ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

1990ರ ದಶಕದಲ್ಲಿ ಭಾರತದಲ್ಲಿದ್ದ ಜನಪ್ರಿಯ ಬೈಕ್‌ಗಳಲ್ಲಿ ಯಮಹಾ ಆರ್‌ಎಕ್ಸ್ 100 ಸಹ ಸೇರಿದೆ. ಆ ಸಮಯದಲ್ಲಿ ಹಲವು ಪ್ರಮುಖ ಕಂಪನಿಗಳ ಬೈಕ್‌ಗಳು ಮಾರಾಟವಾಗಿದ್ದರೂ ಸಹ ಆರ್‌ಎಕ್ಸ್ 100 ಬೈಕ್‌ ಭಾರತೀಯ ಬೈಕ್ ಗ್ರಾಹಕರಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ.

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ಯಮಹಾ ಕಂಪನಿಯು ಈ ಬೈಕಿನ ಮಾರಾಟವನ್ನು ಸ್ಥಗಿತಗೊಳಿಸಿ ಹಲವಾರು ವರ್ಷಗಳೇ ಕಳೆದಿದ್ದರೂ ಆರ್‌ಎಕ್ಸ್ 100 ಅನೇಕ ವರ್ಷಗಳಿಂದ ಸೆಕೆಂಡ್ ಹ್ಯಾಂಡ್ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಉಳಿಸಿಕೊಂಡಿದೆ. ಈಗಲೂ ಸಹ ಈ ಬೈಕ್ ಅನ್ನು ಭಾರತದ ರಸ್ತೆಗಳಲ್ಲಿ ಕಾಣಬಹುದು.

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

2 ಸ್ಟ್ರೋಕ್ ಮಾನ್ಸ್ಟರ್ ಎಂದು ಜನಪ್ರಿಯವಾಗಿದ್ದ ಆರ್‌ಎಕ್ಸ್ 100 ಬೈಕ್ ಅನ್ನು ಯಮಹಾ ಕಂಪನಿಯು ಭಾರತದಲ್ಲಿ ಸುಮಾರು 11 ವರ್ಷಗಳ ಕಾಲ ಮಾರಾಟ ಮಾಡಿತು. ಆರ್‌ಎಕ್ಸ್ 100 ಬೈಕ್ ಜಪಾನ್ ಮೂಲದ ಯಮಹಾ ಕಂಪನಿ ದೇಶಿಯ ಮಾರುಕಟ್ಟೆಗೆ ನೀಡಿದ ವಿಶಿಷ್ಟ ಕೊಡುಗೆಯಾಗಿದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ಆರ್‌ಎಕ್ಸ್ 100 ಬೈಕ್ ಖರೀದಿಸಿದ್ದವರು ಈಗಲೂ ಈ ಸಹ ಬೈಕ್ ಅನ್ನು ಹೊಸದರಂತೆ ಕಾಪಾಡಿಕೊಂಡಿದ್ದಾರೆ. ಹಳೆಯ ಆರ್‌ಎಕ್ಸ್ 100 ಬೈಕ್ ಅನ್ನು ಹೊಸದರಂತೆ ರಿಸ್ಟೋರ್ ಮಾಡಿರುವ ಬಗ್ಗೆ ತೆಲಂಗಾಣದಿಂದ ವರದಿಯಾಗಿದೆ. ಇದರ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ರಿ ಸ್ಟೋರ್ ಮಾಡಲಾದ ಆರ್‌ಎಕ್ಸ್ 100 ಬೈಕ್ ಬೈಕಿನ ವೀಡಿಯೊವನ್ನು ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ. ರಿಸ್ಟೋರ್ ಆದ ಆರ್‌ಎಕ್ಸ್ 100 ಬೈಕ್ ಈಗಷ್ಟೇ ಉತ್ಪಾದನಾ ಘಟಕದಿಂದ ಹೊರ ಬಂದ ಹೊಸ ಬೈಕಿನಂತೆ ಕಾಣುತ್ತದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ಈ ಬೈಕಿನಲ್ಲಿ ಆಧುನಿಕ ಬೈಕ್‌ಗಳ ಸ್ಪರ್ಶವನ್ನು ನೀಡಲಾಗಿದೆ. ಮೆಟಲ್ ಗ್ರೇ ಬಣ್ಣವನ್ನು ಹೊಂದಿರುವ ಈ ಆರ್‌ಎಕ್ಸ್ 100 ಬೈಕಿನ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ.

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ಈ ಬೈಕಿನಲ್ಲಿ ಹೆಡ್‌ಲೈಟ್ ರೌಂಡ್ ಹಾಗೂ ಫ್ರಂಟ್ ಟೆಲಿಸ್ಕೋಪಿಕ್ ಸಸ್ಪೆಂಷನ್'ನಲ್ಲಿ ಸಿಲ್ವರ್ ಕ್ರೋಮ್‌ ಬಣ್ಣಕ್ಕೆ ಬದಲಿಗೆ ಕಪ್ಪು ಬಣ್ಣವನ್ನು ನೀಡಲಾಗಿದೆ. ಎಂಜಿನ್'ಗೂ ಸಹ ಕಪ್ಪು ಬಣ್ಣವನ್ನು ನೀಡಲಾಗಿದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ಎಂಜಿನ್‌ನ ಕೆಳಭಾಗದಲ್ಲಿರುವ ಸೆಫ್ಟಿ ಪ್ಲೇಟ್'ನಲ್ಲಿ ಯಮಹಾ ಲೋಗೋ ನೀಡಲಾಗಿದೆ. ಆರ್‌ಎಕ್ಸ್ 100 ಬೈಕಿನಲ್ಲಿದ್ದ ಸ್ಪೋಕ್ ವ್ಹೀಲ್‌ಗಳನ್ನು ಬದಲಿಸಿ ಅಲಾಯ್ ವ್ಹೀಲ್‌ಗಳನ್ನು ಅಳವಡಿಸಲಾಗಿದೆ.

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ರೇರ್ ಟೇಲ್‌ಲೈಟ್, ಡ್ಯುಯಲ್ ಗ್ಯಾಸ್ ಚಾರ್ಜ್ಡ್ ಸಸ್ಪೆಂಷನ್, ಟರ್ನ್ ಇಂಡಿಕೇಟರ್'ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಆರ್‌ಎಕ್ಸ್ 100 ಬೈಕ್ ಕಸ್ಟಮೈಸ್ ಮಾಡುವ ಮುನ್ನ ಒಳ್ಳೆಯ ಕಂಡಿಷನ್'ನಲ್ಲಿತ್ತು ಎಂಬುದು ಇದರಿಂದ ಸಾಬೀತಾಗಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಈ ಬೈಕಿನ ಕ್ರೋಮ್ ಆಲ್-ಫಿನಿಶ್ ಎಕ್ಸಾಸ್ಟ್ ಪೈಪ್, ಹ್ಯಾಂಡಲ್‌ಬಾರ್ ಹಾಗೂ ಇನ್ಸ್'ಟ್ರೂಮೆಂಟ್ ಕ್ಲಸ್ಟರ್‌ನಲ್ಲಿಯೂ ಯಾವುದೇ ಬದಲಾವಣೆ ಮಾಡಿಲ್ಲ. ಯಮಹಾ ಆರ್‌ಎಕ್ಸ್ 100 ಬೈಕ್ 98 ಸಿಸಿಯ ಸಿಂಗಲ್ ಸಿಲಿಂಡರ್ 2-ಸ್ಟ್ರೋಕ್ ಎಂಜಿನ್ ಹೊಂದಿದೆ.

ಹೊಸ ಬೈಕಿನಂತೆ ರಿಸ್ಟೋರ್ ಆದ ಯಮಹಾ ಆರ್‌ಎಕ್ಸ್ 100 ಬೈಕ್‌

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 11 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 10.39 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಆರ್‌ಎಕ್ಸ್ 100 ಬೈಕಿನಲ್ಲಿ 4 ಸ್ಪೀಡ್ ಟ್ರಾನ್ಸ್'ಮಿಷನ್ ಯುನಿಟ್ ಜೋಡಿಸಲಾಗಿದೆ.

ಚಿತ್ರಕೃಪೆ: ಪೇಂಟಿಂಗ್ ಫ್ರಂ ಸಿಎಂ

Most Read Articles

Kannada
English summary
Yamaha RX 100 bike restored like new bike. Read in Kannada.
Story first published: Thursday, May 13, 2021, 12:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X