ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಜಪಾನ್ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ಮೋಟಾರ್ ತನ್ನ ಆರ್15ಎಸ್ ವಿ3 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಆರ್15ಎಸ್ ವಿ3(Yamaha R15S V3) ಬೈಕ್ ಬೆಲೆಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1,57,600 ಆಗಿದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಈ ಹೊಸ ಯಮಹಾ ಆರ್15ಎಸ್ ವಿ3 ಬೈಕ್ ಹೆಚ್ಚು ಕೈಗೆಟುಕುವ ದರದ ಸ್ಪೋರ್ಟ್ಸ್ ಬೈಕ್ ಆಗಿದೆ. ಮೊದಲು ಆರ್15ಎಸ್ ನೇಮ್‌ಪ್ಲೇಟ್ ಅನ್ನು ಮೊದಲ ತಲೆಮಾರಿನ ಆರ್15 ಅನ್ನು ಹೆಚ್ಚು ಟೋನ್-ಡೌನ್ ಆವೃತ್ತಿಯಾಗಿ ಬಳಸಲಾಗುತ್ತಿತ್ತು ಮತ್ತು ಈಗ ಅದು ಬಹುತೇಕ ಒಂದೇ ರೀತಿಯ ಗುರುತನ್ನು ಹೊಂದಿದೆ. ಈ ಹೊಸ ಬೈಕ್ ಅನ್ನು ವೈಜೆಡ್ಎಫ್-ಆರ್15 ವಿ3.0 ಬೈಕಿಗೆ ಹೋಲಿಸಿದರೆ ದೊಡ್ಡ ವ್ಯತ್ಯಾಸವೆಂದರೆ ಸ್ಪ್ಲಿಟ್ ಟೈಪ್ ಸೀಟ್ ಸೆಟಪ್ ಅನ್ನು ಸಿಂಗಲ್-ಪೀಸ್ ಯೂನಿಟ್ ಪರವಾಗಿ ಡಿಚ್ ಮಾಡಲಾಗಿದೆ ಮತ್ತು ಇದನ್ನು ರೇಸಿಂಗ್ ಬ್ಲೂ ಎಂಬ ಒಂದೇ ಬಣ್ಣದಲ್ಲಿ ನೀಡಲಾಗಿದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಕೆಲವೇ ತಿಂಗಳುಗಳ ಹಿಂದೆ, ಯಮಹಾ ನಾಲ್ಕನೇ ತಲೆಮಾರಿನ ವೈಜೆಡ್ಎಫ್-ಆರ್15ಎಸ್ ವಿ4 ಅನ್ನು ಪರಿಚಯಿಸಿತು ಮತ್ತು ಇದು ಅಂತರರಾಷ್ಟ್ರೀಯವಾಗಿ ಮಾರಾಟವಾದ ಇತ್ತೀಚಿನ ಆರ್ ಮಾದರಿಗಳಿಂದ ವಿನ್ಯಾಸ ಸ್ಫೂರ್ತಿಯನ್ನು ಪಡೆದುಕೊಂಡಿತು.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಹೊಸ ಯಮಹಾ ಆರ್15ಎಸ್ ವಿ3 ಬೈಕಿನಲ್ಲಿ ಪರಿಚಿತ 155 ಸಿಸಿ ಸಿಂಗಲ್-ಸಿಲಿಂಡರ್ ಫ್ಯೂಯಲ್-ಇಂಜೆಕ್ಟೆಡ್ SHOC ಲಿಕ್ವಿಡ್-ಕೂಲ್ಡ್ ನಾಲ್ಕು-ವಾಲ್ವ್ಡ್ ಎಂಜಿನ್ ಜೊತೆಗೆ ವಿವಿಎ (ವೇರಿಯಬಲ್ ವಾಲ್ವ್ ಆಕ್ಚುಯೇಶನ್) ತಂತ್ರಜ್ಞಾನವನ್ನು ಬಳಸುತ್ತದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಈ ಎಂಜಿನ್ 10,000 ಆರ್‌ಪಿಎಂನಲ್ಲಿ 18.34 ಬಿಹೆಚ್‍ಪಿ ಪವರ್ ಮತ್ತು 8,500 ಆರ್‌ಪಿಎಂನಲ್ಲಿ 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನು ಹೊಂದಿದೆ. ಇದು ಆರ್15 ವಿ4 ಬೈಕಿನ ರೀತಿ ಬಹುತೇಕ ಕಾರ್ಯಕ್ಷಮತೆಯನ್ನು ಹೊಂದಿದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಹೊಸ ಯಮಹಾ ಆರ್15ಎಸ್ ವಿ3 ಬೈಕಿನಲ್ಲಿ ಮಲ್ಟಿ-ಫಂಕ್ಷನ್ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಡ್ಯುಯಲ್-ಚಾನೆಲ್ ಎಬಿಎಸ್, ಎಂಜಿನ್ ಕಟ್-ಆಫ್ ಫಂಕ್ಷನ್‌ನೊಂದಿಗೆ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಡ್ಯುಯಲ್-ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಲಂಬವಾದ ಎಲ್ಇಡಿ ಟೈಲ್ ಲ್ಯಾಂಪ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರೊಂದಿಗೆ ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಂ, ಹಿಂಬದಿಯ ಟೈರ್ ಹಗ್ಗರ್, ಬ್ಲ್ಯಾಕ್ ಅಲಾಯ್ ವ್ಹೀಲ್ ಗಳು ಮತ್ತು ರಿವರ್ಸ್ ವಿಂಡ್‌ಸ್ಕ್ರೀನ್ ಇನ್ಕ್ಲೈನೆಂಡ್ ಅನ್ನು ಒಳಗೊಂಡಿದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಹೊಸ ಯಮಹಾ ಆರ್15ಎಸ್ ವಿ3 ಬೈಕ್ ಡೆಲ್ಟಾಬಾಕ್ಸ್ ಫ್ರೇಮ್‌ನಿಂದ ಆಧಾರವಾಗಿರುವುದನ್ನು ಮುಂದುವರೆಸಿದೆ ಮತ್ತು ಅಲ್ಯೂಮಿನಿಯಂ ಸ್ವಿಂಗರ್ಮ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಹೊಸ ಬೈಕಿನಲ್ಲಿ ಪ್ರಮುಖ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಅಳವಡಿಸಿದ್ದಾರೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಇನ್ನು ಈ ಯಮಹಾ ಆರ್15ಎಸ್ ವಿ3 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಬಿಡುಗಡೆಯ ಸಂದರ್ಭದಲ್ಲಿ, ಯಮಹಾ ಮೋಟಾರ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷರಾದ ಮೊಟೊಫ್ಯೂಮಿ ಶಿಟಾರಾ ಅವರು ಮಾತನಾಡಿ, ವೈಜೆಡ್ಎಫ್-ಆರ್15 ತನ್ನ ಆವೃತ್ತಿ 3.0 ರಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ 150 ಸಿಸಿ ಸೂಪರ್‌ಸ್ಪೋರ್ಟ್ ವಿಭಾಗದಲ್ಲಿ ಅತ್ಯಂತ ರೋಮಾಂಚನಕಾರಿ ಮಾಡೆಲ್ ಎಂದು ಸಾಬೀತುಪಡಿಸಿದ್ದರಿಂದ ಭಾರಿ ಯಶಸ್ಸನ್ನು ಕಂಡಿದೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

YZF-R15 V4 ಭಾರತದಾದ್ಯಂತ ಗ್ರಾಹಕರಿಂದ ಹೆಚ್ಚು ಮೆಚ್ಚುಗೆ ಪಡೆದಿದ್ದರೂ, R15 ನ ರೇಸಿಂಗ್ ಡಿಎನ್‌ಎಯಲ್ಲಿ ರಾಜಿ ಮಾಡಿಕೊಳ್ಳದೆಯೇ ಗ್ರಾಹಕರು ಒಂದು ಪಿಲಿಯನ್‌ನೊಂದಿಗೆ ಪ್ರಯಾಣಿಸಲು ಹೆಚ್ಚು ಕಾರ್ಯಸಾಧ್ಯವಾದ ಆಯ್ಕೆಯನ್ನು ಹುಡುಕುತ್ತಿದ್ದಾರೆ ಎಂದು ನಮ್ಮ ಸಂಶೋಧನೆಯು ತೋರಿಸಿದೆ. ಯಮಹಾದಲ್ಲಿ, ನಮ್ಮ ಗ್ರಾಹಕರ ಬೇಡಿಕೆಯನ್ನು ನಾವು ಯಾವಾಗಲೂ ಕೇಳುತ್ತಿದ್ದೇವೆ ಮತ್ತು ಆ ಬೇಡಿಕೆಗಳನ್ನು ಪೂರೈಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ. ಆದ್ದರಿಂದ, ಯುನಿಬಾಡಿ ಸೀಟ್‌ನೊಂದಿಗೆ R15S V3 ಸ್ಪಷ್ಟವಾಗಿತ್ತು ಎಂದು ಹೇಳಿದ್ದಾರೆ.

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಯಮಹಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯ ಬೈಕ್‌ಗಳನ್ನು ಬಿಡುಗಡೆಗೊಳಿಸಲು ಯೋಜಿಸುತ್ತಿದೆ. ಇದೀಗ ಯಮಹಾ ಕಂಪನಿಯು ಭಾರತದಲ್ಲಿ ವೈಜೆಡ್ಎಫ್-ಆರ್9(YZF-R9) ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ನೋಂದಾಯಿಸಿದೆ. ಕುತೂಹಲಕಾರಿಯಾಗಿ, ಅದೇ ವೈಜೆಡ್ಎಫ್-ಆರ್9 ಹೆಸರಿಗಾಗಿ ಟ್ರೇಡ್‌ಮಾರ್ಕ್ ಅನ್ನು ಪ್ರಪಂಚದಾದ್ಯಂತ ಸಾಕಷ್ಟು ಇತರ ದೇಶಗಳಲ್ಲಿಯು ಕೂಡ ಸಲ್ಲಿಸಲಾಗಿದೆ. ಯಮಹಾ ವೈಜೆಡ್ಎಫ್-ಆರ್9 ಸೂಪರ್‌ಸ್ಪೋರ್ಟ್ ಬೈಕ್ ಎಂದು ನಿರೀಕ್ಷಿಸಲಾಗಿದೆ, ಇದು ಈ ವರ್ಷದ ಆರಂಭದಲ್ಲಿ ಕೂಲಂಕುಷ ಪರೀಕ್ಷೆಗೆ ಒಳಗಾಯಿತು

ಕೈಗೆಟುಕುವ ದರದಲ್ಲಿ ಹೊಸ Yamaha R15S V3 ಬೈಕ್ ಬಿಡುಗಡೆ

ಇದು 889 ಸಿಸಿ ಲಿಕ್ವಿಡ್-ಕೂಲ್ಡ್, ಇನ್‌ಲೈನ್-3 ಎಂಜಿನ್‌ ಅನ್ನು ಒಳಗೊಂಡಿದೆ. ಈ ಎಂಜಿನ್ 119 ಬಿಹೆಚ್‍ಪಿ ಪವರ್ ಮತ್ತು 93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಯಮಹಾ ನಿಜವಾಗಿಯೂ ಈ ವೈಜೆಡ್ಎಫ್-ಆರ್9 ಸೂಪರ್‌ಸ್ಪೋರ್ಟ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಗೆ ತಂದರೆ, ಅದು ಸಿಬಿಯು ಮಾರ್ಗದಲ್ಲಿ ತರಬಹುದು. ಹೀಗಾಗಿ, ಬೆಲೆಯು ದುಬಾರಿಯಾಗಿರುತ್ತದೆ. ಇನ್ನು ಹೊಸದಾಗಿ ಬಿಡುಗಡೆಗೊಂಡ ಯಮಹಾ ಆರ್15ಎಸ್ ವಿ30 ಬೈಕ್ ಹೆಚ್ಚು ಕೈಗೆಟುಕುವ ದರದ ಸ್ಪೋರ್ಟ್ಸ್ ಬೈಕ್ ಆಗಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
Read more on ಯಮಹಾ yamaha
English summary
Yamaha launched new r15s v3 in india price features details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X