150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ದುಬಾರಿ ಇಂಧನ ದರ ಮತ್ತು ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳಿಗೆ ಜಾರಿಗೆ ತಂದಿದ್ದು, ಹೊಸ ಯೋಜನೆಗಳ ಪರಿಣಾಮ ಇವಿ ವಾಹನ ಮಾರಾಟದಲ್ಲಿ ಸಾಕಷ್ಟು ಏರಿಕೆಯಾಗಿದೆ.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಹೆಚ್ಚುತ್ತಿರುವ ಇಂಧನಗಳ ಬೆಲೆ ಮತ್ತು ಮಾಲಿನ್ಯವನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳುವ ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹ ಯೋಜನೆಗಳಿಂದ ಹಲವಾರು ಸ್ಟಾರ್ಟ್ ಕಂಪನಿಗಳು ಇವಿ ವಾಹನ ಉದ್ಯಮ ಪ್ರವೇಶಿಸುತ್ತಿದ್ದು, ಗುಜರಾತ್ ಮೂಲದ ವೈಟ್ ಕಾರ್ಬನ್ ಮೋಟಾರ್ಸ್ ಕಂಪನಿಯು ಹೊಸ ಇವಿ ಸ್ಕೂಟರ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಕಾರ್ಬನ್ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಬ್ಯಾಟರಿ ಪ್ಯಾಕ್ ಹೊಂದಿರುವ ಜಿಟಿ5 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಅಹಮದಾಬಾದ್ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.15 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 1.30 ಲಕ್ಷ ಬೆಲೆ ಹೊಂದಿದೆ.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಗ್ರಾಹಕರ ಬೇಡಿಕೆಯೆಂತೆ ಎರಡು ಮಾದರಿಯ ಬ್ಯಾಟರಿ ಪ್ಯಾಕ್ ಹೊಂದಿರುವ ಜಿಟಿ5 ಮಾದರಿಯು 3kW ಬಾಷ್ ಬಿಎಲ್‌ಡಿಸಿ ರಿಯರ್ ಮೌಟೆಂಡ್ ಎಲೆಕ್ಟ್ರಿಕ್ ಮೋಟಾರ್ ಪ್ರೇರಿತ 1.8kWh ಮತ್ತು 2.4kWh ಬ್ಯಾಟರಿ ಪ್ಯಾಕ್ ಹೊಂದಿದೆ.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಜಿಟಿ5 1.8kWh ಬ್ಯಾಟರಿ ಪ್ಯಾಕ್ ಹೊಂದಿರುವ ಮಾದರಿಯು ಪ್ರತಿ ಚಾರ್ಜ್‌ಗೆ 100ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ 2.4kWh ಬ್ಯಾಟರಿ ಪ್ಯಾಕ್ ಹೊಂದಿರುವ ಜಿಟಿ5 ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹೊಸ ಸ್ಕೂಟರ್ ಮಾದರಿಯು ಕೇವಲ 8 ಸೆಕೆಂಡುಗಳಲ್ಲಿ 50 ಕಿ.ಮೀ ಟಾಪ್ ಸ್ಪೀಡ್ ತಲುಪಲಿದ್ದು, ಹೊಸ ಸ್ಕೂಟರ್‌ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ವೈಟ್ ಕಾರ್ಬನ್ ಮೋಟಾರ್ಸ್ ಕಂಪನಿಯು ಜಿಟಿ5 ಸ್ಕೂಟರ್‌ಗಳನ್ನು ಕಾಸ್ಮಿಕ್ ಬ್ಲ್ಯಾಕ್ ಮತ್ತು ಮಿಲ್ಕ ವೇ ವೈಟ್ ಬಣ್ಣಗಳಲ್ಲಿ ಪರಿಚಯಿಸಿದ್ದು, ವಿಶೇಷ ವಿನ್ಯಾಸ ಹೊಂದಿರುವ ಫ್ರಂಟ್ ಫಾಸಿಯಾ ವಿನ್ಯಾಸವು ಹೊಸ ಸ್ಕೂಟರ್‌ಗೆ ಬಲಿಷ್ಠತೆ ತುಂಬಿವೆ.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಸ್ಪೋರ್ಟಿ ಲುಕ್ ಹೊಂದಿರುವ ಜಿಟಿ5 ಸ್ಕೂಟರ್‌ಗಳಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್, ಎಲ್ಇಡಿ ಪ್ರೊಜೆಕ್ಟರ್‌ಗಳು, ಇಂಟ್ರಾಗ್ರೆಟೆಡ್ ಡಿಆರ್‌ಎಲ್ಎಸ್, ಆ್ಯಂಬಿಯೆಂಟ್ ಲೈಟ್ಸ್, ಫ್ರಂಟಾ ಆಪಾರ್ನ್‌ನಲ್ಲಿ ಏರ್ ವೆಂಟ್ಸ್, ಕಾರ್ಬನ್ ಫೈಬರ್ ಒಳಗೊಂಡಿರುವ ಬಾಡಿ ಪ್ಯಾನೆಲ್ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಹಾಗೆಯೇ ವಿಶೇಷ ವಿನ್ಯಾಸದ ಎಲ್ಇಡಿ ಟೈಲ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳಾಗಿ ಎಲ್ಇಡಿ ಸ್ಟ್ರೀಪ್ ಲೈನ್, ಸೈಡ್ ಸ್ಟ್ಯಾಂಡ್ ಕಟ್ಅಪ್, ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ಯುಎಸ್‌ಬಿ ಚಾರ್ಜರ್ ಪಾಯಿಂಟ್, ಫುಲ್ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ಮತ್ತು ವಿವಿಧ ರೈಡಿಂಗ್ ಮೋಡ್‌ಗಳನ್ನು ಪಡೆದುಕೊಳ್ಳಬಹುದು.

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಜಿಟಿ5 ಮಾದರಿಯಲ್ಲಿ 2.4kWh ಬ್ಯಾಟರಿ ಪ್ಯಾಕ್ ಅನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 3 ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಳ್ಳಲಿದ್ದು, ಆಟೋ ಕಟ್ಅಪ್ ಫೀಚರ್ಸ್‌ನಿಂದಾಗಿ ಬ್ಯಾಟರಿಗೆ ಚಾರ್ಜಿಂಗ್ ವೇಳೆ ಯಾವುದೇ ಹಾನಿಯಾಗದಂತೆ ಸುರಕ್ಷೆ ನೀಡುತ್ತದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

150 ಕಿ.ಮೀ ಮೈಲೇಜ್ ರೇಂಜ್ ಹೊಂದಿರುವ ಜಿಟಿ5 ಇವಿ ಸ್ಕೂಟರ್ ಬಿಡುಗಡೆ

ಇನ್ನು ಹೊಸದಾಗಿ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭಿಸುತ್ತಿರುವ ವೈಟ್ ಕಾರ್ಬನ್ ಮೋಟಾರ್ಸ್ ಕಂಪನಿಯು ಸದ್ಯ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಸ್ಕೂಟರ್ ಮಾರಾಟ ಆರಂಭಿಸುವ ಸಿದ್ದತೆಯಲ್ಲಿದ್ದು, ಹಂತ-ಹಂತವಾಗಿ ದೇಶದ ಪ್ರಮುಖ ನಗರಗಳಲ್ಲಿ ಮಾರಾಟ ಆರಂಭಿಸಲಿದೆ.

Most Read Articles

Kannada
English summary
White Carbon Motors GT5 Electric Scooter Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X