ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಯಮಹಾ ಮೋಟಾರ್ ಇಂಡಿಯಾ ಕಂಪನಿಯು ತನ್ನ ಹೊಸ ಎಫ್‍‌ಜೆಡ್-ಎಕ್ಸ್ ಬೈಕನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತು. ಇದೀಗ ಯಮಹಾ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಈ ಎಫ್‍‌ಜೆಡ್-ಎಕ್ಸ್ ಬೈಕಿನ ಒಂದೆರಡು ಅಕ್ಸೆಸರೀಸ್ ಹೆಸರು ಮತ್ತು ಬೆಲೆಗಳೊಂದಿಗೆ ಪಟ್ಟಿ ಮಾಡಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಹೊಸ ಯಮಹಾ ಎಫ್‍‌ಜೆಡ್-ಎಕ್ಸ್ ಬೈಕಿನ ಗ್ರಾಹಕರು ಅಕ್ಸೆಸರೀಸ್ ಗಾಗಿ ಆನ್‌ಲೈನ್‌ನಲ್ಲಿ ಅಥವಾ ಆಯ್ದ ಡೀಲರ್‌ಶಿಪ್‌‍ಗಳಲ್ಲಿ ಆರ್ಡರ್ ಮಾಡಿಕೊಳ್ಳಬಹುದು. ನಂತರ ಈ ಅಕ್ಸೆಸರೀಸ್ ಗಳನ್ನು ಆಯ್ದ ಡೀಲರ್‌ಶಿಪ್‌‍ಗಳಿಂದ ಸಂಗ್ರಹಿಸಬಹುದು. ಅಧಿಕೃತ ಅಕ್ಸೆಸರೀಸ್ ಪಟ್ಟಿಯಲ್ಲಿ ಕ್ರೋಮ್-ಫಿನಿಷ್ಡ್ ಮೀರರ್ಸ್, ಹಿಂಭಾಗದ ಫುಟ್‌ರೆಸ್ಟ್, ಸೀಟ್ ಕವರ್, ಟ್ಯಾಂಕ್ ಪ್ಯಾಡ್, ಎಲ್ಇಡಿ ಫ್ಲಶರ್, ಎಂಜಿನ್ ಗಾರ್ಡ್ ಮತ್ತು ಬೈಕ್ ಕವರ್ ಸೇರಿವೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಇದರಲ್ಲಿ ಕ್ರೋಮ್ ಮೀರರ್ಸ್, ಸೀಟ್ ಕವರ್ ಮತ್ತು ಎಲ್ಇಡಿ ಟರ್ನ್-ಸಿಗ್ನಲ್ ಇಂಡಿಕೇಟರ್ಸ್ ಈ ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಲುಕ್ ಅನ್ನು ಹೆಚ್ಚಿಸುತ್ತದೆ. ಹಿಂಭಾಗದ ಫುಟ್‌ರೆಸ್ಟ್, ಟ್ಯಾಂಕ್ ಪ್ಯಾಡ್, ಎಂಜಿನ್ ಗಾರ್ಡ್ ಮತ್ತು ಬೈಕ್ ಕವರ್ ಬೈಕಿಗೆ ಫಂಕ್ಷನಲ್ ಅಪ್ಡೇಟ್ ಗಳಾಗಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಹೊಸ ಯಮಹಾ ಎಫ್‍‌ಜೆಡ್-ಎಕ್ಸ್ ಬೈಕಿನ ಬಗ್ಗೆ ಹೇಳುವುದಾದರೆ, ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಯಮಹಾ ಎಫ್‍‍ಝಡ್-ಎಕ್ಸ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಈ ಹೊಸ ಬೈಕಿನ ಆರಂಭಿಕ ಬೆಲೆಯು ರೂ.1,16,800 ಗಳಾಗಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಹೊಸ ಯಮಹಾ ಎಫ್‌ಜೆಡ್-ಎಕ್ಸ್ ಖಂಡಿತವಾಗಿಯೂ ತನ್ನ ಸ್ಟೈಲಿಂಗ್ ಅನ್ನು ಎಕ್ಸ್‌ಎಸ್‌ಆರ್ 155 ಬೈಕಿನಿಂದ ಎರವಲು ಪಡೆದುಕೊಂಡಿದೆ, ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ ಮತ್ತು ಅನನ್ಯ ಅಲ್ಯೂಮಿನಿಯಂ ಬ್ರಾಕೆಟ್‌ಗಳೊಂದಿಗೆ ವೃತ್ತಾಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಇದರೊಂದಿಗೆ ಟಿಯರ್ ಡ್ರಾಪ್ ಆಕಾರದ ಫ್ಯೂಯಲ್ ಟ್ಯಾಂಕ್, ಸಿಂಗಲ್-ಪೀಸ್ ಟಕ್ ಮತ್ತು ರೋಲ್ ಸೀಟ್, ಅಂಡರ್ ಬೆಲ್ಲಿ ಕೌಲ್ ಮತ್ತು ಕಪ್ಪಾದ ಬಾಡಿ ಪ್ಯಾನೆಲ್‌ಗಳನ್ನು ಸಹ ಒಳಗೊಂಡಿದೆ. ಹಿಂಭಾಗದಲ್ಲಿ ಗ್ರ್ಯಾಬ್ ರೈಲ್ ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಹೊಂದಿದೆ,

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಈ ಹೊಸ ಯಮಹಾ ಎಫ್‍‍ಜೆಡ್-ಎಕ್ಸ್ ಬೈಕಿನಲ್ಲಿ ಎಲ್ಸಿಡಿ ಕ್ಲಸ್ಟರ್ ಅನ್ನು ಹೊಂದಿದೆ. ಇದರಲ್ಲಿ ಸ್ಪೀಡೋ, ಓಡೊ ಮತ್ತು ಟ್ರಿಪ್ ಮೀಟರ್‌ಗಾಗಿ ದೊಡ್ಡ ಫಾಂಟ್‌ಗಳಲ್ಲಿ ವಿವಿಧ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿದ್ದು, ಸ್ಮಾಟ್ ಫೋನ್ ಅನ್ನು ಕನೆಕ್ಟ್ ಮಾಡಬಹುದಾಗಿದೆ. ಯಮಹಾ ಕನೆಕ್ಟ್ ಅಪ್ಲಿಕೇಶನ್ ಫೀಚರ್ ಅನ್ನು ಹೊಂದಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಯಮಹಾ ಎಫ್‍‍ಜೆಡ್-ಎಕ್ಸ್ ಬೈಕಿನಲ್ಲಿ 149 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 12.2 ಬಿಹೆಚ್‌ಪಿ ಮತ್ತು 13.3 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಐದು-ಸ್ಪೀಡ್ ಟ್ರಾನ್ಸ್‌ಮಿಷನ್‌ ಅನ್ನು ಜೋಡಿಸಲಾಗಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಹೊಸ ಯಮಹಾ ಎಫ್‍‍ಜೆಡ್-ಎಕ್ಸ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ನೊಂದಿಗೆ ಪ್ರಿ-ಲೋಡ್ ಹೊಂದಾಣಿಕೆಯನ್ನು ಒಳಗೊಂಡಿದೆ.

ಹೊಸ ಎಫ್‍‌ಜೆಡ್-ಎಕ್ಸ್ ಬೈಕಿನ ಸ್ಟೈ,ಲಿಂಗ್ ಹೆಚ್ಚಿಸಲು ಅಕ್ಸೆಸರೀಸ್ ಪರಿಚಯಿಸಿದ ಯಮಹಾ

ಇನ್ನು ಪ್ರಮುಖವಾಗಿ ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 282 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗುತ್ತದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha FZ-X Accessories Price List. Read In Kannada.
Story first published: Monday, June 21, 2021, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X