ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಜಪಾನ್ ಮೂಲದ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಎಫ್‌ಜೆಡ್-ಎಕ್ಸ್ 150 ಸಿಸಿ ರೆಟ್ರೊ ಶೈಲಿಯ ಬೈಕನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಯಮಹಾ ಕಂಪನಿಯು ಇನ್ನು ಕೆಲವು ಹೊಸ ಮಾದರಿಗಳನ್ನು ಕೂಡ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದೆ. ಬ್ರ್ಯಾಂಡ್ ಪ್ರಸ್ತುತ ಸ್ಪೋರ್ಟ್ಸ್ ಟೂರರ್ ಅನ್ನು ದೊಡ್ಡ ಸಾಮರ್ಥ್ಯದ ಎಂಜಿನ್ ಗಳೊಂದಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಟ್ರೇಸರ್ ನೇಮ್ ಪ್ಲೇಟ್ ಅಡಿಯಲ್ಲಿ ಮಾರಾಟ ಮಡಲಾಗುತ್ತಿದೆ. ಯಮಹಾ ಭಾರತೀಯ ಮಾರುಕಟ್ಟೆಗೆ ಟ್ರೇಸರ್ ಹೆಸರಿನ ಸ್ಪೋರ್ಟ್ಸ್ ಟೂರರ್ ಬೈಕನ್ನು ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ.

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಕಂಪನಿಯು ಟ್ರೇಸರ್ 700 ಮತ್ತು ಟ್ರೇಸರ್ 900 ಅನ್ನು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದೆ.ಟ್ರೇಸರ್ 900 ಏಷ್ಯಾದ ಮಾರುಕಟ್ಟೆಗಳಾದ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಲ್ಲೂ ಮಾರಾಟದಲ್ಲಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಸ್ಪೋರ್ಟ್ಸ್ ಟೂರರ್ ಮತ್ತು ಅಡ್ವೆಂಚರ್ ಬೈಕುಗಳು ಭಾರತೀಯ ಖರೀದಿದಾರರಲ್ಲಿ ಭಾರಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಈ ಬೈಕುಗಳು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ಉತ್ತಮ ದಕ್ಷತಾಶಾಸ್ತ್ರ ಮತ್ತು ದೀರ್ಘ ಪ್ರವಾಸಕ್ಕಾಗಿ ಆರಾಮದಾಯಕವಾಗಿದೆ.

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಹೊಸ ಟ್ರೇಸರ್ 250 ಅನ್ನು ಅಭಿವೃದ್ಧಿಪಡಿಸಬಹುದೆಂದು ವರದಿಯಾಗಿದೆ. ಎಂಟ್ರಿ ಲೆವೆಲ್ ಟೂರರ್ ದೊಡ್ಡ ಟ್ರೇಸರ್ 700 ರೊಂದಿಗೆ ವಿನ್ಯಾಸವನ್ನು ಹಂಚಿಕೊಳ್ಳುವ ನಿರೀಕ್ಷೆಯಿದೆ. ಸೆಮಿ-ಫೇರ್ಡ್ ಬೈಕ್ ದೊಡ್ಡ ವಿಂಡ್‌ಶೀಲ್ಡ್, ಎಂಟಿ- 15 ತರಹದ ಫ್ಯೂಯಲ್ ಟ್ಯಾಂಕ್, ಸ್ಲೀಟ್ ಸೀಟ್ ಮತ್ತು ಇತರ ಅಂಶಗಳನ್ನು ಒಳಗೊಂಡಿರುತ್ತದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಇನ್ನು ಕೆಲವು ವರದಿಗಳ ಪ್ರಕಾರ, ಯಮಹಾ ಕಂಪನಿಯು ಟ್ರೇಸರ್ 700 ಅಥವಾ ಟ್ರೇಸರ್ 900 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು. ಈ ಹೊಸ ಯಮಹಾ ಟ್ರೇಸರ್ 700 ಬೈಕಿನಲ್ಲಿ 73.77 ಬಿಹೆಚ್‌ಪಿ ಪವರ್ ಮತ್ತು 68 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಇನ್ನು ಟ್ರೇಸರ್ 900 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 113.42 ಬಿಹೆಚ್‍ಪಿ ಪವರ್ ಮತ್ತು 87.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಟ್ರೇಸರ್ 700 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಎಪ್ರಿಲಿಯಾ ಟ್ಯುನೊ 660 ಬೈಕಿಗೆ ಪೈಪೋಟಿ ನೀಡುತ್ತದೆ. ಇನ್ನು ಯಮಹಾ ಟ್ರೇಸರ್ 900 ಬೈಕ್ ಭಾರತದಲ್ಲಿ ಬಿಡುಗಡೆಯಾದರೆ ಬಿಎಂಡಬ್ಲ್ಯು ಎಫ್ 900 ಎಕ್ಸ್‌ಆರ್ ಮತ್ತು ಟ್ರಯಂಫ್ ಟೈಗರ್ 850 ಸ್ಪೋರ್ಟ್ ಬೈಕ್ ಗಳಿಗೆ ಪೈಪೋಟಿ ನೀಡುತ್ತದೆ.

ಭಾರತದಲ್ಲಿ ಟ್ರೇಸರ್ ಹೆಸರಿಗಾಗಿ ಹೊಸ ಟ್ರೇಡ್‌ಮಾರ್ಕ್ ನೋಂದಾಯಿಸಿದ ಯಮಹಾ

ಯಮಹಾ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪರ್ಫಾಮೆನ್ಸ್ ಬೈಕ್ ಗಳನ್ನು ಬಿಡುಗಡೆಗೊಳಿಸಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ ಕಂಪನಿಯು ಪರ್ಫಾಮೆನ್ಸ್ ಬೈಕ್ ಗಳನ್ನು ಬಿಡುಗಡೆಗೊಳಿಸಲಿದೆ. ಟ್ರೇಸರ್ ಹೆಸರಿನ ಹೊಸ ಬೈಕಿನ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಬಹುದು.

Most Read Articles

Kannada
Read more on ಯಮಹಾ yamaha
English summary
Yamaha Tracer Name Trademarked. Read In Kannada.
Story first published: Wednesday, May 26, 2021, 12:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X