ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಮ್ಯಾಕ್ಸಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಲಾಭ ಪಡೆಯಲು ಸುಜುಕಿ ಕಂಪನಿಯು ಬರ್ಗ್‌ಮನ್ ಸ್ಕೂಟರ್ ಬಿಡುಗಡೆಗೊಳಿಸಿದ್ದರೆ, ಏಪ್ರಿಲಿಯಾ ಕಂಪನಿಯು ಎಸ್‌ಎಕ್ಸ್‌ಆರ್ 160 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಈ ಎರಡು ಕಂಪನಿಯ ಮ್ಯಾಕ್ಸಿ ಸ್ಕೂಟರ್'ಗಳು ಮಾತ್ರ ಭಾರತದಲ್ಲಿ ಲಭ್ಯವಿರುವ ಕಾರಣ ಗ್ರಾಹಕರಿಗೆ ಅದರಲ್ಲೂ ಯುವ ಜನರಿಗೆ ಸೀಮಿತ ಆಯ್ಕೆಗಳು ಮಾತ್ರ ಮುಂದಿವೆ. ಈ ಕಾರಣಕ್ಕೆ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಹಾಗೂ ಸುಜುಕಿ ಬರ್ಗ್‌ಮನ್ ಸ್ಕೂಟರ್‌ಗಳು ಹೆಚ್ಚು ಪೈಪೋಟಿ ಇಲ್ಲದೇ ಮಾರಾಟವಾಗುತ್ತಿವೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಸುಜುಕಿ ಬರ್ಗ್‌ಮನ್ ಹಾಗೂ ಏಪ್ರಿಲಿಯಾ ಎಸ್‌ಎಕ್ಸ್‌ಆರ್ 160 ಮ್ಯಾಕ್ಸಿ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲು ಯಮಹಾ ಕಂಪನಿಯು ತನ್ನ ಹೊಸ ಮ್ಯಾಕ್ಸಿ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಇದರಿಂದ ಮ್ಯಾಕ್ಸಿ ಮಾದರಿಯ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಿನ ಆಯ್ಕೆ ದೊರೆಯಲಿದೆ. ಸುಜುಕಿ ಬರ್ಗ್‌ಮನ್ ಸ್ಕೂಟರಿನ ಬೆಲೆ ದೇಶಿಯ ಮಾರುಕಟ್ಟೆಯಲ್ಲಿ ರೂ.82,700ರಿಂದ ರೂ.86,200ಗಳಾಗಿದೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಯಮಹಾ ಮ್ಯಾಕ್ಸಿ ಸ್ಕೂಟರ್ ಬೆಲೆ ಇದಕ್ಕಿಂತ ಕಡಿಮೆಯಾಗಿರಬಹುದು ಅಥವಾ ಇಷ್ಟೇ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಯಮಹಾ ಕಂಪನಿಯು 125 ಸಿಸಿ ಸಾಮರ್ಥ್ಯ ಹೊಂದಿರುವ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಈ ಮ್ಯಾಕ್ಸಿ ಸ್ಕೂಟರ್‌ನಲ್ಲಿ ಫಾಸಿನೊ ಹಾಗೂ ರೇಝಡ್ಆರ್ ಸ್ಕೂಟರ್‌ಗಳಲ್ಲಿ ಬಳಸಲಾಗುವ 125 ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಏರ್ ಕೂಲ್ಡ್ ಎಂಜಿನ್ ಬಳಸುವನಿರೀಕ್ಷೆಗಳಿವೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಈ ಎಂಜಿನ್ 8.2 ಬಿಹೆಚ್‌ಪಿ ಪವರ್ ಹಾಗೂ 9.7 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಸುಜುಕಿ ಬರ್ಗ್‌ಮನ್ ಸ್ಕೂಟರ್ ಇದಕ್ಕಿಂತ ಸ್ವಲ್ಪ ಹೆಚ್ಚು ಸಾಮರ್ಥ್ಯವನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಸುಜುಕಿ ಬರ್ಗ್‌ಮನ್ ಸ್ಕೂಟರಿನಲ್ಲಿರುವ ಎಂಜಿನ್ 8.7 ಬಿಹೆಚ್‌ಪಿ ಪವರ್ ಹಾಗೂ 10 ಎನ್‌ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಯಮಹಾ ಕಂಪನಿಯು ಜಪಾನ್‌ನಲ್ಲಿ ಎನ್‌ಮ್ಯಾಕ್ಸ್ 125 ಎಂಬ ಮ್ಯಾಕ್ಸಿ ಸ್ಕೂಟರ್ ಮಾರಾಟ ಮಾಡುತ್ತದೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಕಂಪನಿಯು ಭಾರತದಲ್ಲಿಯೂ ಸಹ ಇದೇ ಶೈಲಿಯ ಸ್ಕೂಟರ್ ಮಾರಾಟ ಮಾಡುವ ಸಾಧ್ಯತೆಗಳಿವೆ. ಯಮಹಾ ಮ್ಯಾಕ್ಸಿ ಸ್ಕೂಟರ್ ಡ್ಯುಯಲ್ ಬೀಮ್ ಫ್ರಂಟ್ ಲೈಟ್, ಎತ್ತರದ ಕಪ್ಪು ವಿಂಡ್‌ಶೀಲ್ಡ್, ಹೆಡ್‌ಲ್ಯಾಂಪ್‌ ಹೊಂದಿರುವ ಡಿಆರ್‌ಎಲ್‌, ಸಿಂಗಲ್ ಪೀಸ್ ಸ್ಯಾಡಲ್ ಹಾಗೂ ಅಲಾಯ್ ವ್ಹೀಲ್‌ನಂತಹ ಆಕರ್ಷಕ ಫೀಚರ್'ಗಳನ್ನು ಹೊಂದುವ ನಿರೀಕ್ಷೆಗಳಿವೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಇದರ ಜೊತೆಗೆ ಈ ಮ್ಯಾಕ್ಸಿ ಸ್ಕೂಟರ್ ಬ್ಲೂಟೂತ್ ಹಾಗೂ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ, ಸೆಲ್ ಫೋನ್ ಚಾರ್ಜರ್ ಸೌಲಭ್ಯ ಸೇರಿದಂತೆ ಹಲವು ಟೆಕ್ನಿಕಲ್ ಫೀಚರ್'ಗಳನ್ನು ಹೊಂದುವ ನಿರೀಕ್ಷೆಗಳಿವೆ.

ಭಾರತದಲ್ಲಿ ಮ್ಯಾಕ್ಸಿ ಸ್ಕೂಟರ್ ಬಿಡುಗಡೆಗೊಳಿಸಲು ಮುಂದಾದ ಯಮಹಾ

ಆದರೆ ಯಮಹಾ ಕಂಪನಿಯು ಇವುಗಳ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ ಎಂಬುದು ಗಮನಾರ್ಹ. ಈ ಬಗ್ಗೆ ಬೈಕ್‌ವಾಲೆ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಗಮನಿಸಿ: ಎಲ್ಲಾ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha Company planning to launch new Maxi scooter for India. Read in Kannada.
Story first published: Friday, July 9, 2021, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X