ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಭಾರತೀಯ ಮಾರುಕಟ್ಟೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಉತ್ಪಾದನೆ ವೆಚ್ಚ ಹೆಚ್ಚಳವಾಗುತ್ತಿರುವುದಕ್ಕೆ ತಮ್ಮ ವಾಹನಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಇದರ ನಡುವೆ ಯಮಹಾ ಕಂಪನಿಯು ತನ್ನ ಎಫ್‌ಜೆಡ್ 25 ಮತ್ತು ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯನ್ನು ಕಡಿತಗೊಳಿಸಿದ್ದಾರೆ.

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಯಮಹಾ ಕಂಪನಿಯು ತನ್ನ ಎಫ್‌ಜೆಡ್ 25 ಬೈಕಿನ ಬೆಲೆಯನ್ನು ರೂ.18,800 ಮತ್ತು ರೂ.19,300 ಗಳನ್ನು ಕಡಿಮೆ ಮಾಡಿದ್ದಾರೆ. ಇದೀಗ ಯಮಹಾ ಎಫ್‌ಜೆಡ್ 25 ಬೈಕ್ ಬೆಲೆಯು ರೂ.1,34,800 ಗಳಾಗಿದ್ದರೆ. ಎಫ್‌ಜೆಡ್ಎಸ್ 25 ಬೈಕಿನ ಬೆಲೆಯು ರೂ.1,39,300 ಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಇನ್ ಪುಟ್ ವೆಚ್ಚ ಕಡಿಮೆ ಮಾಡುವ ಮೂಲಕ ಬೆಲೆಗಳನ್ನು ನಿರ್ವಹಿಸಲಾಗಿದೆ ಎಂದು ಕಂಪನಿ ಹೇಳುತ್ತದೆ.

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಇನ್ನು ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಕಡಿತಗೊಳಿಸರುವುದನ್ನು ಹೊರತುಪಡಿಸಿ ಇತರ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಕ್ವಾರ್ಟರ್-ಲೀಟರ್ ವಿಭಾಗದ ಈ ಎರಡು ಬೈಕ್‌ಗಳಲ್ಲಿ 249 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಈ 249 ಸಿಸಿ ಎಂಜಿನ್ 20.5 ಬಿಹೆಚ್‌ಪಿ ಮತ್ತು 20.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಈ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಒಳಗೊಂಡಿದೆ. ಇನ್ನು ಈ ಬೈಕ್ ಗಳಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ತಾಂತ್ರಿಕವಾಗಿ ಎಫ್‌ಜೆಡ್25 ಮತ್ತು ಎಫ್‌ಜೆಡ್ಎಸ್25 ಬೈಕ್ ಮಾದರಿಗಳು ಒಂದೇ ಆಗಿದ್ದರೂ ಬೈಕಿನ ಹೊರವಿನ್ಯಾಸದಲ್ಲೂ ತುಸು ಬದಲಾವಣೆಯನ್ನು ಒಳಗೊಂಡಿವೆ. ಎಫ್‌ಜೆಡ್ಎಸ್25 ಬೈಕಿನಲ್ಲಿ ಹೆಚ್ಚುವರಿ ಪ್ರೀಮಿಯಂ ಸೌಲಭ್ಯಗಳಿಂದಾಗಿ ಆಕರ್ಷಕ ಲುಕ್ ಹೊಂದಿದೆ.

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಇನ್ನು ಈ ಬೈಕ್‌ಗಳಲ್ಲಿ ಎಲ್‌ಸಿಡಿ ಇನ್‌ಸ್ಟ್ರುಮೆಂಟ್ ಕ್ಟಸ್ಟರ್, ಎಲ್ಇಡಿ ಹೆಡ್‌ಲ್ಯಾಂಪ್, ಡೇಟೈಮ್ ರನ್ನಿಂಗ್ ಲೈಟ್ ಮತ್ತು ಟೈಲ್ ಲೈಟ್ಸ್, ಎಂಜಿನ್ ಕೌಲ್, ಸೈಡ್ ಸ್ಯಾಂಡ್ ಅಲರ್ಟ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಇನ್ನು ಯಮಹಾ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಬ್ರ್ಯಾಂಡ್ ಪ್ರಸ್ತುತ ಸ್ಪೋರ್ಟ್ಸ್ ಟೂರರ್ ಅನ್ನು ದೊಡ್ಡ ಸಾಮರ್ಥ್ಯದ ಎಂಜಿನ್ ಗಳೊಂದಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟ್ರೇಸರ್ ನೇಮ್ ಪ್ಲೇಟ್ ಅಡಿಯಲ್ಲಿ ಮಾರಾಟ ಮಡಲಾಗುತ್ತಿದೆ.

ಜನಪ್ರಿಯ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯಲ್ಲಿ ಭಾರೀ ಕಡಿತ

ಯಮಹಾ ಭಾರತೀಯ ಮಾರುಕಟ್ಟೆಗೆ ಟ್ರೇಸರ್ ಹೆಸರಿನ ಸ್ಪೋರ್ಟ್ಸ್ ಟೂರರ್ ಬೈಕನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಯಮಹಾ ಎಫ್‌ಜೆಡ್ 25, ಎಫ್‌ಜೆಡ್ಎಸ್ 25 ಬೈಕ್‌ಗಳ ಬೆಲೆಯನ್ನು ಕಡಿತಗೊಳಿಸುವುದರಿಂದ ಈ ಬೈಕ್‌ಗಳನ್ನು ಖರೀದಿಸಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha FZ 25, FZS 25 Prices Update. Read In Kannada.
Story first published: Wednesday, June 2, 2021, 20:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X