ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಈಸಿ-ಸೆಂಟರ್ ಸ್ಟ್ಯಾಂಡ್‌ನಂತಹ ಫೀಚರ್ ಗಳನ್ನು ಅಳವಡಿಸಲಾಗಿದೆ. ಕಂಪನಿಯು ನೀರೋ ಬ್ಲೂ, ಫ್ರಾಸ್ಟೆಡ್ ಬ್ಲಾಕ್, ಪ್ರಿನ್ಸೆಸ್ ಪಿಂಕ್, ರೆವ್ವಿಂಗ್ ರೆಡ್, ಗ್ಲಿಟರಿಂಗ್ ಗೋಲ್ಡ್, ಆಕ್ವಾ ಮ್ಯಾಟ್ ಹಾಗೂ ಕೋರಲ್ ಮ್ಯಾಟ್ ಎಂಬ ಏಳು ಬಣ್ಣಗಳಲ್ಲಿ ಸ್ಕೂಟಿ ಪೆಪ್ ಪ್ಲಸ್ ಅನ್ನು ಮಾರಾಟ ಮಾಡುತ್ತದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಇನ್ನು ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಸ್ಕೂಟಿ ಜೆಸ್ಟ್ 110 ಮ್ಯಾಟ್ ಸರಣಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 65,366 ಗಳಾದರೆ, ಗ್ಲೋಸಿ ಸರಣಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 66,627 ಗಳಾಗಿದೆ. ಟಿವಿಎಸ್ ಸ್ಕೂಟಿ ಜೆಸ್ಟ್ 110 ಸ್ಕೂಟರ್ ನಲ್ಲಿ ಇಕೋ ಥ್ರಸ್ಟ್ ಫ್ಯೂಯಲ್ ಇಂಜೆಕ್ಷನ್ ಟೆಕ್ನಾಲಜಿ ಹೊಂದಿರುವ ಬಿಎಸ್ 6 ಎಂಜಿನ್ ಅಳವಡಿಸಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

110 ಸಿಸಿ ಏರ್ ಕೂಲ್ಡ್'ನ ಈ ಎಂಜಿನ್ ಗರಿಷ್ಠ 7.81 ಬಿ‌ಹೆಚ್‌ಪಿ ಪವರ್ ಹಾಗೂ 8.8 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರಿನಲ್ಲಿ ಸ್ಕೂಟಿ ಜೆಸ್ಟ್ 110 3 ಡಿ ಲೋಗೋ, ಬೀಜ್ ಇಂಟೀರಿಯರ್ ಪ್ಯಾನಲ್, ಡ್ಯುಯಲ್ ಟೋನ್ ಸೀಟ್, ಎಲ್‌ಇಡಿ ಡಿ‌ಆರ್‌ಎಲ್ ಹಾಗೂ ಅಂಡರ್ ಸೀಟ್ ಸ್ಟೋರೇಜ್ ಲೈಟ್‌ನಂತಹ ಫೀಚರ್ ಗಳನ್ನು ನೀಡಲಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಈ ಸ್ಕೂಟರ್ ಏಪ್ರನ್ ಮೌಂಟೆಡ್ ಸ್ಟೋರೇಜ್ ಕಂಪಾರ್ಟ್‌ಮೆಂಟ್ ಹೊರತುಪಡಿಸಿ 19 ಲೀಟರ್ ಅಂಡರ್ ಸೀಟ್ ಸ್ಟೋರೇಜ್ ಹಾಗೂ ಡ್ಯುಯಲ್ ಲಗೇಜ್ ಹುಕ್‌ಗಳನ್ನು ಸಹ ಹೊಂದಿದೆ. ಟಿವಿಎಸ್ ಮೋಟಾರ್ ಕಂಪನಿಯ ಮಾರಾಟದ ಬಗ್ಗೆ ಹೇಳುವುದಾದರೆ, ಕಂಪನಿಯು ಕಳೆದ ತಿಂಗಳು ಒಟ್ಟು 3,47,156 ಯುನಿಟ್ ವಾಹನಗಳನ್ನು ಮಾರಾಟ ಮಾಡಿದೆ. TVS Motor ಕಂಪನಿಯ ಈ ವರ್ಷದ ಸೆಪ್ಟೆಂಬರ್ ತಿಂಗಳ ಮಾರಾಟ ಪ್ರಮಾಣವು 2020ರ ಸೆಪ್ಟೆಂಬರ್ ತಿಂಗಳ ಮಾರಾಟ ಪ್ರಮಾಣಕ್ಕಿಂತ 6% ನಷ್ಟು ಹೆಚ್ಚಾಗಿದೆ.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

2020ರ ಸೆಪ್ಟೆಂಬರ್ ತಿಂಗಳಿನಲ್ಲಿ TVS Motor ಕಂಪನಿಯು 3,27,692 ಯುನಿಟ್ TVS ವಾಹನಗಳನ್ನು ಮಾರಾಟ ಮಾಡಿತ್ತು. ಹಾಗೆಯೇ ಸೆಪ್ಟೆಂಬರ್‌ ತಿಂಗಳ ಮಾರಾಟ ಪ್ರಮಾಣವು ಆಗಸ್ಟ್ ತಿಂಗಳ ಮಾರಾಟಕ್ಕಿಂತ 19.42% ನಷ್ಟು ಚ್ಚಾಗಿದೆ. ಆಗಸ್ಟ್ ತಿಂಗಳಿನಲ್ಲಿ TVS Motor ಕಂಪನಿಯು 3 ಲಕ್ಷಕ್ಕಿಂತ ಕಡಿಮೆ ಅಂದರೆ 2,90,694 ಯುನಿಟ್ ವಾಹನಗಳನ್ನು ಮಾರಾಟ ಮಾಡಿತ್ತು.

ಮಾರಾಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ TVS Scooty

ಕಳೆದ ತಿಂಗಳು TVS Motor ಮಾರಾಟ ಮಾಡಿರುವ 3,47,156 ಯುನಿಟ್ ವಾಹನಗಳಲ್ಲಿ ‌ದ್ವಿ ಚಕ್ರ ವಾಹನಗಳು ಮಾತ್ರವಲ್ಲದೆ ತ್ರಿಚಕ್ರ ವಾಹನಗಳೂ ಸಹ ಸೇರಿವೆ. ಈ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು TVS ದ್ವಿಚಕ್ರ ವಾಹನಗಳ ಮಾರಾಟದಲ್ಲಿ 58,000 ಕ್ಕಿಂತ ಹೆಚ್ಚು ಏರಿಕೆ ಕಂಡು ಬಂದಿದೆ. ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಕಳೆದ ತಿಂಗಳು TVS ದ್ವಿಚಕ್ರ ವಾಹನಗಳ ದೇಶಿಯ ಮಾರಾಟವು 35.60% ನಷ್ಟು ಹೆಚ್ಚಾಗಿದೆ.

Most Read Articles

Kannada
English summary
Tvs scooty crosses 50 lakh units milestone in sales details
Story first published: Wednesday, October 27, 2021, 11:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X