ಎನ್‌ಮ್ಯಾಕ್ಸ್ 125 ಸ್ಕೂಟರ್‌ಗಾಗಿ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ 2021ರ ಎನ್‌ಮ್ಯಾಕ್ಸ್ 125 ಸ್ಕೂಟರ್‌ಗಾಗಿ ಸ್ಟಾರ್ ವಾರ್ಸ್ ಎಡಿಷನ್ ಅನ್ನು ಬ್ರೆಜಿಲ್‌ನಲ್ಲಿ ಪರಿಚಯಿಸಲಾಗಿದೆ. ಹೊಸ ಯಮಹಾ ಎನ್‌ಮ್ಯಾಕ್ಸ್ 125 ಸ್ಟಾರ್ ವಾರ್ಸ್ ಎಡಿಷನ್ ಆಕರ್ಷಕ ಗ್ರಾಫಿಕ್ಸ್ ಅನ್ನು ಒಳಗೊಂಡಿದೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಸ್ಕೂಟರ್ ವಿನ್ಯಾಸದ ಬದಲಾವಣೆಯನ್ನು ಹೊರತುಪಡಿಸಿ ಉಳಿದಂತೆ ಯಾವದೇ ಬದಲಾವಣೆಗಳನ್ನು ಹೊಂದಿಲ್ಲ. ಬ್ಲಾಕ್ಬಸ್ಟರ್ ಮೂವಿ ಫ್ರ್ಯಾಂಚೈಸ್ನಲ್ಲಿ ರೆಬೆಲ್ ಅಲೈಯನ್ಸ್ ಮತ್ತು ಗ್ಯಾಲಕ್ಸಿಯ ಸಾಮ್ರಾಜ್ಯವನ್ನು ಪ್ರತಿನಿಧಿಸುವ ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ನಲ್ಲಿ ಎರಡು ರೀತಿಯ ಬಣ್ಣಗಳ ಆಯ್ಕೆಗಳಿವೆ. ಇದು ವೈಟ್ ಮತ್ತು ರ್ಕ್ ಸೈಡ್' ಅನ್ನು ಪ್ರತಿನಿಧಿಸುವ ಬ್ಲ್ಯಾಕ್/ರೆಡ್ ಬಣ್ಣಗಳಾಗಿವೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಹೊಸ ಯಮಹಾ ಎನ್‌ಮ್ಯಾಕ್ಸ್ 125 ಸ್ಟಾರ್ ವಾರ್ಸ್ ಎಡಿಷನ್ ನಲ್ಲಿ ಪರಿಷ್ಕೃತ 124 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಪಡೆಯುತ್ತದೆ, ಇದು ಈಗ ಯುರೋ 5 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಈ ಎಂಜಿನ್ 11.8 ಬಿಹೆಚ್‍ಪಿ ಪವರ್ ಮತ್ತು 11 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಸ್ಕೂಟರ್ ವಿವಿಎ (ವೇರಿಯಬಲ್ ವಾಲ್ವ್ ಆಕ್ಟಿವೇಷನ್) ತಂತ್ರಜ್ಞಾನವನ್ನು ಸಹ ಪಡೆಯುತ್ತದೆ, ಇದು ಇಂಧನ ದಕ್ಷತೆಯನ್ನು ಸುಧಾರಿಸಲು ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಜೊತೆಗೆ ಪವರ್ ಡೆಲಿವಿರಿ ಸುಧಾರಿಸುತ್ತದೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಈ ಸ್ಪೆಷಲ್ ಎಡಿಷನ್ ಸ್ಕೂಟರ್ ನಲ್ಲಿ ಡ್ಯುಯಲ್ ಎಲ್ಇಡಿ ಹೆಡ್‌ಲೈಟ್‌ಗಳು, ಎಲ್ಇಡಿ ಡಿಆರ್‌ಎಲ್ ಮತ್ತು ಎಲ್ಇಡಿ ಟೈಲ್‌ಲೈಟ್ ಇದೆ. ಇನ್ನು ಈ ಸ್ಕೂಟರ್ ಏರೋಡೈನಾಮಿಕ್ ವಿನ್ಯಾಸವನ್ನು ಹೊಂದಿದೆ,

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಇನ್ನು ಈ ಹೊಸ ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಪಿಲಿಯನ್ ಗ್ರ್ಯಾಬ್ ರೈಲ್ ಹೊಂದಿರುವ ಸಿಂಗಲ್-ಪೀಸ್ ಸೀಟನ್ನು ಪಡೆಯುತ್ತದೆ. ಇನ್ನು ಈ ಸ್ಕೂಟರ್ ನಲ್ಲಿ 4 ಲೀಟರ್ ಗಳಷ್ಟು ದೊಡ್ಡದಾದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಈ ಸ್ಕೂಟರ್ 13 ಇಂಚಿನ ಬ್ಲ್ಯಾಕ್-ಔಟ್ ಅಲಾಯ್ ವ್ಹೀಲ್ಕ್ ಗಳನ್ನು ಎರಡೂ ಕಡೆಗೆಗಳಲ್ಲಿ ನೀಡಲಾಗಿದೆ. ವಿಶೇಷವಾಗಿ ಈ ಹೊಸ ಸ್ಕೂಟರ್ ನಲ್ಲಿ ಬದಲಾಯಿಸಬಹುದಾದ ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಸಹ ಇಲ್ಲಿ ನೀಡಲಾಗಿದೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಯಮಹಾ ಎನ್‌ಮ್ಯಾಕ್ಸ್ 125 ಮ್ಯಾಕ್ಸಿ-ಸ್ಕೂಟರ್ ಸ್ಪೆಷಲ್ ಎಡಿಷನ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಒಂದು ಜೋಡಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳ ಸೆಟಪ್ ಅನ್ನು ಹೊಂದಿದೆ.

ಎನ್‌ಮ್ಯಾಕ್ಸ್ 125 ಸ್ಕೂಟರ್‌ನ ಸ್ಟಾರ್ ವಾರ್ಸ್ ಎಡಿಷನ್ ಪರಿಚಯಿಸಿದ ಯಮಹಾ

ಇನ್ನು ಸ್ಕೂಟರ್ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಈ ಮ್ಯಾಕ್ಸಿ-ಸ್ಕೂಟರ್ ಉತ್ತಮ ಬ್ರೇಕಿಂಗ್ ಸೆಟಪ್ ಅನ್ನು ಹೊಂದಿದೆ. ಇನ್ನು ಸಂಪೂರ್ಣ ಡಿಜಿಟಲ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಇದು ಸ್ಮಾರ್ಟ್‌ಫೋನ್‌ಗಳಿಗೆ ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಬಹುದು.

Most Read Articles

Kannada
Read more on ಯಮಹಾ yamaha
English summary
Yamaha NMax 125 Star Wars Edition Reveald. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X