ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಯಮಹಾ ಕಂಪನಿಯು ತನ್ನ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ, ಕಂಪನಿಯು ಆರ್ 15 ವಿ 3, ಎಫ್‌ಝಡ್‌ಎಸ್‌ ಬೈಕುಗಳ ಬೆಲೆಯನ್ನು ಹೆಚ್ಚಿಸಿದೆ. ಯಮಹಾ ತನ್ನ ಬೈಕುಗಳ ಬೆಲೆಯನ್ನು ರೂ.1500ಗಳವರೆಗೆ ಹೆಚ್ಚಿಸಿದೆ. ಕಂಪನಿಯು ಮುಂಬರುವ ದಿನಗಳಲ್ಲಿ ಇತರ ಮಾದರಿಗಳ ಬೆಲೆಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ.

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಈ ಬೈಕುಗಳ ಬೆಲೆ ಅವುಗಳ ಬಣ್ಣಗಳನ್ನು ಅವಲಂಬಿಸಿರುತ್ತದೆ. ಯಮಹಾ ಆರ್ 15 ಬೈಕಿನ ಬೆಲೆ ರೂ.1.52 ಲಕ್ಷಗಳಿಂದ ರೂ.1.54 ಲಕ್ಷಗಳಾಗಿದೆ. ಇತ್ತೀಚೆಗೆ ಮೂರು ಬಣ್ಣಗಳ ಜೊತೆಗೆ ಹೊಸದಾಗಿ ರೆಡ್ ಮೆಟಾಲಿಕ್ ಬಣ್ಣವನ್ನು ಸೇರಿಸಲಾಗಿದೆ. ಈ ಬೈಕಿನ ಬೆಲೆ ರೂ.1.52 ಲಕ್ಷಗಳಾಗಿದೆ.

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ನೀಲಿ ಬಣ್ಣದ ಬೈಕಿನ ಬೆಲೆ ರೂ.1.53 ಲಕ್ಷಗಳಾದರೆ, ಡಾರ್ಕ್ ನೈಟ್ ಬಣ್ಣದ ಬೈಕಿನ ಬೆಲೆ ರೂ.1.54 ಲಕ್ಷಗಳಾಗಿದೆ. ಎಫ್‌ಝಡ್‌ಎಸ್‌ ರೆಡ್ ಬೈಕಿನ ಬೆಲೆ ರೂ.1.08 ಲಕ್ಷಗಳಿಂದ ಆರಂಭವಾಗುತ್ತದೆ. ಈ ಬೈಕಿನ ಕಪ್ಪು ಹಾಗೂ ನೀಲಿ ಬಣ್ಣದ ಬೈಕುಗಳ ಬೆಲೆ ಸಹ ಬಹುತೇಕ ಒಂದೇ ಆಗಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಎಫ್‌ಝಡ್‌ಎಸ್‌ ಡಾರ್ಕ್ ನೈಟ್‌ ಬೈಕಿನ ಬೆಲೆ ರೂ.1.09 ಲಕ್ಷಗಳಾದರೆ, ವಿಂಟೇಜ್ ಗ್ರೀನ್‌ ಬೈಕಿನ ಬೆಲೆ ರೂ.1.11 ಲಕ್ಷಗಳಾಗಿದೆ. ಅವುಗಳ ಬೆಲೆಯನ್ನೂ ಸಹ ರೂ.1000ಗಳವರೆಗೆ ಏರಿಕೆ ಮಾಡಲಾಗಿದೆ. ಇದಕ್ಕೂ ಮುನ್ನ ಯಮಹಾ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ ತನ್ನ ಬೈಕುಗಳ ಬೆಲೆಯನ್ನು ಹೆಚ್ಚಿಸಿತ್ತು.

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಬೆಲೆಯಲ್ಲಿ ಹೆಚ್ಚಳವಾಗಿದ್ದರೂ ಬೈಕುಗಳಲ್ಲಿ ಯಾವುದೇ ಹೊಸ ನವೀಕರಣಗಳನ್ನು ನೀಡಲಾಗಿಲ್ಲ ಅಥವಾ ಯಾವುದೇ ಹೆಚ್ಚುವರಿ ಫೀಚರ್'ಗಳನ್ನು ಸೇರಿಸಲಾಗಿಲ್ಲ. ಯಮಹಾ ಎಫ್‌ಝಡ್‌ಎಫ್ ಆರ್ 15 ವಿ 3 ಬೈಕಿನಲ್ಲಿ 155 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಈ ಎಂಜಿನ್ 18.37 ಬಿ‌ಹೆಚ್‌ಪಿ ಪವರ್ ಹಾಗೂ 14.1 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ ಕ್ಲಿಪ್ ಹ್ಯಾಂಡಲ್‌ಬಾರ್, ಡೆಲ್ಟಾಬಾಕ್ಸ್ ಫ್ರೇಮ್, ಅಲ್ಯೂಮಿನಿಯಂ ಸ್ವಿಂಗಾರ್ಮ್, ಅಸಿಸ್ಟ್, ಸ್ಲಿಪ್ಪರ್ ಕ್ಲಚ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಈ ಬೈಕ್ ಪೂರ್ಣ ಪ್ರಮಾಣದ ಎಲ್ಇಡಿ ಹೆಡ್'ಲೈಟ್, ಎಲ್ಇಡಿ ಟೇಲ್'ಲೈಟ್ ಹಾಗೂ ಟರ್ನ್ ಇಂಡಿಕೇಟರ್'ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಪೂರ್ಣ ಡಿಜಿಟಲ್ ಎಲ್‌ಸಿ‌ಡಿ ಇನ್ಸ್'ಟ್ರೂಮೆಂಟ್ ಕನ್ಸೋಲ್ ಅಳವಡಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಈ ಬೈಕಿನ ಗೋಚರತೆ ಹೆಚ್ಚು ಸ್ಪಷ್ಟವಾಗಿದೆ. ರೈಡಿಂಗ್ ಸ್ಥಾನವನ್ನು ಸ್ಪೋರ್ಟಿಯಾಗಿಸಲು ಬೈಕಿನ ಮುಂಭಾಗದಲ್ಲಿ ಟಿಲ್ಟೆಡ್ ಹ್ಯಾಂಡಲ್‌ಬಾರ್ ಹಾಗೂಹಿಂಭಾಗದಲ್ಲಿ ಫುಟ್‌ಪ್ಯಾಡ್ ನೀಡಲಾಗಿದೆ.

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಯಮಹಾ ಆರ್ 15 ವಿ 3 ಭಾರತದಲ್ಲಿ ಹೋಂಡಾ ಸಿಬಿಆರ್ 150 ಆರ್ ಬೈಕಿಗೆ ಪೈಪೋಟಿ ನೀಡುತ್ತದೆ. ಎಫ್‌ಝಡ್‌ಎಸ್ ಎಫ್‌ಐ ಬೈಕಿನಲ್ಲಿ 149 ಸಿಸಿಯ ಸಿಂಗಲ್ ಸಿಲಿಂಡರ್, ಫ್ಯೂಯಲ್ ಇಂಜೆಕ್ಟ್ ಎಂಜಿನ್ ಅಳವಡಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಆರ್ 15 ವಿ 3 ಹಾಗೂ ಎಫ್‌ಝಡ್‌ಎಸ್‌ ಬೈಕುಗಳ ಬೆಲೆ ಹೆಚ್ಚಿಸಿದ ಯಮಹಾ

ಈ ಎಂಜಿನ್ 12.2 ಬಿಹೆಚ್‌ಪಿ ಪವರ್ ಹಾಗೂ 13.6 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 5 ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ. ಸಸ್ಪೆಂಷನ್'ಗಾಗಿ ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್ ಅಬ್ಸಾರ್ಬರ್ ನೀಡಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha increases price of R15 V3 FZs Fi bikes price. Read in Kannada.
Story first published: Monday, April 5, 2021, 20:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X