ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಟಿವಿಎಸ್ ಮೋಟಾರ್ ಕಂಪನಿಯ ಎಕ್ಸ್‌ಎಲ್ ಮೊಪೆಡ್ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಮೊಪೆಡ್ ಅನ್ನು ಬಹುತೇಕ ಸಾಮಗ್ರಿಗಳನ್ನು ಸಾಗಿಸುವ ಸಲುವಾಗಿ ಬಳಸಲಾಗುತ್ತದೆ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಇನ್ನು ಹಾರ್ಲೆ-ಡೇವಿಡ್ಸನ್ ಕಂಪನಿಯ ಬೈಕುಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿವೆ. ಅವುಗಳಲ್ಲಿ 48 ಬೈಕ್‌ ಸಹ ಸೇರಿದೆ. ಹಾರ್ಲೆ-ಡೇವಿಡ್ಸನ್ ಕಂಪನಿಯ ಬೈಕುಗಳು ದುಬಾರಿ ಬೆಲೆಯನ್ನು ಹೊಂದಿವೆ. ಈ ಲೇಖನದಲ್ಲಿ ಹಾರ್ಲೆ-ಡೇವಿಡ್ಸನ್ 48 ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಬಗೆಗಿನ ವಿವರಗಳನ್ನು ನೋಡೋಣ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಸುಡಸ್ ಕಸ್ಟಮ್ಸ್ ವಾಹನಗಳನ್ನು ಮಾಡಿಫೈಗೊಳಿಸುವುದಕ್ಕೆ ಹೆಸರು ವಾಸಿಯಾಗಿದೆ. ಸುಡಸ್ ಕಸ್ಟಮ್ಸ್ ಹಲವಾರು ಜೀಪ್ ಹಾಗೂ ಫೋಕ್ಸ್ ವ್ಯಾಗನ್ ಕಾರುಗಳನ್ನು ಮಾಡಿಫೈ ಮಾಡಿದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಈಗ ಸುಡಸ್ ಕಸ್ಟಮ್ಸ್, ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಅನ್ನು ಹಾರ್ಲೆ-ಡೇವಿಡ್ಸನ್ 48 ಬೈಕಿನಂತೆ ಮಾಡಿಫೈಗೊಳಿಸಿದೆ. ಮಾಡಿಫೈಗೊಳಿಸದ ವೀಡಿಯೊವನ್ನು ಸುಡಸ್ ಕಸ್ಟಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಹಾರ್ಲೆ-ಡೇವಿಡ್ಸನ್ 48 ಬೈಕಿನಂತೆ ಮಾಡಿಫೈಗೊಂಡಿರುವ ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಗಾತ್ರದಲ್ಲಿ ಚಿಕ್ಕದಾಗಿದೆ. ಈ ಎಕ್ಸ್‌ಎಲ್ ಮೊಪೆಡ್'ನಲ್ಲಿ ಅಳವಡಿಸಿರುವ ಬಹುತೇಕ ಭಾಗಗಳನ್ನು ಕೈಯಿಂದ ತಯಾರಿಸಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಯಾವುದೇ ಯಂತ್ರದ ಸಹಾಯವಿಲ್ಲದೆ ವಿನ್ಯಾಸಗೊಂಡು ಅಳವಡಿಸಲಾಗಿರುವ ಹಳದಿ ಪೆಟ್ರೋಲ್ ಟ್ಯಾಂಕ್ ಹಾರ್ಲೆ-ಡೇವಿಡ್ಸನ್ 48 ಬೈಕ್ ಅನ್ನು ನೆನಪಿಸುತ್ತದೆ. ಪೆಟ್ರೋಲ್ ಟ್ಯಾಂಕ್ ಅನ್ನು ಡಿಸ್ಅಸೆಂಬಲ್ ಮಾಡಿ, ಮತ್ತೆ ಸುಲಭವಾಗಿ ಜೋಡಿಸಬಹುದು ಎಂದು ವೀಡಿಯೊದಲ್ಲಿ ಹೇಳಲಾಗಿದೆ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಈ ಬೈಕಿನ ಎರಡೂ ಬದಿಗಳಲ್ಲಿ ಸೈಡ್ ಬಾಕ್ಸ್ ಅಳವಡಿಸಲಾಗಿದೆ. ಇವುಗಳನ್ನು ಸಹ ಕಸ್ಟಮೈಸ್ ಮಾಡಲಾಗಿದೆ. ಇದರ ಜೊತೆಗೆ ಕಸ್ಟಮ್ ರೇರ್ ಫೆಂಡರ್ ಹಾಗೂ ಫ್ರಂಟ್ ಮಡ್‌ಗಾರ್ಡ್'ಗಳನ್ನು ಸಹ ಮಾಡಿಫೈಗೊಳಿಸಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಮಾಡಿಫೈಗೊಂಡಿರುವ ಈ ಬೈಕಿನಲ್ಲಿ ಒಬ್ಬರು ಮಾತ್ರ ಕುಳಿತುಕೊಳ್ಳಬಹುದು. ಈ ಕಾರಣಕ್ಕೆ ಟಿವಿಎಸ್ ಎಕ್ಸ್‌ಎಲ್ ಮೊಪೆಡ್'ನಲ್ಲಿದ್ದ ಹಿಂಬದಿಯ ಸೀಟನ್ನು ತೆಗೆದುಹಾಕಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೈಕಿನ ಎಂಜಿನ್ ಭಾಗವು ಆಸಕ್ತಿದಾಯಕವಾಗಿದೆ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಟಿವಿಎಸ್ ಎಕ್ಸ್‌ಎಲ್ ಮೊಪೆಡ್'ಗೆ ಅಳವಡಿಸಲಾಗಿರುವ ಎಂಜಿನ್ ಫೈಬರ್ ಹೊದಿಕೆಯನ್ನು ಹೊಂದಿದೆ. ಹಾರ್ಲೆ-ಡೇವಿಡ್ಸನ್ ಬೈಕ್‌ಗಳಂತೆ ಈ ಮಾಡಿಫೈಗೊಂಡ ಬೈಕಿನ ಎಂಜಿನ್ ಭಾಗಕ್ಕೆ ವಿ ಡ್ಯುಯಲ್ ಶೇಪ್ ನೀಡಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಈ ಶೇಪ್ ಈ ಬೈಕಿಗೆ ಆಕರ್ಷಕ ಲುಕ್ ನೀಡುತ್ತದೆ. ಮಾಡಿಫೈಗೊಂಡ ಎಕ್ಸ್‌ಎಲ್ ಮೊಪೆಡ್'ನಲ್ಲಿ ಎರಡು ಎಕ್ಸಾಸ್ಟ್ ಹೊಸ್'ಗಳನ್ನು ನೀಡಲಾಗಿದೆ. ಇದು ಹಾರ್ಲೆ-ಡೇವಿಡ್ಸನ್ ಬೈಕಿನ ಸ್ಪರ್ಶವನ್ನು ಸಹ ಹೊಂದಿದೆ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಈ ಎರಡು ಎಕ್ಸಾಸ್ಟ್ ಹೊಸ್'ಗಳಲ್ಲಿ ಒಂದು ಮಾತ್ರ ಕಾರ್ಯನಿರ್ವಹಿಸುತ್ತದೆ. ಇನ್ನೊಂದು ಡಮ್ಮಿಯಾಗಿದೆ. ಟಿವಿಎಸ್ 100 ಬೈಕ್‌ಗಳಲ್ಲಿ ನೀಡಲಾಗುವ ಸಿಂಗಲ್ ಪ್ಯಾಡ್ ಅನಲಾಗ್ ಇನ್ಸ್'ಟ್ರೂಮೆಂಟ್ ಕ್ಲಸ್ಟರ್ ಅನ್ನು ಈ ಬೈಕಿನಲ್ಲಿ ರೆಟ್ರೊ ಲುಕ್'ಗಾಗಿ ನೀಡಲಾಗಿದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಈ ಬೈಕಿನ ಹಿಂಭಾಗದಲ್ಲಿ ಸದ್ಯಕ್ಕೆ ಯಾವುದೇ ಸ್ಟಾಪ್ ಲೈಟ್ ನೀಡಲಾಗಿಲ್ಲ. ಶೀಘ್ರದಲ್ಲಿಯೇ ಈ ಬೈಕಿನಲ್ಲಿ ಸ್ಟಾಪ್ ಲೈಟ್ ಅಳವಡಿಸಲಾಗುವುದು ಎಂದು ವೀಡಿಯೊದಲ್ಲಿ ಹೇಳಲಾಗಿದೆ.

ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಂಡ ಟಿವಿಎಸ್ ಎಕ್ಸ್‌ಎಲ್

ಟಿವಿಎಸ್ ಎಕ್ಸ್‌ಎಲ್ ಮೊಪೆಡ್ ಅನ್ನು ಹಾರ್ಲೆ-ಡೇವಿಡ್ಸನ್ ಬೈಕಿನಂತೆ ಮಾಡಿಫೈಗೊಳಿಸಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ ಈ ಮೊಪೆಡ್ ಅನ್ನು ಮಾಡಿಫೈಗೊಳಿಸಲು ಎಷ್ಟು ಖರ್ಚು ಮಾಡಲಾಗಿದೆ ಎಂಬುದನ್ನು ಮೊಪೆಡ್ ಮಾಲೀಕರು ಬಹಿರಂಗಪಡಿಸಿಲ್ಲ.

ಚಿತ್ರ ಕೃಪೆ: ಸುಡಸ್ ಕಸ್ಟಮ್ಸ್

Most Read Articles

Kannada
English summary
TVS XL moped modified like Harley Davidson 48 bike. Read in Kannada.
Story first published: Saturday, May 8, 2021, 19:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X