Just In
- 10 hrs ago ಜಿಮ್ನಿಗೆ ಸೆಡ್ಡು ಹೊಡೆಯಲು ಎಂಜಿ ಮಾಸ್ಟರ್ ಪ್ಲಾನ್: ಸದ್ಯದಲ್ಲೇ ಕಾಮೆಟ್ ಆಧರಿಸಿ 5 ಡೋರ್ ಕಾರು ಭಾರತಕ್ಕೆ?
- 10 hrs ago KWID: ಜನಪ್ರಿಯ ರೆನಾಲ್ಟ್ ಕ್ವಿಡ್ ಕಾರು ಖರೀದಿಸಬೇಕೇ.. ಆನ್ - ರೋಡ್ ಬೆಲೆ ಏನು, EMI ಎಷ್ಟು?
- 11 hrs ago Citroen Basalt Vision: ಸಿಟ್ರನ್ ಹೊಸ ಕಾಂಪ್ಯಾಕ್ಟ್ ಎಸ್ಯುವಿ ಅನಾವರಣ... ಬಿಡುಗಡೆಗೆ ಸಜ್ಜು!
- 12 hrs ago ತಂದೆಯ ಪ್ರೀತಿ: ಮಗಳಿಗೆ ರೂ.2.44 ಕೋಟಿ ಬೆಲೆಯ ಮರ್ಸಿಡಿಸ್ ಕಾರು ಗಿಫ್ಟ್ ನೀಡಿದ ಬಿಜೆಪಿ ಲೀಡರ್
Don't Miss!
- Sports SRH vs MI IPL Match: ಹೈಲೈಟ್ಸ್ ನಂತೆ ಕಂಡ ಲೈವ್ ಮ್ಯಾಚ್: ಮುತ್ತಿನ ನಗರಿಯಲ್ಲಿ ಆರ್ಭಟಿಸಿ ಇತಿಹಾಸದ ಪುಟ ಸೇರಿದ SRH
- Lifestyle ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- News Chitradurga Lok Sabha Constituency: ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ರಾಜಕೀಯ ಹಿನ್ನೆಲೆ ತಿಳಿಯಿರಿ-ಮಾಹಿತಿ, ವಿವರ
- Movies ಪುಷ್ಪ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿರುತೆರೆ ನಟಿ ಅಮೂಲ್ಯ ಬೋಲ್ಡ್ ಫೋಟೋಶೂಟ್ ಹೇಗಿದೆ ನೋಡಿ!
- Finance ಐಟಿಆರ್ ಸಲ್ಲಿಸಿದ್ದರೂ, ಆದಾಯ ತೆರಿಗೆ ಇಲಾಖೆಯಿಂದ ನಿಮಗೆ ಇಮೇಲ್ ಬಂದಿದೆಯೇ?
- Technology ರೆಡ್ಮಿಯ ಈ ಮೊಬೈಲ್ಗೆ ಇರುವ ಬಿಗ್ ಆಫರ್ ತಿಳಿದ್ರೆ, ಖಂಡಿತಾ ವಾವ್ ಅಂತೀರಾ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಗಸ್ಟ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ದ್ವಿಚಕ್ರ ವಾಹನಗಳಿವು
ಇನ್ನೆರಡು ದಿನದಲ್ಲಿ 2021ರ ಜುಲೈ ತಿಂಗಳು ಕೊನೆಯಾಗಲಿದೆ. ಈ ತಿಂಗಳು ಹಲವು ವಾಹನ ತಯಾರಕ ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ವಾಹನಗಳನ್ನು ಬಿಡುಗಡೆಗೊಳಿಸಿವೆ.
ಆಗಸ್ಟ್ ತಿಂಗಳಿನಲ್ಲಿಯೂ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿವೆ. ಆಗಸ್ಟ್ ತಿಂಗಳಿನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ದ್ವಿಚಕ್ರ ವಾಹನಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
1. ಓಲಾ ಎಲೆಕ್ಟ್ರಿಕ್ ಸ್ಕೂಟರ್
ಆಗಸ್ಟ್ ತಿಂಗಳಿನಲ್ಲಿ ಓಲಾ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಆದರೆ ಓಲಾ ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ.
ಕಂಪನಿಯು ಕೆಲವು ದಿನಗಳ ಹಿಂದಷ್ಟೇ ತನ್ನ ಎಲೆಕ್ಟ್ರಿಕ್ ಸ್ಕೂಟರಿನ ಬುಕ್ಕಿಂಗ್'ಗಳನ್ನು ಆರಂಭಿಸಿದೆ. ಬುಕ್ಕಿಂಗ್ ಆರಂಭವಾದ 24 ಗಂಟೆಗಳಲ್ಲಿಯೇ 1 ಲಕ್ಷ ಯುನಿಟ್ ಬುಕ್ಕಿಂಗ್'ಗಳನ್ನು ಸ್ವೀಕರಿಸಿರುವುದಾಗಿ ಕಂಪನಿ ಹೇಳಿದೆ.
2. ಬಿಎಂಡಬ್ಲ್ಯು ಸಿ 400 ಜಿಟಿ
ಬಿಎಂಡಬ್ಲ್ಯು ಮೊಟೊರಾಡ್ ತನ್ನ ಹೊಸ ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರ್ ಅನ್ನು 2021 ರ ಆಗಸ್ಟ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.
ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಈ ಮ್ಯಾಕ್ಸಿ ಸ್ಕೂಟರಿನ ಟೀಸರ್ ಅನ್ನು ಬಿಡುಗಡೆಗೊಳಿಸಿತ್ತು. ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 5 ಲಕ್ಷಗಳಾಗುವ ಸಾಧ್ಯತೆಗಳಿವೆ.
3. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350
ರೆಟ್ರೊ-ಮಾಡರ್ನ್ ಬೈಕ್ ತಯಾರಕ ಕಂಪನಿಯಾದ ರಾಯಲ್ ಎನ್ಫೀಲ್ಡ್ ಆಗಸ್ಟ್ ತಿಂಗಳಿನಲ್ಲಿ ತನ್ನ ಅತ್ಯಂತ ಜನಪ್ರಿಯ ಕ್ಲಾಸಿಕ್ 350 ಬೈಕಿನ ಹೊಸ ತಲೆಮಾರಿನ ಮಾದರಿಯನ್ನು ಬಿಡುಗಡೆಗೊಳಿಸಬಹುದು ಎಂದು ಹೇಳಲಾಗಿದೆ.
ಈ ಬೈಕ್ ಅನ್ನು ಹಲವು ಬಾರಿ ಭಾರತದ ರಸ್ತೆಗಳಲ್ಲಿ ಪರೀಕ್ಷಿಸಲಾಗಿದೆ. ಹೊಸ ಮಾದರಿಯ ಈ ಬೈಕ್ ಹೊಸ ಎಂಜಿನ್, ಫ್ರೇಮ್, ಫೀಚರ್ ಹಾಗೂ ತಂತ್ರಜ್ಞಾನಗಳನ್ನು ಹೊಂದಿರಲಿದೆ.
4. ಸಿಂಪಲ್ ಒನ್
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 15 ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರಿನ ಫೀಚರ್ ಹಾಗೂ ವಿಶೇಷತೆಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ.
ಈ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಎಥರ್ 450 ಎಕ್ಸ್, ಟಿವಿಎಸ್ ಐಕ್ಯೂಬ್ ಹಾಗೂ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಪೈಪೋಟಿ ನೀಡಲಿದೆ.
5. ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಸಿಗ್ನಲ್ಸ್
ರಾಯಲ್ ಎನ್ಫೀಲ್ಡ್ ಕಂಪನಿಯು ಕ್ಲಾಸಿಕ್ 350 ಬೈಕಿನ ಹೊರತಾಗಿ ತನ್ನ ಹೊಸ ಕ್ಲಾಸಿಕ್ 350 ಸಿಗ್ನಲ್ಸ್ ಬೈಕ್ ಅನ್ನು ಸಹ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.
ರಾಯಲ್ ಎನ್ಫೀಲ್ಡ್ ಕ್ಲಾಸಿಕ್ ಸಿಗ್ನಲ್ಸ್ ಬೈಕ್ ಅನ್ನು ಹಲವು ಬಾರಿ ಭಾರತದ ರಸ್ತೆಗಳಲ್ಲಿ ಪರೀಕ್ಷಿಸಲಾಗಿದೆ. ಈ ಬೈಕ್ ಬಗ್ಗೆ ರಾಯಲ್ ಎನ್ಫೀಲ್ಡ್ ಕಂಪನಿಯು ಸದ್ಯಕ್ಕೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
6. ಹೋಂಡಾ ಹಾರ್ನೆಟ್ 2.0 ಅಡ್ವೆಂಚರ್
ಹೋಂಡಾ ಇಂಡಿಯಾ ತನ್ನ ಹಾರ್ನೆಟ್ 2.0 ಆಧಾರಿತ ಅಡ್ವೆಂಚರ್ ಬೈಕ್ ಅನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ಈ ಬೈಕ್ ಅನ್ನು ಹೋಂಡಾ ರೆಡ್ವಿಂಗ್ ಲೈನ್ ಮೂಲಕ ಮಾರಾಟ ಮಾಡಲಾಗುವುದು. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.20 ಲಕ್ಷಗಳಿಂದ ರೂ. 1.50 ಲಕ್ಷಗಳಾಗುವ ಸಾಧ್ಯತೆಗಳಿವೆ.