ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಹೊಸ ಎಮಿಷನ್‌ಗೆ ಅನುಗುಣವಾಗಿ ವಾಹನ ಉತ್ಪಾದನೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದ್ದು, ಯಮಹಾ ಕಂಪನಿಯು ತನ್ನ ದ್ವಿಚಕ್ರ ವಾಹನ ಉತ್ಪನ್ನಗಳಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಅಳವಡಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಪ್ರೀಮಿಯಂ ಸ್ಕೂಟರ್ ವಿಭಾಗದಲ್ಲಿ ಫ್ಯಾಸಿನೋ 125 ಮತ್ತು ಜೆಡ್ಆರ್ ಸರಣಿಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಯಮಹಾ ಇಂಡಿಯಾ ಕಂಪನಿಯು ಶೀಘ್ರದಲ್ಲೇ ತನ್ನ ಪ್ರಮುಖ ಸ್ಕೂಟರ್ ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಫ್ಯಾಸಿನೋ 125 ಮಾದರಿಯಲ್ಲಿ ಮೊದಲ ಬಾರಿಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಜೋಡಣೆ ಮಾಡಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

2020ರಲ್ಲಿ ಫ್ಯಾಸಿನೋ ಮಾದರಿಯನ್ನು 125 ಸಿಸಿ ಫ್ಯೂಲ್ ಇಂಜೆಕ್ಷೆಡ್ ತಂತ್ರಜ್ಞಾನದೊಂದಿಗೆ ಬಿಡುಗಡೆ ಮಾಡಿದ್ದ ಯಮಹಾ ಕಂಪನಿಯು ಇದೀಗ ಉನ್ನತೀಕರಿಸಿದ ಮಾದರಿಯಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಅಭಿವೃದ್ದಿ ಮಾಡಿ ಅನಾವರಣಗೊಳಿಸಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಸ್ಮಾರ್ಟ್ ಮೋಟಾರ್ ಜನರೇಟರ್ (ಎಸ್‌ಎಂಜಿ) ವ್ಯವಸ್ಥೆಯು ಹೊಸ ಫ್ಯಾಸಿನೋ 125 ಹೈಬ್ರಿಡ್ ಮಾದರಿಯ ಇಂಧನ ದಕ್ಷತೆಯನ್ನು ಹೆಚ್ಚಿಸಲು ಮಹತ್ವದ ಪಾತ್ರವಹಿಸಲಿದ್ದು, ಹೈಬ್ರಿಡ್ ತಂತ್ರಜ್ಞಾನ ಸ್ಕೂಟರ್ ಚಾಲನೆಯ ಸಂದರ್ಭದಲ್ಲಿ ಪವರ್ ಅಸಿಸ್ಟ್ ಆಗಿ ಕಾರ್ಯನಿರ್ವಹಿಸುತ್ತದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ನಿಲುಗಡೆಯಾಗಿರುವ ಸ್ಕೂಟರ್ ಆನ್ ಆದ ನಂತರ ಮೂರು ಸೇಕೆಂಡ್‌ಗಳ ಕಾಲ ಎಂಜಿನ್ ಚಾಲನೆಗೆ ಸಹಕರಿಸಲಿದ್ದು, ತದನಂತರ ಸ್ವಯಂಚಾಲಿತವಾಗಿ ಸಂಪರ್ಕ ಕಡೆದುಕೊಳ್ಳುತ್ತದೆ. ಇದು ಎಂಜಿನ್ ಸ್ಟಾರ್ಟ್ ಸಂದರ್ಭದಲ್ಲಿ ಇಂಧನ ದಹಿಸುವಿಕೆಯನ್ನು ಕಡಿಮೆಗೊಳಿಸಲು ಸಹಕಾರಿಯಾಗಿದ್ದು, ಎಂಜಿನ್ ಅನ್ನು ಆನ್ ಮಾಡಿದಾಗ ಪ್ರತಿ ಬಾರಿಯು ಅದು ಕಾರ್ಯನಿರ್ವಹಿಸುವ ಮೂಲಕ ಇಂಧನ ದಕ್ಷತೆಯನ್ನು ಹೆಚ್ಚಿಸುತ್ತದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಟ್ರಾಫಿಕ್ ದಟ್ಟನೆಯ ಸಂದರ್ಭದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಸಾಕಷ್ಟು ಸಹಕಾರಿಯಾಗಲಿದ್ದು, ಸಿಗ್ನಲ್‌ಗಳಲ್ಲಿ ನಿಲುಗಡೆಯಾದಾಗ ಎಂಜಿನ್ ಆಫ್ ಮಾಡಿ ನಂತರ ಆನ್ ಮಾಡುವಾಗ ಆಗಬಹುದಾದ ಇಂಧನ ವ್ಯರ್ಥವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಸ್ಕೂಟರ್ ಆನ್ ಮಾಡಿದಾಗ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಡಿಜಿಟಲ್ ಇನ್‌ಸ್ಟ್ರುಮೆಂಟ್‌ನಲ್ಲಿ ಇಂಡಿಕೇಟರ್ ಸೂಚಿಸಲಿದ್ದು, 125 ಸಿಸಿ ವಿಭಾಗದಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಮೊದಲ ಸ್ಕೂಟರ್ ಎಂಬ ಹೆಗ್ಗಳಿಕೆ ಫ್ಯಾಸಿನೋ 125 ಮಾದರಿಗೆ ಸಲ್ಲುತ್ತದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಸದ್ಯ ಹೊಸ ತಂತ್ರಜ್ಞಾನ ಪ್ರೇರಿತ 2021ರ ಫ್ಯಾಸಿನೋ ಅನಾವರಣಗೊಳಿಸಿರುವ ಯಮಹಾ ಕಂಪನಿಯು ಶೀಘ್ರದಲ್ಲೇ ಹೊಸ ಸ್ಕೂಟರ್ ಬೆಲೆ ಮಾಹಿತಿಯನ್ನು ಹಂಚಿಕೊಳ್ಳಲಿದ್ದು, ಹೊಸ ಸ್ಕೂಟರಿನಲ್ಲಿ ಹೊಸದಾಗಿ ಅಡ್ವಾನ್ಸ್ ಎಲ್ಇಡಿ ಹೆಡ್‌ಲೈಟ್ಸ್, ಡೇ ಟೈಮ್ ರನ್ನಿಂಗ್ ಲೈಟ್ ಮತ್ತು ಎಲ್ಇಡಿ ಟೈಲ್‌ಲೈಟ್ ಸೌಲಭ್ಯವನ್ನು ಜೋಡಿಸಲಾಗಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಜೊತೆಗೆ ಹೊಸ ಸ್ಕೂಟರ್ 190 ಎಂಎಂ ಯುಬಿಎಸ್ ಫ್ರಂಟ್ ಡಿಸ್ಕ್ ಬ್ರೇಕ್ ಸಿಸ್ಟಂ ಜೋಡಣೆ ಮಾಡಿದ್ದು, ಡಿಸ್ಕ್ ಬ್ರೇಕ್ ಆವೃತ್ತಿಯಲ್ಲಿ ಹೆಚ್ಚುವರಿಯಾಗಿ ಯಮಹಾ ಮೋಟಾರ್‌ಸೈಕಲ್ ಕನೆಕ್ಟ್ ಎಕ್ಸ್ ಕನೆಕ್ಟ್ ಫೀಚರ್ಸ್ ನೀಡಿದೆ.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಕನೆಕ್ಟ್ ಎಕ್ಸ್ ಕನೆಕ್ಟೆಡ್ ಫೀಚರ್ಸ್‌ನಲ್ಲಿ ಬೈಕ್ ಸವಾರರು ಕಂಪನಿಯೊಂದಿಗೆ ತುರ್ತು ಸೇವೆಗಳಿಗಾಗಿ ಸಂಪರ್ಕಿಸಬಹುದಲ್ಲದೆ ವೆಹಿಕಲ್ ಲೋಕೆಟ್, ರೈಡಿಂಗ್ ಹಿಸ್ಟರಿ, ಪಾರ್ಕಿಂಗ್ ರೆಕಾರ್ಡ್ ಸೇರಿದಂತೆ ಹಲವಾರು ಸ್ಮಾರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

ಮೈಲ್ಡ್ ಹೈಬ್ರಿಡ್ ಎಂಜಿನ್ ಪ್ರೇರಿತ ಫ್ಯಾಸಿನೋ 125 ಅನಾವರಣಗೊಳಿಸಿದ ಯಮಹಾ ಇಂಡಿಯಾ

ಇನ್ನುಳಿದಂತೆ ಹೊಸ ಸ್ಕೂಟರ್‌ನಲ್ಲಿ ಎಂಜಿನ್ ಕಟ್ ಆಫ್ ಸ್ವಿಚ್, ಮಲ್ಟಿ ಫಂಕ್ಷನ್ ಕೀ, 21 ಲೀಟರ್ ಸಾಮರ್ಥ್ಯ ಅಂಡರ್ ಸೀಟ್ ಸ್ಟೋರೇಜ್, ಫೋರ್ಡ್ ಮಾಡಬಹುದಾದ ಹುಕ್ ಮತ್ತು ಯುಎಸ್‌ಬಿ ಚಾರ್ಜರ್ ಸಹ ಹೊಸ ಸ್ಕೂಟರ್‌ನಲ್ಲಿಯಿರಲಿದೆ.

Most Read Articles

Kannada
Read more on ಯಮಹಾ yamaha
English summary
New Yamaha Fascino 125 Unveiled. Read in Kannada.
Story first published: Friday, June 18, 2021, 16:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X