ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಹೆಚ್ಚುತ್ತಿರುವ ವಾಹನಗಳ ಬಿಡಿಭಾಗಗಳ ಬೆಲೆ ಪರಿಣಾಮ ಹೊಸ ವಾಹನಗಳು ಮತ್ತಷ್ಟು ದುಬಾರಿಯಾಗುತ್ತಿದ್ದು, ಬಹುತೇಕ ಆಟೋ ಉತ್ಪಾದನಾ ಕಂಪನಿಗಳು 2021ರ ಅವಧಿಯಲ್ಲೇ ಎರಡನೇ ಬಾರಿಗೆ ಬೆಲೆ ಹೆಚ್ಚಳ ಘೋಷಿಸಿವೆ.

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ದ್ವಿಚಕ್ರ ವಾಹನಗಳ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್ ಕೂಡಾ ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಶೇ.2ರಿಂದ ಶೇ.3 ರಷ್ಟು ಬೆಲೆ ಹೆಚ್ಚಳ ಮಾಡಿದ್ದು, ಟಿವಿಎಸ್ ಸ್ಕೂಟರ್‌ಗಳಲ್ಲಿ ಬೆಲೆಯಲ್ಲೂ ಸಾಕಷ್ಟು ದುಬಾರಿಯಾಗಿದೆ. ಹಬ್ಬದ ಋುತುವಿನಲ್ಲಿ ಹೊಸ ವಾಹನ ಖರೀದಿಯಲ್ಲಿರುವ ಗ್ರಾಹಕರಿಗೆ ಬೆಲೆ ಹೆಚ್ಚಳವು ಮತ್ತಷ್ಟು ಹೊರೆಯಾಗಲಿದ್ದು, ಟಿವಿಎಸ್ ಸ್ಕೂಟರ್‌ಗಳ ಪರಿಸ್ಕೃತ ದರ ಮಾಹಿತಿಗಳನ್ನು ಇಲ್ಲಿ ತಿಳಿಯೋಣ.

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಕಂಪನಿಯು ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ.540 ಗಳಿಂದ ರೂ. 2,535 ಬೆಲೆ ಹೆಚ್ಚಳ ಮಾಡಿದ್ದು, ಹೊಸ ದರಗಳು ಎಕ್ಸ್‌ಶೋರೂಂ ದರಗಳಿಗೆ ಅನುಗುಣವಾಗಿ ಹೆಚ್ಚಳವಾಗಿವೆ.

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಹೊಸ ದರಪಟ್ಟಿಯಲ್ಲಿ ಟಿವಿಎಸ್ ಕಂಪನಿಯ ಜನಪ್ರಿಯ ಸ್ಕೂಟರ್ ಮಾದರಿಯಾದ ಸ್ಕೂಟಿ ಪೆಪ್ ಪ್ಲಸ್ ಗ್ಲೊಸಿ ಆವೃತ್ತಿಯು ಮ್ಯಾಟೆ ಎಡಿಷನ್‌ನೊಂದಿಗೆ ಮಾರಾಟಗೊಳ್ಳುತ್ತಿದ್ದು, ಹೊಸ ಸ್ಕೂಟರ್ ಬೆಲೆಯಲ್ಲಿ ರೂ.1,623 ರಿಂದ ರೂ. 2,535 ಬೆಲೆ ಏರಿಕೆ ಪಡೆದುಕೊಂಡಿದೆ.

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಬೆಲೆ ಏರಿಕೆಯ ನಂತರ ಸ್ಕೂಟಿ ಪೆಪ್ ಪ್ಲಸ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 56,009 ರಿಂದ ರೂ. 58,759 ಬೆಲೆ ಪಡೆದುಕೊಂಡಿದ್ದು, ಬಿಎಸ್-6 ಆವೃತ್ತಿಯೊಂದಿಗೆ ಸ್ಕೂಟಿ ಪೆಪ್ ಪ್ಲಸ್ ಬೇಡಿಕೆಯಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. 1996ರಿಂದಲೂ ಮಾರುಕಟ್ಟೆಯಲ್ಲಿರುವ ಸ್ಕೂಟಿ ಮಾದರಿಯು ಕಾಲಾನುಸಾರವಾಗಿ ಹಲವಾರು ಬದಲವಾಣೆಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, 87.8 ಸಿಸಿ ಎಂಜಿನ್‌ನೊಂದಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿಯಾಗಿ 45 ರಿಂದ 50 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಟಿವಿಎಸ್ ಮೋಟಾರ್ ಹೊಸ ದರ ಪಟ್ಟಿಯಲ್ಲಿ ಜೂಪಿಟರ್ ಮಾದರಿಯ ಬೆಲೆಯಲ್ಲೂ ಕೂಡಾ ಹೆಚ್ಚಳ ಮಾಡಲಾಗಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 1,235 ರಿಂದ 1,390 ಬೆಲೆ ಹೆಚ್ಚಳ ಪಡೆದುಕೊಂಡಿದೆ.

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ದರ ಹೆಚ್ಚಳ ನಂತರ ಜೂಪಿಟರ್ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 64,437 ರಿಂದ ಟಾಪ್ ಎಂಡ್ ಮಾದರಿಯು ರೂ. 73,707 ಬೆಲೆ ಹೊಂದಿದ್ದು, ಜೂಪಿಟರ್ ಮಾದರಿಯು 109.7ಸಿಸಿ ಎಂಜಿನ್ ಆಯ್ಕೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ಇನ್ನು ಟಿವಿಎಸ್ ಕಂಪನಿಯು ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯ ಬೆಲೆಯಲ್ಲಿ ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ರೂ. 540 ಗಳಿಂದ ರೂ.1,540 ಬೆಲೆ ಹೆಚ್ಚಳ ಮಾಡಲಾಗಿದ್ದು, ಎನ್‌ಟಾರ್ಕ್ 125 ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್, ರೇಸ್ ಎಡಿಷನ್ ಮತ್ತು ಸೂಪರ್ ಸ್ಕ್ವಾಡ್ ಎಡಿಷನ್ ಎನ್ನುವ ನಾಲ್ಕು ವೆರಿಯೆಂಟ್‌ಗಳನ್ನು ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸ್ಕೂಟಿ, ಜೂಪಿಟರ್ ಮತ್ತು ಎನ್‌ಟಾರ್ಕ್ ಸ್ಕೂಟರ್‌ಗಳ ಬೆಲೆ ಹೆಚ್ಚಿಸಿದ ಟಿವಿಎಸ್ ಮೋಟಾರ್

ದರ ಹೆಚ್ಚಳದ ನಂತರ ಎನ್‌ಟಾರ್ಕ್125 ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ. 71,095 ರಿಂದ ಟಾಪ್ ಎಂಡ್ ಮಾದರಿಯು ರೂ. 81,075 ಬೆಲೆ ಹೊಂದಿದ್ದು, ಎನ್‌ಟಾರ್ಕ್ 125 ಮಾದರಿಯಲ್ಲಿ 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿದೆ.

Most Read Articles

Kannada
English summary
TVS Scooty, Jupiter and NTorq 125 Hiked.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X