ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ತೈವಾನ್ ಮಾರುಕಟ್ಟೆಯಲ್ಲಿ ನವೀಕರಿಸಿದ ಫೋರ್ಸ್ 2.0 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಫೋರ್ಸ್ 2.0 ಮಾದರಿಯು ಯಮಹಾ ಏರಾಕ್ಸ್ 155 ಮ್ಯಾಕ್ಸಿ-ಸ್ಕೂಟರ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಯಮಹಾ ಏರಾಕ್ಸ್ 155 ಮ್ಯಾಕ್ಸಿ-ಸ್ಕೂಟರ್ ಅನ್ನು ಭಾರತದಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಇನ್ನು ಯಮಹಾ ಫೋರ್ಸ್ 2.0 ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದರ ವಿನ್ಯಾಸದ ಮುಂಭಾಗ ಮತ್ತು ಯಾಂತ್ರಿಕವಾಗಿ ಹಲವು ನವೀಕರಣಗಳನ್ನು ಪಡೆದುಕೊಂಡಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಇದು ನಯವಾದ ಬಾಡಿವರ್ಕ್ ಅನ್ನು ಹೊಂದಿದೆ ಮತ್ತು ಡ್ಯುಯಲ್ ಹೆಡ್‌ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿದೆ. ಇದನ್ನು ಹೆಚ್ಚು ಅಗ್ರೇಸಿವ್ ಲುಕ್ ಆಗಿ ವಿನ್ಯಾಸಗೊಳಿಸಲಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಈ ಹೊಸ ಯಮಹಾ ಫೋರ್ಸ್ 2.0 ಸ್ಕೂಟರ್ ನಲ್ಲಿ 155 ಸಿಸಿ ಸಿಂಗಲ್ ಸಿಲಿಂಡರ್ SOHC VVA ಫ್ಯೂಯಲ್-ಇಂಜೆಕ್ಟೆಡ್ ಲಿಕ್ವಿಡ್ ಕೂಲ್ಡ್ ಎಂಜಿನ್ ಅನ್ನು ಬಳಸಲಾಗಿದೆ. ಈ ಎಂಜಿನ್ 15 ಬಿಹೆಚ್‌ಪಿ ಪವರ್ ಮತ್ತು 13.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಏರೋಕ್ಸ್ 155 ರಂತೆಯೇ ಇದೆ

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಈ ಪವರ್‌ಟ್ರೇನ್ ಫೋರ್ಸ್ 2.0 ಗೆ ಖಂಡಿತವಾಗಿಯೂ ಹೊಸದು ಮತ್ತು ಇದು ಮ್ಯಾಕ್ಸಿ ಸ್ಕೂಟರ್‌ನ ಕಾರ್ಯಕ್ಷಮತೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಸ್ಕೂಟರ್‌ನ ಹಾರ್ಡ್‌ವೇರ್ ಕಾನ್ಫಿಗರೇಶನ್‌ಗಳಲ್ಲಿ ಯಮಹಾ ಕೆಲವು ಬದಲಾವಣೆಗಳನ್ನು ಮಾಡಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಯಮಹಾ ಫೋರ್ಸ್ 2.0 ನಲ್ಲಿ ಹೊಸ ಪ್ಲಾಟ್‌ಫಾರ್ಮ್ ಅನುಪಾತಗಳನ್ನು ಬದಲಿಸಿದೆ ಹಾಗೂ ವೀಲ್‌ಬೇಸ್ ಅನ್ನು 65 ಎಂಎಂ ಕಡಿಮೆ ಮಾಡಲಾಗಿದೆ ಮತ್ತು ಸಮತಟ್ಟಾದ ಸೀಟ್ ಉಪಸ್ಥಿತಿಯು ಎತ್ತರವು 10 ಎಂಎಂ ನಿಂದ 815 ಎಂಎಂ ವರೆಗೆ ಹೆಚ್ಚಿಸಿದೆ. ಪ್ರೀಮಿಯಂ ಸ್ಕೇಲ್‌ನಲ್ಲಿ ಇರಿಸಲಾಗಿರುವ ಯಮಹಾ ಫೋರ್ಸ್ 2.0 ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಮತ್ತು 5.1 ಇಂಚಿನ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಅನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಪ್ರಿಲೋಡ್‌ಗಾಗಿ ಹೊಂದಾಣಿಕೆ ಮಾಡಬಹುದಾದ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳು ಈಗ ಲಭ್ಯವಿರುವುದರಿಂದ ಸಸ್ಪೆಂಕ್ಷನ್ ಗೊಳಿಸುವಿಕೆಯನ್ನು ಸಹ ಪರಿಷ್ಕರಿಸಲಾಗಿದೆ.ದರೆ ಮುಂಭಾಗವು ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಪಡೆಯುತ್ತದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 267 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ, ಯಮಹಾ ಫೋರ್ಸ್ 2.0 ಸ್ಕೂಟರ್ 45 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ,

ಇನ್ನು ಈ ಸ್ಕೂಟರ್ ನಲ್ಲಿ ಟ್ರಾಕ್ಷನ್ ಕಂಟ್ರೋಲ್, ಸೈಲೆಂಟ್ ಸ್ಟಾರ್ಟರ್ ಮತ್ತು ಎಕ್ಸ್ಟನಲ್ ಫ್ಯೂಯಲ್ ಕ್ಯಾಪ್ ಅನ್ನು ಒಳಗೊಂಡಿದೆ. 2021ರ ಯಮಹಾ ಫೋರ್ಸ್ 155 ಸಿಸಿ ಸ್ಕೂಟರ್ ಹ್ಯಾಲೊಜೆನ್ ಹೆಡ್ ಲ್ಯಾಂಪ್ ಮತ್ತು ಟರ್ನ್ ಇಂಡೀಕೆಟರ್ಸ್ ಪಡೆಯುತ್ತದೆ. ಇನ್ನು ಏರೋಕ್ಸ್ 155 ನಂತಹ ಬ್ಲೂಟೂತ್ ಕನೆಕ್ಟಿವಿಯೊಂದಿಗೆ ಯಮಹಾದ ವೈ-ಕನೆಕ್ಟ್ ಪ್ಲಾಟ್‌ಫಾರ್ಮ್‌ನೊಂದಿಗೆ ಬರುವುದಿಲ್ಲ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಯಮಹಾ ಫೋರ್ಸ್ 2.0 ಸ್ಕೂಟರ್ ಭಾರತದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಏರಾಕ್ಸ್ 155 ಮ್ಯಾಕ್ಸಿ ಸ್ಕೂಟರ್ ಅನ್ನು ಆಧರಿಸಿದೆ, ಹೊಸ ಯಮಹಾ ಏರೋಕ್ಸ್ ಮ್ಯಾಕ್ಸಿ ಸ್ಕೂಟರ್ ಅನ್ನು ರೇಸಿಂಗ್ ಬ್ಲೂ ಮತ್ತು ಗ್ರೇ ವರ್ಮಿಲಿಯನ್ ಎಂಬ ಎರಡು ರೀತಿಯ ಬಣ್ಣಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ ಬೆಲೆಯು ರೂ.1.29 ಲಕ್ಷಗಳಾದರೆ, ಇದರ ಮೋಟೋ ಜಿಪಿ ಎಡಿಷನ್ ಮಾದರಿಗೆ ರೂ.1.30 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಜಪಾನಿನ ತಯಾರಕರು ಖಂಡಿತವಾಗಿಯೂ ತನ್ನ 125 ಸಿಸಿ ಸ್ಕೂಟರ್ ಪೋರ್ಟ್ಫೋಲಿಯೊವನ್ನು ಬಲಪಡಿಸುತ್ತಿದ್ದಾರೆ ಏಕೆಂದರೆ ಫಾಸಿನೋ ಮತ್ತು ರೇ ಜೆಡ್ಆರ್ ಎಫ್ಐ ಹೈಬ್ರಿಡ್ ಆವೃತ್ತಿಗಳನ್ನು ಇತ್ತೀಚೆಗೆ ಪರಿಚಯಿಸಲಾಯಿತು.ಏರಾಕ್ಸ್ 155 ಭಾರತೀಯ ಮಾರುಕಟ್ಟೆಯಲ್ಲಿ 150-160 ಸಿಸಿ ಪ್ರೀಮಿಯಂ ಸ್ಕೂಟರ್ ಜಾಗಕ್ಕೆ ಬ್ರಾಂಡ್‌ನ ಮೊದಲ ಪ್ರಯತ್ನವಾಗಿದೆ.ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾಗಿ ಆಗ್ನೇಯ ಏಷ್ಯಾದ ದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ ಮತ್ತು ಏರೋಕ್ಸ್ ನೇಮ್‌ಪ್ಲೇಟ್ ಯುರೋಪ್‌ನಲ್ಲಿ 1997 ರಿಂದ ಲಭ್ಯವಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಹಲವು ಮಾರುಕಟ್ಟೆಗಳಲ್ಲಿ ವಿವಿಧ ಎಂಜಿನ್ ಸಾಮರ್ಥ್ಯಗಳಲ್ಲಿ ಮಾರಾಟವಾಗಿದೆ. ಭಾರತದಲ್ಲಿ ಬಿಡುಗಡೆಗೊಂಡ ಈ ಹೊಸ ಯಮಹಾ ಏರೋಕ್ಸ್ 155 ಸ್ಕೂಟರ್ 1,980 ಎಂಎಂ ಉದ್ದ, 700 ಎಂಎಂ ಅಗಲ ಮತ್ತು 1,150 ಎಂಎಂ ಎತ್ತರದ ವೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಸ್ಕೂಟರ್ ಆರ್15 ವಿ3 ಬೈಕ್ ಗಿಂತ 25 ಎಂಎಂ ಉದ್ದದ ವೀಲ್‌ಬೇಸ್ ಹೊಂದಿದೆ. ಒಟ್ಟು ವಾಹನದ ತೂಕವು 276 ಕಿಲೋಗ್ರಾಂಗಳಷ್ಟಿದೆ ಮತ್ತು ಹೆಸರೇ ಸೂಚಿಸುವಂತೆ ಇದು ಆರ್15 ವಿ3 ಫೇರ್ಡ್ ಸೂಪರ್ ಸ್ಪೋರ್ಟ್ ಬೈಕ್ ನೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ.

ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಂಡ Yamaha Force 2.0 ಸ್ಕೂಟರ್

ಇನ್ನು ಯಮಹಾ ಮೋಟಾರ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ. ಇತ್ತೀಚೆಗೆ ಫ್ಯಾಸಿನೋ ಎಫ್ಐ ಮತ್ತು ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಮಾದರಿಗಳಲ್ಲೂ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಿತ್ತು. ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯು ಏರೋಕ್ಸ್ ಮ್ಯಾಕ್ಸಿ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿರುವುದರಿಂದ ಫೋರ್ಸ್ 2.0 ಸ್ಕೂಟರ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿಲ್ಲ.

Source: Yamaha Motor Taiwan/YouTube

Most Read Articles

Kannada
Read more on ಯಮಹಾ yamaha
English summary
Yamaha launched new force 155cc scooter design engine details
Story first published: Wednesday, October 20, 2021, 12:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X