ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಮೋಟಾರ್ ಇಂಡಿಯಾ ಹೊಸ ಬಣ್ಣದ ಆಯ್ಕೆಯಲ್ಲಿ ಏರೋಕ್ಸ್ 155( Aerox 155) ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ಹೊಸ ಮೆಟಾಲಿಕ್ ಬ್ಲ್ಯಾಕ್ ಎಂಬ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಈ ಯಮಹಾ ಏರೋಕ್ಸ್ ಮ್ಯಾಕ್ಸಿ ಸ್ಕೂಟರ್ ಅನ್ನು ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್ ಎಂಬ ಬಣ್ಣಗಳಲ್ಲಿಯು ಲಭ್ಯವಿದೆ. ಈ ಯಮಹಾ ಏರೋಕ್ಸ್ 155 ಸ್ಕೂಟರ್ ಬೆಲೆಯು ರೂ.1.29 ಲಕ್ಷಗಳಾದರೆ, ಇದರ ಮೋಟೋ ಜಿಪಿ ಎಡಿಷನ್ ಮಾದರಿಗೆ ರೂ.1.30 ಲಕ್ಷಗಳಾಗಿದೆ. ಇನ್ನು ಹೊಸ ಮೆಟಾಲಿಕ್ ಬ್ಲ್ಯಾಕ್ ಬಣ್ಣದ ಮಾದರಿಯ ಬೆಲೆಯು ರೂ,1.29 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಹೊಸ ಯಮಹಾ ಏರೋಕ್ಸ್ 155 ಮ್ಯಾಕ್ಸಿ ಸ್ಕೂಟರ್ ಮೆಟಾಲಿಕ್ ಬ್ಲ್ಯಾಕ್ ಮಾದರಿಯಲ್ಲಿ ಈ ಹೊಸ ಬಣ್ಣವನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಜಪಾನಿನ ತಯಾರಕರು ಖಂಡಿತವಾಗಿಯೂ ತನ್ನ 125 ಸಿಸಿ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದ್ದಾರೆ ಏಕೆಂದರೆ ಫಾಸಿನೋ ಮತ್ತು ರೇ ಜೆಡ್ಆರ್ ಎಫ್ಐ ಹೈಬ್ರಿಡ್ ಆವೃತ್ತಿಗಳನ್ನು ಇತ್ತೀಚೆಗೆ ಪರಿಚಯಿಸಲಾಯಿತು.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಏರಾಕ್ಸ್ 155 ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಪ್ರೀಮಿಯಂ ಸ್ಕೂಟರ್ ಜಾಗಕ್ಕೆ ಬ್ರಾಂಡ್‌ನ ಮೊದಲ ಪ್ರಯತ್ನವಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಮತ್ತು ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್‌ನಲ್ಲಿ 1997 ರಿಂದ ಲಭ್ಯವಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಹಲವು ಮಾರುಕಟ್ಟೆಗಳಲ್ಲಿ ವಿವಿಧ ಎಂಜಿನ್ ಸಾಮರ್ಥ್ಯಗಳಲ್ಲಿ ಮಾರಾಟವಾಗಿದೆ. ಭಾರತದಲ್ಲಿ ಬಿಡುಗಡೆಗೊಂಡ ಈ ಯಮಹಾ ಏರೋಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಆರ್15 ವಿ3 ಬೈಕ್ ಗಿಂತ 25 ಎಂಎಂ ಉದ್ದದ ವೀಲ್‌ಬೇಸ್ ಅನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಒಟ್ಟು ವಾಹನದ ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು, ಏರಾಕ್ಸ್ 155 ಸ್ಕೂಟರ್ ಮಿಡ್-ಲೈಫ್ ಅಪ್ಡೇಟ್ ಅನ್ನು ಪಡೆದುಕೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಅದೇ 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಧನ-ಇಂಜೆಕ್ಟೆಡ್ ಡಿಒಎಚ್‌ಸಿ ಎಂಜಿನ್ ಅನ್ನು ವೇರಿಯಬಲ್ ವ್ಯಾಲ್ಯೂ ಆಕ್ಚುವೇಶನ್ ಟೆಕ್‌ನೊಂದಿಗೆ ಬಳಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 14.95 ಬಿಹೆಚ್‍ಪಿ ಪವರ್ ಅನ್ನು ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಆರ್15 ವಿ3 ಮಾದರಿಗಿಂತ ಸುಮಾರು 4 ಬಿಹೆಚ್‍ಪಿ ಕಡಿಮೆ ಆದರೆ ಖಂಡಿತವಾಗಿಯೂ 10.9 ಬಿಹೆಚ್‍ಪಿ ಪವರ್ ಉತ್ಪಾದಿಸುವ ಎಪ್ರಿಲಿಯಾ ಎಸ್ಎಕ್ಸ್ಆರ್160 ಗಿಂತ ಹೆಚ್ಚು.ಆಗಿದೆ. ಮಲೇಷಿಯಾದ ಸೆಪಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ 2016 ರ ಅಂತ್ಯದಲ್ಲಿ ಮೊದಲ ಚೊಚ್ಚಲ ಪ್ರದರ್ಶನವನ್ನು ನೀಡಿತ್ತು.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಈ ಸ್ಕೂಟರ್ ಹಝರ್ಡ್ ಲ್ಯಾಂಪ್ಸ್, ಟರ್ನ್ ಇಂಡಿಕೇಟರ್ಸ್ ಫೇರಿಂಗ್ ಮತ್ತು ಸಮತಲವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ಜೋಡಿಸಲಾಗಿದೆ.ಇನ್ನು ಈ ಸ್ಕೂಟರ್ ಸಣ್ಣ ವಿಂಡ್‌ಸ್ಕ್ರೀನ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಸ್ಟಬ್ಬಿ ಎಕ್ಸಾಸ್ಟ್ ಸಿಸ್ಟಂ, ದೊಡ್ಡ ಫುಟ್‌ಬೋರ್ಡ್ ಮತ್ತು ವಿಶಾಲವಾದ ಸ್ಟೋರೆಂಜ್ ಸಾಮರ್ಥ್ಯ ಹೊಂದಿದೆ. ಇನ್ನು ಈ ಸ್ಕೂಟರ್ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಹೊಸ ಏರಾಕ್ಸ್ 155 ಸ್ಕೂಟರ್ ಬ್ಲೂಟೂತ್ ಎನೇಬಲ್ಡ್ ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಅಪ್ಲಿಕೇಶನ್, 5.8 ಇಂಚಿನ ಎಲ್‌ಸಿಡಿ ಕ್ಲಸ್ಟರ್, ಉತ್ತಮ ರಾತ್ರಿ ಸಮಯದ ದೃಷ್ಟಿಗಾಗಿ ಎಲ್‌ಇಡಿ ಹೆಡ್ ಲ್ಯಾಂಪ್‌ಗಳು ಮತ್ತು 3ಡಿ ನೋಟವನ್ನು ನೀಡುವ 12 ಕಾಂಪ್ಯಾಕ್ಟ್ ಎಲ್‌ಇಡಿಗಳನ್ನು ಒಳಗೊಂಡಿರುವ ಟೈಲ್ ಲ್ಯಾಂಪ್‌ಗಳಂತಹ ಪ್ರಮುಖ ವೈಶಿಷ್ಟ್ಯಗಳನ್ನು ಪಡೆಯುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಇನ್ನು ಈ ಸ್ಕೂಟರ್ 24.5 ಲೀಟರ್ ಸಾಮರ್ಥ್ಯದ ಕೆಳಗಿರುವ ಸ್ಟೋರೇಜ್ ಅನ್ನು ಸಹ ಪಡೆಯುತ್ತದೆ. ಇನ್ನು ಈ ಸ್ಕೂಟರ್ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಪೂರ್ಣ ಡಿಜಿಟಲ್ 5.8 ಇಂಚಿನ LCD ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಸಹ ಪಡೆಯುತ್ತದೆ ಮತ್ತು ಸ್ಪೀಡೋಮೀಟರ್, RPM, VVA ಇಂಡಿಕೇಟರ್ ಮತ್ತು ವೈ-ಕನೆಕ್ಟ್ ಆಪ್ ಫೋನ್ ಅಲರ್ಟ್, ಕೊನೆಯ ನಿಲುಗಡೆ ಸ್ಥಳ, ಇಂಧನ ಬಳಕೆಯನ್ನು ಮಾಹಿತಿ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಯಮಹಾ ಮೋಟಾರ್ ಇಂಡಿಯಾ ಲಿಮಿಟೆಡ್ ತನ್ನ ನ್ಯೂ ಜನರೇಷನ್ ಆರ್15 ವಿ4 ಮತ್ತು ಆರ್15 ಎಂ ಮಾದರಿಗಳನ್ನು ತಿಂಗಳುಗಳ ಹಿಂದೆ ಪರಿಚಯಿಸಿತು. ಈ ಯಮಹಾ ಆರ್15 ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ. ಯಮಹಾ ಮೋಟಾರ್ ಇಂಡಿಯಾ ತನ್ನ ಹೊಸ ಆರ್15ಎಂ ಮತ್ತು ಆರ್15 ವಿ4 ಮಾದರಿಗಳನ್ನು ಈ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಯಮಹಾ ಆರ್15 ಎಂ ಭಾರತದಲ್ಲಿ ಮೊದಲ ಎಂ ಹೆಸರನ್ನು ಹೊಂದಿರುವ ಯಮಹಾ ಬೈಕ್ ಆಗಿದೆ, ಏಕೆಂದರೆ ಕಂಪನಿಯು ಸಾಮಾನ್ಯವಾಗಿ ಜಾಗತಿಕವಾಗಿ ಮಾರಾಟವಾಗುವ ಸಾಮಾನ್ಯ ಮಾದರಿಗಳ ಕಾರ್ಯಕ್ಷಮತೆಯ ಆವೃತ್ತಿಗಳಿಗಾಗಿ ಕಾಯ್ದಿರಿಸುತ್ತದೆ.

ಹೊಸ ಬಣ್ಣದ ಆಯ್ಕೆಯಲ್ಲಿ Yamaha Aerox 155 ಸ್ಕೂಟರ್ ಬಿಡುಗಡೆ

ಯಮಹಾ ಏರೋಕ್ಸ್ 155 ಪ್ರೀಮಿಯಂ ಸ್ಕೂಟರ್ ಜಾಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸುತ್ತಿದೆ. ಇನ್ನು ಈ ಮ್ಯಾಕ್ಸಿ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿರುವುದರಿಂದ ಯಮಹಾ ಮೋಟಾರ್ ಇಂಡಿಯಾ ಕಂಪನಿಯ ಹೊಸ ಬಣ್ಣದಲ್ಲಿ ಬಿಡುಗಡೆಗೊಳಿಸಿದೆ.

Most Read Articles

Kannada
Read more on ಯಮಹಾ yamaha
English summary
Yamaha aerox 155 maxi scooter launched in new metallic black colour details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X