RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಯಮಹಾ ಮೋಟಾರ್(Yamaha motor india) ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಮುಖ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಪ್ರಮುಖ ದ್ವಿಚಕ್ರ ವಾಹನಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಪರಿಚಯಿಸುತ್ತಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಕಳೆದ ತಿಂಗಳ ಹಿಂದಷ್ಟೇ ಫ್ಯಾಸಿನೋ ಎಫ್ಐ(Fascino Fi) ಮಾದರಿಯನ್ನು ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ ರೇ ಜೆಡ್ಆರ್ ಎಫ್ಐ(RayZR Fi) ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ(RayZR Street Rally Fi) ಮಾದರಿಗಳಲ್ಲೂ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪರಿಚಯಿಸಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ನವೀಕೃತ ರೇ ಜೆಡ್ಆರ್ ಎಫ್ಐ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಸ್ಕೂಟರ್ ಮಾದರಿಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 76,830ಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 83,830 ಬೆಲೆ ಹೊಂದಿವೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ರೇ ಜೆಡ್ಆರ್ ಎಫ್ಐ ಮಾದರಿಯಲ್ಲಿ ಡ್ರಮ್(ರೂ.76,830) ಮತ್ತು ಡಿಸ್ಕ್(ರೂ.79,830) ಮಾದರಿಗಳನ್ನು ನೀಡಲಾಗಿದ್ದು, ಸ್ಪೋರ್ಟಿ ವಿನ್ಯಾಸದ ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಎಫ್ಐ ಹೈಬ್ರಿಡ್ ಆವೃತ್ತಿಯು ಸಿಂಗಲ್ ಮಾದರಿಯೊಂದಿಗೆ ರೂ. 83,830 ಬೆಲೆ ಹೊಂದಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಯಮಹಾ ಕಂಪನಿಯು ಎರಡು ಸ್ಕೂಟರ್ ಮಾದರಿಗಳಲ್ಲೂ 125 ಸಿಸಿ ಬ್ಲೂ ಕೋರ್ ಎಂಜಿನ್ ಆಯ್ಕೆ ಹೊಂದಿದ್ದು, 8.2 ಬಿಎಚ್‌ಪಿ ಮತ್ತು 10.3 ಎನ್ಎಂ ಟಾರ್ಕ್‌ನೊಂದಿಗೆ ಹೈಬ್ರಿಡ್ ತಂತ್ರಜ್ಞಾನವು ಇಂಧನ ದಕ್ಷತೆಗೆ ಸಹಕಾರಿಯಾಗಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

125 ಸಿಸಿ ಫ್ಯೂಲ್ ಇಂಜೆಕ್ಷೆಡ್ ಎಂಜಿನ್‌‌ನಲ್ಲಿ ಹೊಸದಾಗಿ ಜೋಡಣೆ ಮಾಡಲಾಗಿರುವ ಸ್ಟಾರ್ಟರ್ ಮೋಟಾರ್ ಜನರೇಟರ್ (ಎಸ್‌ಎಂಜಿ) ತಂತ್ರಜ್ಞಾನವು ಇಂಧನ ದಕ್ಷತೆಗೆ ಸಾಕಷ್ಟು ಸಹಕಾರಿಯಾಗಿದ್ದು, ಹೈಬ್ರಿಡ್ ತಂತ್ರಜ್ಞಾನವು ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸಲಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಸ್ಕೂಟರ್ ನಿಲುಗಡೆಯಾಗಿ ಸ್ಟಾರ್ಟ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಪವರ್ ಅಸಿಸ್ಟ್ ಆಗಿ ಸಹಕರಿಸುವ ಹೊ ಹೈಬ್ರಿಡ್ ತಂತ್ರಜ್ಞಾನವು ಎಂಜಿನ್ ಆರಂಭದಲ್ಲಿನ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗುತ್ತದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಎಂಜಿನ್ ಸ್ಟಾರ್ಟ್ ಮಾಡಿದ ನಂತರ ಕೆಲವು ಸೆಕೆಂಡುಗಳ ಕಾಲ ಕಾರ್ಯನಿರ್ವಹಿಸಿ ಸ್ವಯಂಚಾಲಿತವಾಗಿ ಸಂಪರ್ಕ ಕಡೆದುಕೊಳ್ಳುವ ಹೈಬ್ರಿಡ್ ತಂತ್ರಜ್ಞಾನವು ಟ್ರಾಫಿಕ್ ದಟ್ಟಣೆಯ ಸಂದರ್ಭದಲ್ಲಿ ಸಾಕಷ್ಟು ಸಹಕಾರಿಯಾಗಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ವಾಹನ ದಟ್ಟಣೆಯ ಸಂದರ್ಭದಲ್ಲಿ ವಾಹನಗಳನ್ನು ಪದೇ ಪದೇ ಎಂಜಿನ್ ಆನ್ ಮತ್ತು ಆಫ್ ಮಾಡಿದಾಗ ಆಗುವ ಇಂಧನ ವ್ಯರ್ಥವು ಮೈಲೇಜ್‌ಗೆ ಹೊಡೆತ ನೀಡಲಿದ್ದು, ಯಮಹಾ ಹೊಸ ತಂತ್ರಜ್ಞಾನವು ಇಂಧನ ವ್ಯರ್ಥ ತಡೆದು ದಕ್ಷತೆಯನ್ನು ಹೆಚ್ಚಿಸಲು (ಪ್ರತಿ ಲೀಟರ್‌ಗೆ 55-60 ಕಿ.ಮೀ) ಸಹಕಾರಿಯಾಗುತ್ತದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಸ್ಕೂಟರ್ ಆನ್ ಮಾಡಿದಾಗ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್‌ನಲ್ಲಿ ಇಂಡಿಕೇಟರ್ ಮೂಲಕ ನಿಮಗೆ ಸೂಚಿಸಲಿದ್ದು, ಕೆಲವು ಸೆಕೆಂಡುಗಳ ನಂತರ ಹೈಬ್ರಿಡ್ ಎಂಜಿನ್ ಇಂಡಿಕೇಟರ್ ಲೈಟ್ ಆಫ್ ಆಗುತ್ತದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಇನ್ನು 125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆಯು ಯಮಹಾ ಸ್ಕೂಟರ್ ಮಾದರಿಗಳಿಗೆ ಸಲ್ಲಲಿದ್ದು, ಜೊತೆಗೆ ಹೊಸ ಸ್ಕೂಟರ್‌ನಲ್ಲಿ ನೀಡಲಾಗಿರುವ ಎಂಜಿನ್ ಕಟ್ ಆಫ್ ಸ್ವಿಚ್ ತಂತ್ರಜ್ಞಾನವು ಸೈಡ್ ಸ್ಟ್ಯಾಂಡ್ ತೆಗೆಯದ ಹೊರತು ಸ್ಕೂಟರ್ ಚಾಲನೆ ಮಾಡಲು ಸಾಧ್ಯವಿಲ್ಲರುವುದು ಕೂಡಾ ಪ್ರಮುಖ ಫೀಚರ್ ಎನ್ನಬಹುದು.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಹಾಗೆಯೇ 2021ರ ರೇ ಜೆಡ್ಆರ್ ಮತ್ತು ರೇ ಜೆಡ್ಆರ್ ಸ್ಟ್ರೀಟ್ ರ‍್ಯಾಲಿ ಮಾದರಿಯಲ್ಲಿ ಯಮಹಾ ಕಂಪನಿಯು ಅಡ್ವಾನ್ಸ್ ಎಲ್ಇಡಿ ಹೆಡ್‌ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಟೈಲ್‌ಲೈಟ್ ಜೋಡಣೆ ಮಾಡಿದ್ದು, 190 ಎಂಎಂ ಯುಬಿಎಸ್ ಫ್ರಂಟ್ ಡಿಸ್ಕ್ ಬ್ರೇಕ್ ಸಿಸ್ಟಂ, 110 ಎಂಎಂ ಟೈರ್ ಜೋಡಣೆ ಮಾಡಲಾಗಿದೆ.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಯಮಹಾ ಮೋಟಾರ್‌ಸೈಕಲ್ ಕಂಪನಿಯು ಕನೆಕ್ಟ್ ಎಕ್ಸ್ ಕನೆಕ್ಟ್ ಫೀಚರ್ಸ್ ನೀಡಿದ್ದು, ಹೊಸ ಕನೆಕ್ಟ್ ಫೀಚರ್ಸ್‌ನಲ್ಲಿ ಬೈಕ್ ಸವಾರರು ಕಂಪನಿಯೊಂದಿಗೆ ತುರ್ತು ಸೇವೆಗಳಿಗಾಗಿ ಸಂಪರ್ಕಿಸಿ ವೆಹಿಕಲ್ ಲೋಕೆಟ್, ರೈಡಿಂಗ್ ಹಿಸ್ಟರಿ, ಪಾರ್ಕಿಂಗ್ ರೆಕಾರ್ಡ್ ಸೇರಿದಂತೆ ಹಲವಾರು ಸ್ಮಾರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

RayZR Fi ಮತ್ತು RayZR Street Rally Fi ಸ್ಕೂಟರ್‌ಗಳ ಹೈಬ್ರಿಡ್ ವರ್ಷನ್ ಬಿಡುಗಡೆ ಮಾಡಿದ Yamaha

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಮಲ್ಟಿ ಫಂಕ್ಷನ್ ಕೀ, 21 ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಟೋರೇಜ್, ಫೋರ್ಡ್ ಮಾಡಬಹುದಾದ ಹುಕ್, ಸೈಡ್ ಪ್ಯಾನೆಲ್‌ಗಳಲ್ಲಿ 3ಡಿ ಯಮಹಾ ಬ್ಯಾಡ್ಜ್ ಮತ್ತು ಯುಎಸ್‌ಬಿ ಚಾರ್ಜರ್ ಸೇರಿದಂತೆ ಹೊಸ ಸ್ಕೂಟರ್ ರೆಡ್, ಯಮಹಾ ಬ್ಲ್ಯೂ, ಬ್ಲ್ಯಾಕ್, ಡಾರ್ಕ್ ಮ್ಯಾಟೆ, ಯೆಲ್ಲೊ ಕಾಕ್‌ಟೈಲ್ ಸೇರಿದಂತೆ ಒಟ್ಟು 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

Most Read Articles

Kannada
Read more on ಯಮಹಾ yamaha
English summary
Yamaha launches rayzr 125 fi hybrid and ray zr street rally 125 fi hybrid details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X