ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು 2021ರ ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದ ವರದಿಯನ್ನು ಪ್ರಕಟಿಸಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಯಮಹಾ ಕಂಪನಿಯು 55,151 ಯುನಿ‍‍ಟ್‍‍ಗಳನ್ನು ಮಾರಾಟಗೊಳಿಸಿವೆ.

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಕಳೆದ ವರ್ಷದ ಜನವರಿ ತಿಂಗಳಲ್ಲಿ ಯಮಹಾ ಕಂಪನಿಯು 35,913 ಯುನಿ‍‍ಟ್‍‍ಗಳನ್ನು ಮಾರಾಟಗೊಳಿಸಿತ್ತು. ಇದನ್ನು ಕಳೆದ ತಿಂಗಳ ದ್ವಿಚಕ್ರ ಮಾರಾಟವನ್ನು ಹೋಲಿಸಿದರೆ ಯಮಹಾ ಕಂಪನಿಯು ಮಾರಾಟದಲ್ಲಿ ಶೇ.54 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಮತ್ತು ಯಮಹಾ ಬೈಕುಗಳು ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ ಎಂದು ಯಮಹಾ ಕಂಪನಿ ಹೇಳಿಕೊಂಡಿದೆ.

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಯಮಹಾ ಕಂಪನಿಯು ಇತ್ತೀಚೆಗೆ ತನ್ನ ಬೈಕುಗಳಿಗೆ ಬ್ಲೂಟೂತ್ ತಂತ್ರಜ್ಞಾನದೊಂದಿಗೆ ಕನೆಕ್ಟ್ ಎಕ್ಸ್' ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದಲ್ಲದೆ, ವರ್ಚುವಲ್ ಯಮಹಾ ಸ್ಟೋರ್ ಅಥವಾ ಅಮೆಜಾನ್ ಮೂಲಕ ಅಕ್ಸಸರೀಸ್ ಗಳನ್ನು ಮತ್ತು ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗುತ್ತಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ಭಾರತದಲ್ಲಿ ಹೊಸ ಟೆಸ್ಟ್ ರೈಡ್ ಅಭಿಯಾನವನ್ನು ನಡೆಸುತ್ತಿದೆ. ಯಮಹಾ ಕಂಪನಿಯು ತನ್ನ ಸ್ಕೂಟರ್ ಮಾಲೀಕರನ್ನು ತಮ್ಮ ತಿಳಿದಿರುವ ಸಹವರ್ತಿಗಳಿಗೆ ಟೆಸ್ಟ್ ರೈಡ್ ಒದಗಿಸಲು ಆಹ್ವಾನಿಸಲಾಗಿತ್ತು.

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

"ಟೆಸ್ಟ್ ರೈಡ್ ಮೈ ಯಮಹಾ" ಎಂದು ಕರೆಯಲ್ಪಡುವ ಈ ಅಭಿಯಾನವು ತಮ್ಮ ಯಮಹಾ ಸ್ಕೂಟರ್‌ಗಳ ಟೆಸ್ಟ್ ರೈಡ್ ಅನ್ನು ಒದಗಿಸುವ ಗ್ರಾಹಕರಿಗೆ ಬಹುಮಾನ ನೀಡುತ್ತದೆ. ಟೆಸ್ಟ್ ರೈಡ್ ಅಭಿಯಾನಕ್ಕೆ ಅರ್ಹವಾದ ಸ್ಕೂಟರ್ ಮಾದರಿಗಳು ಫ್ಯಾಸಿನೊ 125 ಎಫ್‌ಐ, ರೇ ಜೆಡ್ಆರ್ 125 ಎಫ್‌ಐ ಮತ್ತು ಸ್ಟ್ರೀಟ್ ರ್ಯಾಲಿ 125 ಎಫ್‌ಐ ಅನ್ನು ಒಳಗೊಂಡಿವೆ.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

20 ಟೆಸ್ಟ್ ಡ್ರೈವ್ ರೈಡ್ ಪೂರ್ಣಗೊಳಿಸಿದ ಗ್ರಾಹಕರಿಗೆ ಯಮಹಾ ಕಂಪನಿಯು ರಿವಾರ್ಡ್ ಅನ್ನು ನೀಡಲಾಗುತ್ತದೆ. 50 ಟೆಸ್ಟ್ ಡ್ರೈವ್ ರೈಡ್ ಪೂರ್ಣಗೊಳಿಸಿದ ಗ್ರಾಹಕರಿಗೆ ಕಾರ್ಯಕ್ರಮದ ಅಡಿಯಲ್ಲಿ ಯಮಹಾ ಟೀ ಶರ್ಟ್ ಲಭಿಸುತ್ತದೆ.

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಇನ್ನು ಟಿವಿಎಸ್ ಹಾಗೂ ಬಜಾಜ್ ಸೇರಿದಂತೆ ಹಲವು ಕಂಪನಿಗಳು ತಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಯಮಹಾ ಕಂಪನಿಯು ಸಹ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಸದ್ಯಕ್ಕೆ ಯಮಹಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಭವಿಷ್ಯವು ಎಲೆಕ್ಟ್ರಿಕ್ ವಾಹನಗಳು ಹೆಚ್ಚು ಸದ್ದು ಮಾಡಿದರೂ ಸಹ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಪೆಟ್ರೋಲ್ ಚಾಲಿತ ವಾಹನಗಳನ್ನು ಸಂಪೂರ್ಣವಾಗಿ ಬದಲಿಸಲು ಸಾಧ್ಯವಿಲ್ಲವೆಂದು ಯಮಹಾ ಕಂಪನಿಯು ತಿಳಿಸಿದೆ.

ಜನವರಿ ತಿಂಗಳ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡ ಯಮಹಾ

ಕಂಪನಿಯು ತನ್ನ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಹೆಚ್ಚು ಪರಿಣಾಮಕಾರಿಯಾಗಿಸಲು ಪ್ರಯತ್ನಿಸುತ್ತಿದೆ. ಈ ಕಾರಣಕ್ಕೆ ಕಂಪನಿಯು ಆರ್ ಅಂಡ್ ಡಿಯಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದೆ. ಅಸ್ತಿತ್ವದಲ್ಲಿರುವ ಪೆಟ್ರೋಲ್ ವಾಹನಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಯಮಹಾ ಕಂಪನಿಯು ಉದ್ದೇಶಿಸಿದೆ.

Most Read Articles

Kannada
Read more on ಯಮಹಾ yamaha
English summary
Yamaha Motor India Records A Steep 54% Growth. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X