ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

ಯಮಹಾ ಮೋಟಾರ್ ಇಂಡಿಯಾ ತನ್ನ ಜನಪ್ರಿಯ ತನ್ನ ಎಫ್‍‍ಜೆಡ್ ಸರಣಿಯ 2021ರ ಮಾದರಿಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು ಒಳಗೊಂಡಿದ್ದು, ಈ ಮಾದರಿಗಳು ಕೆಲವು ಹೆಚ್ಚುವರಿ ಫೀಚರ್ ಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

2021ರ ಯಮಹಾ ಎಫ್‍‍ಜೆಡ್-ಎಫ್‍ಐ ಬೈಕಿನ ಬೆಲೆಯು ರೂ.1.03 ಲಕ್ಷಗಳಾಗಿದ್ದರೆ, ಎಫ್‍‍ಜೆಡ್‍ಎಸ್-ಎಫ್‍ಐ ಬೈಕಿನ ಬೆಲೆಯು ರೂ.1.07 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿ ಎಕ್ಸ್ ಶೋರೂಂ ಪ್ರಕಾರವಾಗಿದೆ. 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍ಐ ಬೈಕುಗಳು ಈಗ ಕೆಲವು ಸೂಕ್ಷ್ಮ ನವೀಕರಣಗಳನ್ನು ಪಡೆದುಕೊಂಡಿದೆ. ಇನ್ನು ಈ ಬೈಕುಗಳು ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಎಂಬ ಎರಡೂ ಬಣ್ಣಗಳ ಆಯ್ಕೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳಲ್ಲಿ ಹೊಸ ಬಣ್ಣಗಳನ್ನು ಸ್ಟ್ಯಾಂಡರ್ಡ್ ಬಣ್ಣದ ಪ್ಯಾಲೆಟ್ ಜೊತೆಗೆ ನೀಡಲಾಗುವುದು. 2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕ್ ಹೊಸ 3ಡಿ ಲೋಗೊವನ್ನು ಸಹ ಒಳಗೊಂಡಿವೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

ಯಮಹಾ ಎಫ್‍‍ಜೆಡ್ ಸರಣಿಯ ಎರಡು ಮಾದರಿಗಳಲ್ಲಿ ಈ ದಿನಗಳಲ್ಲಿ ಹೆಚ್ಚಿನ ಹೆಚ್ಚಿನ ಬೈಕುಗಳಲ್ಲಿ ನೀಡಲಾಗುವ ಸ್ಟ್ಯಾಂಡರ್ಡ್ ಸುರಕ್ಷತಾ ಫೀಚರ್ ಗಳಾದ ‘ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್' ನೊಂದಿಗೆ ಬರುತ್ತವೆ.

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

ಇನ್ನು ಈ 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳಲ್ಲಿ ಕಂಪನಿಯು 2 ಕೆಜಿಗಳಷ್ಟು ತೂಕವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಇದರ ಸುಧಾರಿತ ಆರಾಮ, ನಿರ್ವಹಣೆ ಮತ್ತು ಕುಶಲತೆಯನ್ನು ಖಾತ್ರಿಪಡಿಸಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

ಆದರೆ ಯಮಹಾ ಕಂಪನಿಯ ಈ ಎಫ್‍‍ಜೆಡ್-ಎಫ್‍ಐ ಮತ್ತು ಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳ ತೂಕವನ್ನು ಹೇಗೆ ಇಳಿಸಿರುವುದರ ಬಗ್ಗೆ ಮಾಹಿತಿ ಬಹಿರಂಗಪಡಿಸಲಿಲ್ಲ.ಹೆಚ್ಚುವರಿಯಾಗಿ, 2021ರ ಎಫ್‍‍ಜೆಡ್‍ಎಸ್-ಎಫ್‍ಐ ಬೈಕ್ ‘ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್' ತಂತ್ರಜ್ಞಾನವನ್ನು ಪಡೆದುಕೊಂಡಿದೆ.

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

ಇದು ಆನ್ಸರ್ ಬ್ಯಾಕ್, ಲೊಕೇಟ್-ಮೈ-ಬೈಕ್, ಇ-ಲಾಕ್ ಮತ್ತು ಇತರ ಹಲವು ಫೀಚರ್ ಗಳಿಂದ ಕೂಡಿರುವ ತಂತ್ರಜ್ಞಾನವಾಗಿದೆ. ಇನ್ನು ಈ ಹೊಸ ಎರಡು ಬೈಕುಗಳಲ್ಲಿ ಎಂಜಿನ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳಲ್ಲಿ ಒಂದೇ 149ಸಿಸಿ ಸಿಂಗಲ್ ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 250 ಆರ್‌ಪಿಎಂನಲ್ಲಿ 12.4 ಬಿಹೆಚ್‌ಪಿ ಮತ್ತು 5500 ಆರ್‌ಪಿಎಂನಲ್ಲಿ 13.6 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ,

ಬಿಡುಗಡೆಯಾಯ್ತು 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಬೈಕುಗಳು

ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ. 2021ರ ಯಮಹಾ ಎಫ್‍‍ಜೆಡ್-ಎಫ್‍ಐ ಮತ್ತು ಎಫ್‍‍ಜೆಡ್‍ಎಸ್-ಎಫ್‍ಐ ಮಾದರಿಗಳು ಭಾರತೀಯ ಮಾರುಕಟ್ಟೆಯಲ್ಲಿ ಸುಜುಕಿ ಜಿಕ್ಸರ್, ಬಜಾಜ್ ಪಲ್ಸರ್ ಎನ್ಎಸ್ 160, ಕೆಟಿಎಂ 125 ಡ್ಯೂಕ್ ಮತ್ತು ಟಿವಿಎಸ್ ಅಪಾಚೆ ಆರ್‍‍ಟಿಆರ್ 160 ಬೈಕುಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
2021 Yamaha FZ & FZS Motorcycles Launched. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X