ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿ ಹೊಂದಿರುವ ಟಿವಿಎಸ್ ಮೋಟಾರ್(TVS Motor) ಕಂಪನಿಯು ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೂ ಗಮನಹರಿಸಿದ್ದು, ಕಂಪನಿಯು ಇವಿ ವಾಹನ ಉತ್ಪಾದನೆಗಾಗಿ ಪ್ರತ್ಯೇಕ ಕಂಪನಿಯೊಂದನ್ನು ತೆರೆಯುವ ಸಿದ್ದತೆಯಲ್ಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಟಿವಿಎಸ್ ಮೋಟಾರ್ ಕಂಪನಿಯು ಸದ್ಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಇವಿ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಇವಿ ವಾಹನಗಳ ಬಿಡುಗಡೆ ಮುನ್ನು ಇವಿ ವಾಹನಗಳಿಗಾಗಿಯೇ ಪ್ರತ್ಯೇಕ ಸಹಭಾಗೀತ್ವ ಕಂಪನಿಯನ್ನು ತೆರೆಯಲು ಮುಂದಾಗಿದ್ದು, ಹೊಸ ಕಂಪನಿಯ ಮೇಲೆ ಟಿವಿಎಸ್ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಐಕ್ಯೂಬ್ ಸ್ಕೂಟರ್ ನಂತರ ಮತ್ತೆ ಯಾವುದೇ ಇವಿ ವಾಹನಗಳನ್ನು ಬಿಡುಗಡೆ ಮಾಡಲು ಮುಂದಾಗದಿರುವ ಟಿವಿಎಸ್ ಕಂಪನಿಯು ಸಹಭಾಗೀತ್ವ ಕಂಪನಿಯ ಬ್ಯಾಡ್ಜ್‌ನೊಂದಿಗೆ ಹೊಸ ಇವಿ ವಾಹನಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಸದ್ಯ ಮಾರುಕಟ್ಟೆಯಲ್ಲಿ ಇಂಧನ ದರ ಹೆಚ್ಚುತ್ತಿರುವ ಪರಿಣಾಮ ಇವಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಹರಿದುಬರುತ್ತಿರುವುದರಿಂದ ವಿವಿಧ ಮಾದರಿಯ ಇವಿ ವಾಹನಗಳನ್ನು ಸಿದ್ದಪಡಿಸುತ್ತಿರುವ ಟಿವಿಎಸ್ ಕಂಪನಿಯು ಸಹಭಾಗೀತ್ವ ಕಂಪನಿಯ ಬ್ಯಾಡ್ಜ್‌ನೊಂದಿಗೆ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಜೊತೆಗೆ ಅತಿ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿರುವ ಇಂಧನ ಚಾಲಿತ ವಾಹನಗಳನ್ನು ತಗ್ಗಿಸಿ ಪರಿಸರ ಸ್ನೇಹಿಯಾಗಿರುವ ಎಲೆಕ್ಟ್ರಿಕ್ ವಾಹನಗಳತ್ತ ಸೆಳೆಯಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆಯಡಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿಗಳಿಗೆ ಮತ್ತು ಖರೀದಿ ಮಾಡುವ ಗ್ರಾಹಕರಿಗೆ ಗರಿಷ್ಠ ಧನಸಹಾಯ ಒದಗಿಸುತ್ತಿದ್ದು, ಫೇಮ್ 2 ಯೋಜನೆಯ ಸಬ್ಸಡಿ ಜೊತೆಗೆ ವಿವಿಧ ರಾಜ್ಯ ಸರ್ಕಾರಗಳು ಸಹ ತಮ್ಮ ರಾಜ್ಯಗಳಲ್ಲಿ ಕೆಲವು ವಿನಾಯ್ತಿಗಳನ್ನು ನೀಡುತ್ತಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಫೇಮ್ 2 ಸಬ್ಸಡಿ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಜಿಎಸ್‌ಟಿ ವಿನಾಯ್ತಿ, ಗರಿಷ್ಠ ಸಬ್ಸಡಿ ಮತ್ತು ತೆರಿಗೆ ವಿನಾಯ್ತಿಗಳನ್ನು ನೀಡಲಾಗುತ್ತಿದ್ದು, ವಾಹನ ಉತ್ಪಾದನಾ ಕಂಪನಿಗಳಿಗೂ ಹಲವಾರು ಪ್ರೋತ್ಸಾಹ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರದ ಫೇಮ್ 2 ಹೊರತುಪಡಿಸಿ ರಾಜ್ಯಗಳ ಮಟ್ಟದಲ್ಲಿ ದೆಹಲಿ ಸರ್ಕಾರವು ಹೆಚ್ಚಿನ ಮಟ್ಟದ ಪ್ರೊತ್ಸಾಹ ನೀಡುತ್ತಿದ್ದು, ತದನಂತರ ವಿವಿಧ ಸರ್ಕಾರವು ಸಹ ರಾಜ್ಯ ಮಟ್ಟದಲ್ಲಿ ಹೊಸ ಇವಿ ನೀತಿ ಅಳವಡಿಸಿಕೊಳ್ಳುತ್ತಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಹೀಗಾಗಿ ಸಬ್ಸಡಿ ಯೋಜನೆಗಳೊಂದಿಗೆ ಇವಿ ವಾಹನ ಮಾರಾಟದಲ್ಲಿ ಮುಂಚೂಣಿ ಸಾಧಿಸಲು ಮುಂದಾಗುತ್ತಿರುವ ವಿವಿಧ ಆಟೋ ಕಂಪನಿಗಳು ಮುಂದಿನ ಎರಡು ವರ್ಷಗಳಲ್ಲಿ ಹಲವು ಹೊಸ ವಾಹನಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿವೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಇನ್ನು ಟಿವಿಎಸ್ ಕಂಪನಿಯು ಭಾರತದ ಅತಿ ದೊಡ್ಡ ಸಮಗ್ರ ವಿದ್ಯುತ್ ಕಂಪನಿಗಳಲ್ಲಿ ಒಂದಾದ ಟಾಟಾ ಪವರ್ ಜೊತೆ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು, ಇವಿ ವಾಹನಗಳಿಗೆ ಪೂರಕವಾಗಿ ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಭಾರತದಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಇದರಿಂದ ಭಾರತದ ರಸ್ತೆಗಳಲ್ಲಿ ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಕಾಣಬಹುದು. ಹಸಿರು ನಂಬರ್ ಪ್ಲೇಟ್ ಹೊಂದಿರುವ ಎಲೆಕ್ಟ್ರಿಕ್ ವಾಹನಗಳು ಸೈಲೆನ್ಸರ್ ಶಬ್ದವಿಲ್ಲದೆ ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವೆ. ಎಲೆಕ್ಟ್ರಿಕ್ ವಾಹನಗಳಿಂಗೆ ಹಲವಾರು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಎಲೆಕ್ಟ್ರಿಕ್ ವಾಹನಗಳು ಯಾವುದೇ ಮಾಲಿನ್ಯವನ್ನುಂಟು ಮಾಡುವುದಿಲ್ಲ. ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಕಚ್ಚಾ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ನಿರ್ವಹಣಾ ವೆಚ್ಚ ಕಡಿಮೆ. ಆದರೂ ಕೆಲವರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಇದಕ್ಕೆ ಪ್ರಮುಖ ಕಾರಣ ಮೂಲಭೂತ ಸೌಕರ್ಯಗಳ ಕೊರತೆ. ದೇಶದಲ್ಲಿ ಪೆಟ್ರೋಲ್ ಬಂಕ್ ಗಳು ಇರುವಷ್ಟು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿಲ್ಲ. ದೊಡ್ಡ ದೊಡ್ಡ ನಗರಗಳಲ್ಲೂ ಸಹ ಸಾಕಷ್ಟು ಸಂಖ್ಯೆಯಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳಿಲ್ಲ. ಕೆಲವೇ ಕೆಲವು ನಗರಗಳಲ್ಲಿ ಮಾತ್ರ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ಕಾಣಬಹುದು. ಅದೂ ಸಹ ಕಡಿಮೆ ಸಂಖ್ಯೆಯಲ್ಲಿ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಈ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆ ಹರಿಸಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ವಿಶೇಷ ಕ್ರಮಗಳನ್ನು ಕೈಗೊಳ್ಳುತ್ತಿವೆ. ಈ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಟಿವಿಎಸ್ ಹಾಗೂ ಟಾಟಾ ಕಂಪನಿಗಳು ಸಹ ಭಾಗಿತ್ವವನ್ನು ಮಾಡಿಕೊಂಡಿವೆ. ಈ ಎರಡು ಕಂಪನಿಗಳ ಸಹ ಭಾಗಿತ್ವದ ಅಡಿಯಲ್ಲಿ, ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ಎಲೆಕ್ಟ್ರಿಕ್ ವಾಹನಗಳಿಗಾಗಿ ಪ್ರತ್ಯೇಕ ಕಂಪನಿ ತೆರೆಯಲು ಮುಂದಾದ TVS Motor

ಎಲೆಕ್ಟ್ರಿಕ್ ವಾಹನ ಬಳಕೆದಾರರನ್ನು ಉತ್ತೇಜಿಸುವ ಸಲುವಾಗಿ ಈ ಎರಡು ಕಂಪನಿಗಳು ಈ ಕ್ರಮಕ್ಕೆ ಮುಂದಾಗಿವೆ. ಇದರ ಜೊತೆಗೆ ಟಿವಿಎಸ್ ಕಾರ್ಯ ನಿರ್ವಹಿಸುವ ಪ್ರದೇಶಗಳಲ್ಲಿ ಸೌರ ವಿದ್ಯುತ್ ತಂತ್ರಜ್ಞಾನಗಳನ್ನು ನಿರ್ಮಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಈ ಸಹಭಾಗಿತ್ವವು ಹೊಂದಿದೆ.

Most Read Articles

Kannada
English summary
Tvs will start new subsidiary dedicated to e mobility
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X