ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ತಲೆಮಾರಿನ ಇ 01 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನ ಮೂಲ ಮಾದರಿಯನ್ನು ಮೊದಲ ಬಾರಿಗೆ 2019ರ ಟೋಕಿಯೋ ಮೋಟಾರ್ ಶೋದಲ್ಲಿ ಬಹಿರಂಗಪಡಿಸಲಾಗಿತ್ತು.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಅಂದಿನಿಂದ ಯಮಹಾ ಕಂಪನಿಯು ಈ ಸ್ಕೂಟರ್ ಅನ್ನು ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಯಮಹಾದ ಇ 01 ಎಲೆಕ್ಟ್ರಿಕ್ ಸ್ಕೂಟರ್ ಇತರ 125 ಸಿಸಿ ಸ್ಕೂಟರ್‌ಗಳಂತೆ ಶಕ್ತಿಯುತವಾಗಿರಲಿದೆ ಎಂದು ನಂಬಲಾಗಿದೆ. ಈ ಸ್ಕೂಟರ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಬಗೆಗಿನ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಯಮಹಾ ಇ 01 ಸ್ಕೂಟರಿನ ವಿನ್ಯಾಸ

ಕಂಪನಿಯು ಈ ಸ್ಕೂಟರಿನಲ್ಲಿ ಭವಿಷ್ಯದ ವಿನ್ಯಾಸವನ್ನು ನೀಡಿದೆ. ಈ ಸ್ಕೂಟರ್ ಮುಂಭಾಗದಿಂದ ಮ್ಯಾಕ್ಸಿ ಸ್ಕೂಟರ್‌ನಂತೆ ಕಾಣುತ್ತದೆ. ಸೈಡ್ ಪ್ರೊಫೈಲ್ ಮೂಲಕ ಈ ಸ್ಕೂಟರಿನ ವಿನ್ಯಾಸವು ಬಾಕ್ಸ್'ನಂತೆ ಕಾಣುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಈ ಸ್ಕೂಟರ್ ವಿಭಿನ್ನ ವಿನ್ಯಾಸದ ಕರ್ವ್ ಸೀಟ್ ಅನ್ನು ಹೊಂದಿದೆ. ಈ ಸ್ಕೂಟರಿನ ಹ್ಯಾಂಡಲ್‌ಬಾರ್ ಅನ್ನು ಎಲಿವೇಟ್ ಮಾಡಲಾಗಿದೆ. ಈ ಸ್ಕೂಟರ್ ಆರಾಮದಾಯಕ ಸವಾರಿಯನ್ನು ನೀಡುತ್ತದೆ ಎಂದು ಯಮಹಾ ಕಂಪನಿ ಹೇಳಿಕೊಂಡಿದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಫೀಚರ್'ಗಳು

ಯಮಹಾ ಇ 01 ದೊಡ್ಡ ಗಾತ್ರದ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದೆ. ಹೆಡ್‌ಲೈಟ್‌ನ ಮಧ್ಯದಲ್ಲಿ ಚಾರ್ಜಿಂಗ್ ಮಾಡಲು ಸಾಕೆಟ್ ನೀಡಲಾಗಿದೆ. ಅದರ ಮೇಲೆ ಓಪನಿಂಗ್ ಹ್ಯಾಚ್ ಅಳವಡಿಸಲಾಗಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎಲ್ಲಿ ಬೇಕಾದರೂ ಸುಲಭವಾಗಿ ಚಾರ್ಜ್ ಮಾಡಬಹುದು. ಈ ಸ್ಕೂಟರಿನಲ್ಲಿ ಎಲ್‌ಸಿ‌ಡಿ ಇನ್ಸ್'ಟ್ರೂಮೆಂಟ್ ಕ್ಲಸ್ಟರ್, ಸಿಂಗಲ್ ಫ್ರೇಮ್ ಸ್ಟೆಪ್-ಅಪ್ ಪಿಲಿಯನ್ ಸೀಟ್ ಹಾಗೂ ಸ್ಲೀಕ್ ಆದ ಇಂಟಿಗ್ರೇಟೆಡ್ ಎಲ್ಇಡಿ ಟೇಲ್ ಲೈಟ್ ನೀಡಲಾಗಿದೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಈ ಸ್ಕೂಟರಿನ ಹಿಂಭಾಗದಲ್ಲಿರುವ ವಿನ್ಯಾಸವು ಸಾಕಷ್ಟು ಆಕರ್ಷಕವಾಗಿದೆ. ಸ್ಕೂಟರ್‌ನ ಹಿಂಭಾಗವು ಫ್ಯಾಬ್ರಿಕ್ ಕೋಟಿಂಗ್ ಹೊಂದಿದ್ದು ಸೀಟಿನ ಮೂಲಕ ಟೇಲ್‌ಲೈಟ್‌ಗೆ ಸಾಗುತ್ತದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಸದ್ಯಕ್ಕೆ ಯಮಹಾ ಕಂಪನಿಯು ಇ 01 ಸ್ಕೂಟರಿಗೆ ಟ್ರೇಡ್‌ಮಾರ್ಕ್ ಸಲ್ಲಿಸಿದೆ. ಕಂಪನಿಯು ಶೀಘ್ರದಲ್ಲಿಯೇ ಈ ಸ್ಕೂಟರಿನ ಬಿಡುಗಡೆಯ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಗಳಿವೆ.

ಹೊಸ ತಲೆಮಾರಿನ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಿದ ಯಮಹಾ

ಮೂಲಗಳ ಪ್ರಕಾರ ಯಮಹಾ ಕಂಪನಿಯು ಇ ಸರಣಿಯಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಪಾಸೋಲ್, ಇಸಿ -02, ಇಸಿ -03 ಹಾಗೂ ಇಸಿ -05 ಎಲೆಕ್ಟ್ರಿಕ್ ಸ್ಕೂಟರ್‌ಗಳು ಸೇರಿವೆ.

Most Read Articles

Kannada
Read more on ಯಮಹಾ yamaha
English summary
Yamaha unveils next generation electric scooter. Read in Kannada.
Story first published: Sunday, May 9, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X