ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಮೋಟಾರ್ ಇಂಡಿಯಾ ತನ್ನ ಏರೋಕ್ಸ್ 155( Aerox 155) ಮ್ಯಾಕ್ಸಿ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಏರಾಕ್ಸ್ 155 ಮ್ಯಾಕ್ಸಿ ಸ್ಕೂಟರ್ ಅನ್ನು ಪ್ರಸ್ತುತ ಲಭ್ಯವಿರುವ ಮ್ಯಾಕ್ಸಿ-ಸ್ಕೂಟರ್‌ಗಳ ಮೇಲೆ ಇರಿಸಲಾಗಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಹೊಸ ಯಮಹಾ ಏರೋಕ್ಸ್ ಮ್ಯಾಕ್ಸಿ ಸ್ಕೂಟರ್ ಅನ್ನು ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್ ಎಂಬ ಎರಡು ರೀತಿಯ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಬೆಲೆಯು ರೂ.1.29 ಲಕ್ಷಗಳಾದರೆ, ಇದರ ಮೋಟೋ ಜಿಪಿ ಎಡಿಷನ್ ಮಾದರಿಗೆ ರೂ.1.30 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಜಪಾನಿನ ತಯಾರಕರು ಖಂಡಿತವಾಗಿಯೂ ತನ್ನ 125 ಸಿಸಿ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದ್ದಾರೆ ಏಕೆಂದರೆ ಫಾಸಿನೋ ಮತ್ತು ರೇ ಜೆಡ್ಆರ್ ಎಫ್ಐ ಹೈಬ್ರಿಡ್ ಆವೃತ್ತಿಗಳನ್ನು ಇತ್ತೀಚೆಗೆ ಪರಿಚಯಿಸಲಾಯಿತು.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಏರಾಕ್ಸ್ 155 ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಪ್ರೀಮಿಯಂ ಸ್ಕೂಟರ್ ಜಾಗಕ್ಕೆ ಬ್ರಾಂಡ್‌ನ ಮೊದಲ ಪ್ರಯತ್ನವಾಗಿದೆ.ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಮತ್ತು ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್‌ನಲ್ಲಿ 1997 ರಿಂದ ಲಭ್ಯವಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಹಲವು ಮಾರುಕಟ್ಟೆಗಳಲ್ಲಿ ವಿವಿಧ ಎಂಜಿನ್ ಸಾಮರ್ಥ್ಯಗಳಲ್ಲಿ ಮಾರಾಟವಾಗಿದೆ. ಭಾರತದಲ್ಲಿ ಬಿಡುಗಡೆಗೊಂಡ ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಆರ್15 ವಿ3 ಬೈಕ್ ಗಿಂತ 25 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಒಟ್ಟು ವಾಹನದ ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದ್ದು, ಮಿಡ್-ಲೈಫ್ ಅಪ್ಡೇಟ್ ಅನ್ನು ಕೂಡ ಪಡೆದುಕೊಂಡಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಇನ್ನು ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಅದೇ 155 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಧನ-ಇಂಜೆಕ್ಟೆಡ್ ಡಿಒಎಚ್‌ಸಿ ಎಂಜಿನ್ ಅನ್ನು ವೇರಿಯಬಲ್ ವ್ಯಾಲ್ಯೂ ಆಕ್ಚುವೇಶನ್ ಟೆಕ್‌ನೊಂದಿಗೆ ಬಳಸಲಾಗಿದೆ. ಈ ಎಂಜಿನ್ 8,000 ಆರ್‌ಪಿಎಂನಲ್ಲಿ 14.95 ಬಿಹೆಚ್‍ಪಿ ಪವರ್ಉತ್ಪಾದನೆಯನ್ನು ಅಭಿವೃದ್ಧಿಪಡಿಸುತ್ತದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಆರ್15 ವಿ3 ಮಾದರಿಗಿಂತ ಸುಮಾರು 4 ಬಿಹೆಚ್‍ಪಿ ಕಡಿಮೆ ಆದರೆ ಖಂಡಿತವಾಗಿಯೂ 10.9 ಬಿಹೆಚ್‍ಪಿ ಪವರ್ ಉತ್ಪಾದಿಸುವ ಎಪ್ರಿಲಿಯಾ ಎಸ್ಎಕ್ಸ್ಆರ್160 ಗಿಂತ ಹೆಚ್ಚು.ಆಗಿದೆ.ಮಲೇಷಿಯಾದ ಸೆಪಾಂಗ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ 2016 ರ ಅಂತ್ಯದಲ್ಲಿ ಮೊದಲ ಚೊಚ್ಚಲ ಪ್ರದರ್ಶನವನ್ನು ನೀಡಿತ್ತು.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಹೊಸ ಏರಾಕ್ಸ್ 155 ಸ್ಕೂಟರ್ ಯಮಹಾ ಆರ್ ಸರಣಿಯನ್ನು ಅನುಕರಿಸುವ ರೇಜರ್-ಶಾರ್ಪ್ ಸ್ಟೈಲಿಂಗ್ ಅನ್ನು ಡ್ಯುಯಲ್-ಪಾಡ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳಿಂದ ಸಂಯೋಜಿತ ವಿಂಗ್-ಆಕಾರದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಚೂಪಾದ ಬಾಡಿವರ್ಕ್, ಸ್ಮಾರ್ಟ್‌ಫೋನ್‌ನೊಂದಿಗೆ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಅಪ್ಲಿಕೇಶನ್ ಆಧಾರಿತ ಕಾರ್ಯಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಈ ಸ್ಕೂಟರ್ ಹಝರ್ಡ್ ಲ್ಯಾಂಪ್ಸ್, ಟರ್ನ್ ಇಂಡಿಕೇಟರ್ಸ್ ಫೇರಿಂಗ್ ಮತ್ತು ಸಮತಲವಾದ ಎಲ್ಇಡಿ ಟೈಲ್ ಲ್ಯಾಂಪ್‌ಗಳ ಮೇಲೆ ಜೋಡಿಸಲಾಗಿದೆ.ಇನ್ನು ಈ ಸ್ಕೂಟರ್ ಸಣ್ಣ ವಿಂಡ್‌ಸ್ಕ್ರೀನ್, ಸ್ಪೋರ್ಟಿ ಬಾಡಿ ಗ್ರಾಫಿಕ್ಸ್, ಸ್ಟಬ್ಬಿ ಎಕ್ಸಾಸ್ಟ್ ಸಿಸ್ಟಂ, ದೊಡ್ಡ ಫುಟ್‌ಬೋರ್ಡ್ ಮತ್ತು ವಿಶಾಲವಾದ ಸ್ಟೋರೆಂಜ್ ಸಾಮರ್ಥ್ಯ ಹೊಂದಿದೆ. ಇನ್ನು ಈ ಸ್ಕೂಟರ್ 14 ಇಂಚಿನ ಅಲಾಯ್ ವ್ಹೀಲ್ ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಇನ್ನು ಯಮಹಾ ಮೋಟಾರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಫ್ಯಾಸಿನೋ ಎಫ್ಐ ಮತ್ತು ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಮಾದರಿಗಳಲ್ಲೂ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಿತ್ತು. ನವೀಕೃತ ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಸ್ಕೂಟರ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ಬೆಲೆಯು ರೂ.76,830ಕ್ಕೆ ಮತ್ತು ಟಾಪ್ ಎಂಡ್ ಮಾದರಿಯ ಬೆಲೆಯು ರೂ.83,830 ಬೆಲೆ ಹೊಂದಿವೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಇನ್ನು ರೇ ಜೆಡ್ಆರ್ ಎಫ್ಐ ಮಾದರಿಯಲ್ಲಿ ಡ್ರಮ್(ರೂ.76,830) ಮತ್ತು ಡಿಸ್ಕ್(ರೂ.79,830) ಮಾದರಿಗಳನ್ನು ನೀಡಲಾಗಿದ್ದು, ಸ್ಪೋರ್ಟಿ ವಿನ್ಯಾಸದ ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಆವೃತ್ತಿಯು ಸಿಂಗಲ್ ಮಾದರಿಯೊಂದಿಗೆ ರೂ.83,830 ಬೆಲೆ ಹೊಂದಿದೆ.ಇನ್ನು ಗ್ರಾಹಕರನ್ನು ಆಕರ್ಷಿಸಲು ಬಹು ಬಣ್ಣದ ಆಯ್ಕೆಗಳಲ್ಲಿ ಮಾರಾಟವಾಗುತ್ತದೆ. ಇದು 790 ಎಂಎಂ ಸೀಟ್ ಎತ್ತರವನ್ನು ಹೊಂದಿದೆ ಮತ್ತು ಇಂಧನ ಟ್ಯಾಂಕ್ ಸಾಮರ್ಥ್ಯವು 5.5 ಲೀಟರ್ ಆಗಿದೆ.

ಭಾರತದಲ್ಲಿ ಹೊಸ Yamaha Aerox 155 ಮ್ಯಾಕ್ಸಿ ಸ್ಕೂಟರ್ ಬಿಡುಗಡೆ

ಹೊಸ ಏರಾಕ್ಸ್ 155 ಸ್ಕೂಟ ಫ್ಯೂಯಲ್ ಫಿಲ್ಲರ್ ಕ್ಯಾಪ್ ಅನ್ನು ಫ್ಲೋರ್‌ಬೋರ್ಡ್‌ನ ಸೆಂಟ್ರಲ್ ರಿಡ್ಜ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಇರಿಸಲಾಗಿದೆ. ಯಮಹಾ ಏರೋಕ್ಸ್ 155 ಪ್ರೀಮಿಯಂ ಸ್ಕೂಟರ್ ಜಾಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಸಬಹುದು ಎಂದು ನಾವು ನಿರೀಕ್ಷಿಸುತ್ತೇವೆ

Most Read Articles

Kannada
Read more on ಯಮಹಾ yamaha
English summary
Yamaha launched aerox 155 maxi scooter in india details
Story first published: Tuesday, September 21, 2021, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X