ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ದ್ವಿಚಕ್ರ ತಯಾರಕ ಕಂಪನಿಯಾದ ವೆಸ್ಪಾ ಲಿಮಿಟೆಡ್ ಎಡಿಷನ್ ಮಾದರಿಯಾದ ಜಿಟಿಎಸ್ ಸೂಪರ್ ಸ್ವಿಸ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ, ಈ ಹೊಸ ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್ ಮಾದರಿಯು ಕೇವಲ 300 ಯುನಿಟ್ ಗಳಿಗೆ ಸಿಮೀತಗೊಳಿಸಿ ಮಾರಾಟಗೊಳಿಸಲಾಗುತ್ತದೆ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ಹೆಸರೇ ಸೂಚಿಸುವಂತೆ, ಜಿಟಿಎಸ್ ಸೂಪರ್ ಸ್ವಿಸ್ ಸ್ವಿಟ್ಜರ್‌ಲೆಂಡ್ ಮೂಲಕ ಅಧಿಕೃತ ವೆಸ್ಪಾ ಡೀಲರುಗಳ ಮೂಲಕ ಮಾತ್ರ ಲಭ್ಯವಿರುತ್ತದೆ. ಈ ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್ 125 ಸಿಸಿ ಮತ್ತು 300 ಸಿಸಿ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಹೊಸ ಕಾಸ್ಮೆಟಿಕ್ ಅಪ್ಡೇಟ್ ಗಳನ್ನು ಪಡೆದುಕೊಂಡಿದೆ. ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ಗ್ರಿಜಿಯೊ ಮೆಟೀರಿಯಾ ಎಂದು ಕರೆಯಲ್ಪಡುವ ಬಣ್ಣ ಆಯ್ಕೆಯು ಜಿಟಿಎಸ್ ಸೂಪರ್ ಸ್ವಿಸ್ ಆವೃತ್ತಿಯಲ್ಲಿ ಲಭ್ಯವಿರುತ್ತದೆ, ಪ್ರತಿಯೊಂದು ಲಿಮಿಟೆಡ್ ಎಡಿಷನ್ ಸ್ಕೂಟರ್‌ಗಳು ವಿಶೇಷವಾಗಿ ಸಂಖ್ಯೆಯ ಅಲ್ಯೂಮಿನಿಯಂ ಪ್ಲೇಕ್‌ನೊಂದಿಗೆ ಬರಲಿದ್ದು, ಸೀರಿಸ್ ಉತ್ಪಾದನಾ ಸಂಖ್ಯೆಯನ್ನು 1 ರಿಂದ 300 ರವರೆಗೆ ವಿವರಿಸುತ್ತದೆ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ಜಿಟಿಎಸ್‌ನ ವೈಯಕ್ತಿಕ ಸಂಖ್ಯೆ ಸೂಪರ್ "ಸ್ವಿಸ್ ಎಡಿಷನ್" ಉತ್ತಮ ಸಂಗ್ರಹ ವಸ್ತುವನ್ನಾಗಿ ಮಾಡುತ್ತದ. ಈ ಲಿಮಿಟೆಡ್ ಎಡಿಷನ್ ಹಳೆಯ ಐಕಾನಿಕ್ ಮಾದರಿಗಳನ್ನು ನೆನಪಿಸುವಂತ ವಿನ್ಯಾಸವನ್ನು ಹೊಂದಿದೆ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ಯುರೋಪಿನಲ್ಲಿ ಲಭ್ಯವಿರುವ ವೆಸ್ಪಾ ಸ್ಕೂಟರ್‌ಗಳು ಅದೇ 125 ಸಿಸಿ ಮತ್ತು 300 ಸಿಸಿ ಎಂಜಿನ್ ಆಯ್ಕೆಗಳನ್ನು ಹೊಂದಿರುತ್ತದೆ. ಇದರಿಂದ 125 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 14 ಬಿಹೆಚ್‌ಪಿ ಪವರ್ ಉತ್ಪಾದಿಸಿದರೆ, 300 ಸಿಸಿ ಎಂಜಿನ್ 23.8 ಬಿಹೆಚ್‌ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್ ನಲ್ಲಿ 12 ಇಂಚಿನ ಟೈರ್‌ಗಳು, ಎಬಿಎಸ್, ಎಲ್‌ಇಡಿ ಲ್ಯಾಂಪ್ ಗಳು ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ಹೊಂದಿದೆ. ಮೀಸಲಾದ ಮೊಬೈಲ್ ಅಪ್ಲಿಕೇಶನ್‌ಗಿಂತ ಕೀ-ಮೌಂಟೆಡ್ ರಿಮೋಟ್ ಕಂಟ್ರೋಲ್‌ನೊಂದಿಗೆ ಕಾರ್ಯನಿರ್ವಹಿಸುವ ಬೈಕು ಫೈಂಡರ್ ಅನ್ನು ಸಹ ನೀಡಲಾಗುತ್ತದೆ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ಇನ್ನು ವೆಸ್ಪಾ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಯಶಸ್ವಿ 75 ವರ್ಷಗಳನ್ನು ಪೂರೈಸಿದೆ. ಕಂಪನಿಯು ಇದುವರೆಗೆ ಬರೊಬ್ಬರಿ 19 ಮಿಲಿಯನ್(1.90 ಕೋಟಿ) ಸ್ಕೂಟರ್‌ಗಳ ಉತ್ಪಾದನಾ ಗುರಿತಲುಪಿದೆ.

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

1946ರಲ್ಲಿ ಇಟಾಲಿಯ ಪ್ಯಾಂಟೆಡೊರಾ ಎನ್ನುವಲ್ಲಿ ಮೊದಲ ಸ್ಕೂಟರ್ ನಿರ್ಮಾಣದೊಂದಿಗೆ ಜಾಗತಿಕ ಆಟೋ ಉದ್ಯಮಕ್ಕೆ ಅಧಿಕೃತವಾಗಿ ಪ್ರವೇಶಿಸಿದ ವೆಸ್ಪಾ ಕಂಪನಿಯು ಸದ್ಯ ಭಾರತ ಸೇರಿದಂತೆ ವಿಶ್ವದ ಪ್ರಮುಖ 83 ರಾಷ್ಟ್ರಗಳಲ್ಲಿ ಮಾರಾಟ ಜಾಲ ಹೊಂದಿದೆ,

ಅನಾವರಣವಾಯ್ತು ವೆಸ್ಪಾ ಜಿಟಿಎಸ್ ಸೂಪರ್ ಸ್ವಿಸ್ ಲಿಮಿಟೆಡ್ ಎಡಿಷನ್

ಸ್ವಿಸ್ ಮಾರುಕಟ್ಟೆಗೆ ಪ್ರತ್ಯೇಕವಾಗಿ ತಯಾರಾದ ಒಂದು ಮಾದರಿಯಾಗಿದೆ, ಇದ್ದರಿಂದ ಭಾರತದಲ್ಲಿ ಈ ಮಾದರಿಯನ್ನು ಪರಿಚಯಿಸುವ ಸಾಧ್ಯತೆಗಳಿಲ್ಲ. ಪಿಯಾಜಿಯೊ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ವೆಸ್ಪಾ ಸ್ಕೂಟರ್‌ಗಳಲ್ಲಿ 125 ಸಿಸಿ ಎಂಜಿನ್ ಆಯ್ಕೆಯನ್ನು ಮಾತ್ರ ನೀಡುತ್ತಿದೆ.

Most Read Articles

Kannada
Read more on ವೆಸ್ಪಾ vespa
English summary
Vespa GTS Super Swiss Limited Edition Unveiled. Read In Kannada.
Story first published: Tuesday, July 13, 2021, 20:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X